
ದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್(52) ದೆಹಲಿಯ ಹೊಟೇಲ್ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಹಲವಾರು ಸಂಶಯಗಳಿಗೆ ಎಡಮಾಡಿದೆ. ಮೃತ ದೇಹದಲ್ಲಿ ಯಾವುದೇ ತರಚಿದ ಗಾಯಗಳಾಗಲೀ, ಡೆತ್ನೋಟ್ಗಳಾಗಲೀ ಸಿಕ್ಕಿಲ್ಲ. ಇದರಿಂದಾಗಿ ಇದು ಕೊಲೆಯೋ ಆತ್ಮಹತ್ಯೆಯೋ ಎಂದು ಪೋಸ್ಟ್ಮಾರ್ಟಮ್ ವರದಿ ಬಂದ ನಂತರವಷ್ಟೇ ಹೇಳಬಹುದು.
ಸುನಂದಾರಿಗೆ ಗುಣಪಡಿಸಲಾಗದ ರೋಗವಿತ್ತೇ?
ಸುನಂದಾ ಪುಷ್ಕರ್ರವರಿಗೆ ಗುಣಪಡಿಸಲಾಗದ ರೋಗವೊಂದಿತ್ತು ಅದರ ಬಗ್ಗೆ ನನಗೆ ಮಾಹಿತಿ ಇತ್ತು ಎಂದು ಶಶಿ ತರೂರವರ ಗೆಳೆಯ, ಮಾಜಿ ರಾಯಭಾರಿ ಟಿ.ಪಿ. ಶ್ರೀನಿವಾಸನ್ ಹೇಳಿಕೆ ನೀಡಿದ್ದಾರೆ.
ಅವರನ್ನು ಫ್ರಾನ್ಸಿನಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಅದರಿಂದ ಸಂಪೂರ್ಣವಾಗಿ ಗುಣಪಡಿಸಿರಲಾಗಿಲ್ಲ. ಇದರಿಂದಾಗಿ ಅವರು ಬಹಳ ಚಿಂತಾಕ್ರಾಂತರಾಗಿದ್ದರು. ಇತ್ತೀಚೆಗೆ ಅವರು ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆ ಕೂಡಾ ನಡೆಸಿದ್ದರು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸುನಂದ ಪುಷ್ಕರ್ರವರಿಗೆ ಗಣಪಡಿಸಲಾಗದ ಲೂಪಸ್ ಎರಿಥೆಮಟೋಸಸ್(ಅಂಗಾಶಕ್ಕೆ ಸಂಬಂಧಪಟ್ಟ ಖಾಯಿಲೆ) ಎನ್ನುವ ಕಾಯಿಲೆ ಆವರಿಸಿತ್ತು ಎಂದು ಸುದ್ದಿಸಂಸ್ಥೆಯೊಂದು ಹೇಳಿಕೆ ನೀಡಿದೆ.
ಪೋಸ್ಟ್ಮಾರ್ಟಗೆ ತೆರಳಿದ ಸುನಂದಾ ಮೃತದೇಹ:
ನಿಗೂಢವಾಗಿ ಸಾವನ್ನಪ್ಪಿದ ಸುನಂದಾ ಅವರ ಮೃತದೇಹವನ್ನು ಪೋಸ್ಟ್ಮಾರ್ಟಮ್ಗಾಗಿ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ಮಧ್ಯಾಹ್ನ ರವಾಣಿಸಲಿದೆ. ಅಲ್ಲದೆ ಸುನಂದ ತಂಗಿದ್ದ ಲೀಲಾ ಹೋಟೆಲ್ನ ರೂಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯ ಫೂಟೇಜನ್ನು ಪರಿಶೀಲನೆ ನಡೆಸಲಿದೆ. ಅಲ್ಲದೆ ಹೋಟೆಲ್ ಸಿಬ್ಬಂದಿಯ ಹೇಳಿಕೆಯನ್ನು ಪಡೆಯಲಿಕ್ಕಿದೆ ಎಂದು ತಿಳಿದುಬಂದಿದೆ.
ಇಂದಿನ ಬೆಳಗ್ಗಿನ ವಿದ್ಯಾಮಾನ:
ಇಂದು ಬೆಳಗ್ಗಿನ ಜಾವ 10.10 ಕ್ಕೆ ಎದೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿಯ ಸಾವಿನಿಂದ ಶಶಿ ಆತಂಕಿತರಾದಂತೆ ಕಂಡುಬಂದರು. ಈತನ್ಮಧ್ಯೆ ಸುನಂದಾ ಪುಷ್ಕರ್ ನಿಗೂಢ ಸಾವಿನ ಬಗ್ಗೆ ತನಿಖೆಯಾಗಬೇಕು, ಇದರಿಂದ ಸತ್ಯಾಂಶ ಏನೆಂದು ಬಯಲಗಬೇಕು ಎಂದು ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ ಆಗ್ರಹಿಸಿದ್ದಾರೆ.
