ಹಬ್ಬು ಬರೆದಿರುವ ಕೃತಿಗಳು

ನನ್ನನ್ನು ಸಮ್ಮೇಳನದಲ್ಲಿ ಕಡೆಗಣಿಸಲಾಗಿದೆ ,ಸಾಹಿತಿ ಉದಯಕುಮಾರ್ ಹಬ್ಬು ಅಳಲು

ಬಜ್ಪೆ: ನಾನು ಕನ್ನಡಕ್ಕೆ 30 ಕೃತಿಗಳನ್ನು ಬರೆದುಕೊಟ್ಟಿದ್ದೇನೆ. ಆದರೆ ನನ್ನನ್ನು ಯಾರೂ ಗುರುತಿಸುತ್ತಿಲ್ಲ, ಪ್ರೋತ್ಸಾಹಿತ್ತಿಲ್ಲ. ಕಟೀಲಿನಲ್ಲಿ ಜರುಗುತ್ತಿರುವ 20ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ಸ್ಪಷ್ಟವಾಗಿ ಕಡೆಗಣಿಸಲಾಗಿದೆ.

29 bajpe 1

29 bajpe 2ಹೀಗೆಂದು ಹತಾಶೆಯಿಂದ ಪತ್ರಕರ್ತರ ಮುಂದೆ ಅಳಲು ತೋಡಿಕೊಂಡವರು ಹಿರಿಯ ಸಾಹಿತಿ, ಕಿನ್ನಿಗೋಳಿಯ ಮುಂಡ್ಕೂರು ನಿವಾಸಿ ಉದಯ ಕುಮಾರ್ ಹಬ್ಬು. ನನ್ನ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದಕ್ಕೆ ತುಂಬಾ ಹೆಮ್ಮೆ ಎನಿಸಿತ್ತು. ಸ್ಥಳೀಯ ನಿವಾಸಿಯಾದ ನನಗೆ ಸಾಹಿತ್ಯ ಸಮ್ಮೇಳನದಲ್ಲಿ ಸಹಕಾರ, ಸತ್ಕಾರ ಸಿಗಬಹುದದೆಂಬ ಬಹು ನಿರೀಕ್ಷೆ ಇತ್ತು. ಆದರೆ ಸತ್ಕರಿಸುವುದು ಬಿಡಿ, ನನ್ನ ಅಸ್ತಿತ್ವವನ್ನೂ ಗುರುತಿಸದೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಕನ್ನಡಕ್ಕೆ ಬರೋಬ್ಬರಿ 30 ಕೃತಿಗಳನ್ನು ನೀಡಿದ ನನ್ನಂಥಾ ಸಾಹಿತಿಗೆ ಬಂದ ಇಂದ ದೌರ್ಭಾಗ್ಯ ಯಾರಿಗೂ ಕೂಡಾ ಬರಬಾರದು ನೋವಿನಿಂದ ಹೇಳಿಕೊಂಡಿದ್ದಾರೆ. ಉದಯ ಕುಮಾರ್ ಹಬ್ಬು ಅವರು ಮುಂಡ್ಕೂರಿನ ವಿದ್ಯಾವರ್ಧಕ ಕಾಲೇಜಿನ ಉಪನ್ಯಾಸರರಾಗಿದ್ದುಕೊಂಡು, ಬಳಿಕ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಈಗ ನಿವೃತ್ತಿ ಹೊಂದಿರುವ ಅವರು ಆ ಬಳಿಕ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡರು. ಬಿಡುವಿನ ಸಮಯದಲ್ಲಿ ಪತ್ರಿಕೆಗಳಿಗೆ ಬರಹಗಳನ್ನು ಕಳಿಸಿವುದು ಹವ್ಯಾಸವನ್ನಾಗಿ ರೂಢಿಸಿಕೊಂಡರು. ಸದ್ಯಕ್ಕೆ ಬರೋಬ್ಬರಿ ಮೂವತ್ತು ಕೃತಿಗಳನ್ನು ಹೊರತಂದಿದ್ದಾರೆ. ಇವರ ಕೃತಿ ಬಿಡುಗಡೆಗೆ ಯಾವೊಂದೂ ಸಾಹಿತ್ತಿಕ ಸಂಘಟನೆಗಳು ಮನಸ್ಸು ಮಾಡಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಪತ್ರಿಕೆಯ ಮುಂದೆ ತನ್ನ ನೋವನ್ನು ತೋಡಿಕೊಂಡರು.

ಕಟೀಲಿನ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕೃತಿಗಳನ್ನು ವಿತರಣೆ ಮಾಡಲೆಂದು ಮಳಿಗೆಯೊಂದನ್ನು ನಿರ್ಮಿಸಿದ್ದಾರೆ. ಆದರೆ ಸ್ಥಳೀಯನೇ ಆದ ನನ್ನನ್ನು ಸಂಘಟಕರು ಗುರುತಿಸಬಹುದೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಸಂಘಟಕರ ನಿರ್ಲಕ್ಷ್ಯಕ್ಕೆ ನನ್ನ ಮನನೊಂದಿದೆ. ಕೊನೇ ಪಕ್ಷ ಆಮಂತ್ರಣ ಪತ್ರವನ್ನೂ ನನಗೆ ಮುಟ್ಟಿಸಿಲ್ಲ. ಈ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಯಾದ ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನನ್ನಂತಹಾ ದೌಭಾಗ್ರ್ಯ ಬೇರೆ ಯಾರಿಗೂ ಬರಬಾರದು ಎಂದು ಖೇದ ವ್ಯಕ್ತಪಡಿಸಿದರು.
ಇವರು ಬರೆದು ಮುದ್ರಿಸಿದ ಕೃತಿಗಳಿವು, ನಳಪಾಕ(ಸಸ್ಯಹಾರಿ ಅಡುಗೆ ರೆಸಿಪಿಗಳು), ಸ್ವಯಂವರ ಕಲ್ಯಾಣಗಳ ಕಥೆಗಳು, ಸಾಹಿತಯ ಸಮ್ಮೇಳನಾ ಸ್ಮರಣಾ ಹೀಗೆ ಹಲವು ಕೃತಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಅವರು ತ್ಯಕ್ತ ಎಂಬ ಕೃತಿ ಬರೆದಿದ್ದು ಇತ್ತೀಚೆಗಷ್ಟೆ ಹೊರತಂದಿದ್ದಾರೆ.

By suddi9

Leave a Reply

Your email address will not be published. Required fields are marked *