ವಾಮಂಜೂರು: ಮೇರಿ ಮಾತೆಯ ಜನ್ಮ ದಿನಾಚರಣೆ ಹಬ್ಬದ ಪೂರ್ವಭಾವಿಯಾಗಿ ವಾಮಂಜೂರು ಶ್ರಮಿಕ ಸಂತ ಜೋಸೆಫ್ ಚರ್ಚ್ನಲ್ಲಿ ನಡೆದ ನೊವೆನಾ ಪ್ರಾರ್ಥನೆಯ ಸಂದರ್ಭದಲ್ಲಿ ಮಕ್ಕಳು ಹೂಗಳನ್ನು ಅರ್ಪಿಸಿ ಮೇರಿ ಮಾತೆಗೆ ನಮಿಸಿದರು.
ಅತೀವಂದನೀಯ ಧರ್ಮಗುರುಗಳಾದ ಫಾ|ಸಿಪ್ರಿಯನ್ ಪಿಂಟೊ, ವಂ|ಫಾ|ಜೋನ್ ಫೆರ್ನಾಂಡಿಸ್, ವಂ|ಫಾ|ದೀಪಕ್ ತೋಮಸ್, ವಂ|ಫಾ|ರೋಶನ್ ಲೋಬೊ ಇವರೊಂದಿಗೆ ಅತೀವಂದನೀಯ ಧರ್ಮಗುರುಗಳಾದ ರೆಕ್ಟರ್ ಜೋಸೆಫ್ ಮಾರ್ಟಿಸ್ ಇವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಮಾರು 2000 ಭಕ್ತಾದಿಗಳಿಗೆ ಕಬ್ಬು, ಹಾಗೂ ಪಪ್ಸ್ ಮತ್ತ ತಂಪು ಪಾನಿಯ ವಿತರಿಸಲಾಯಿತು. ಹಬ್ಬದ ಮೊದಲನೆಯ ದಿನದಂದು ಸುಮಾರು 125 ಬಡ ಕುಟುಂಬಗಳಿಗೆ ದಾನಿಗಳಿಂದ ಸ್ವೀಕರಿಸಿದ ಅಕ್ಕಿ, ತೆಂಗಿನಕಾಯಿ ಹಾಗೂ ದವಸ ಧಾನ್ಯಗಳನ್ನು ವಿತರಿಸಲಾಯಿತು.