ತರೂರು ಪ್ರತಿನಿಧಿಸುವ ತಿರುವನಂಥಪುರಂ ಲೋಕಸಭಾ ಕ್ಷೇತ್ರದಲ್ಲಿರುವ ನಿವಾಸಕ್ಕೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕಾಗಿ ಶಶಿ ತರೂರು ಅವರ ಕೇರಳದ ತಿರುವನಂಥಪುರಂ ಕಚೇರಿ ಹಾಗೂ ಮನೆಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ.
ನಿನ್ನೆ ಏನು ನಡೆಯಿತು?
ಶಶಿತರೂರು ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಪಂಚತಾರ ಹೋಟೇಲ್ ಆದ ಲೀಲಾ ಇದರ ರೂಂ. ನಂ 345ರಲ್ಲಿ ತಂಗಿದ್ದರು. ಸ್ವಲ್ಪ ಹೊತ್ತಾದ ಬಳಿಕ ಅವರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು ಸಾಕಷ್ಟು ನಿಗೂಢತೆಯನ್ನು ಉಂಟುಮಾಡಿದೆ.
ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಶಶಿ ತರೂರ್ ಪತ್ನಿ ಸುನಂದಾ ಅವರು ಆಠಟಿಣ ಣಚಿಞಜ ಐಜಿಜ ಣಠಠ ಖಜಡಿಠಣಟಥಿ ಎಂಬ ಕಟ್ಟಕಡೆಯ ಘಚಿಣಂಠಿಠಿ ಸ್ಟೇಟಸ್ ಸಂದೇಶ ಬಿಟ್ಟು ಅವರು ಕೊನೆಯುಸಿರೆಳೆದಿದ್ದಾರೆ. ಪಾಕಿಸ್ತಾನಿ ಪತ್ರಕತರ್ೆ ಮೆಹರ್ ತರಾರ್ ಎಂಬಾಕೆಯೊಂದಿಗೆ ಶಶಿ ತರೂರ್ ಅಕ್ರಮ ಸಂಬಂಧ ಹೊಂದಿದ್ದರು ಅಲ್ಲದೆ ಈಕೆ ಐಎಸ್ಐ ಏಜೆಂಟ್ ಎಂದು ಆರೋಪಿಸಿದ್ದ ಸುನಂದಾ ಪುಷ್ಕರ್ ಅವರೊಂದಿಗೆ ಇದೇ ವಿಚಾರದಲ್ಲಿ ಸಾಕಷ್ಟು ಬಾರಿ ಜಗಳ ತೆಗೆದಿದ್ದು ಮಾನಸಿಕವಾಗಿ ಕುಗ್ಗಿಹೋಗಿದ್ದರು. ಈ ಘಟನೆ ನಡೆದಂದಿನಿಂದ ಖಿನ್ನತೆಯಿಂದ ಬಳಲುತ್ತಿದ್ದ ಸುನಂದಾ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಖೆ ಕೂಡಾ ಇದೇ ಸಂದರ್ಭದಲ್ಲಿ ವ್ಯಕ್ತವಾಗಿದೆ.
ಓ ಮೈ ಗಾಡ್…!
ಮಧ್ಯೆ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಪಾಕಿಸ್ತಾನದ ಪತ್ರಕತರ್ೆ ಮೆಹರ್ ತರಾರ್ರದ್ದು. ಆದರೆ ಆಕೆ ಮಾತ್ರ ಸುನಂದಾ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ `ಓ ಮೈ ಗಾಡ್ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ತನ್ನ ಬಗ್ಗೆ ಸುನಂದ ಪುಷ್ಕರ್ ಆರೋಪ ಹೊರಿಸುತ್ತಿದ್ದಾರೆ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿಕೆ ನೀಡಿದ್ದರು. ಆದರೆ ಸುನಂದ ಮೃತರಾದ ಸುದ್ದಿಕೇಳುತ್ತಿದ್ದಂತೆ ಅಯ್ಯೋ ದೇವ್ರೇ(ಒ ಮೈ ಗಾಡ್) ಎಂದಷ್ಟೇ ಹೇಳಿದ್ದಾರೆ.
ಲಾಹೋರ್ ಮೂಲದ ಮೆಹರ್ ತರಾರ್ ಅವರು ಡೈಲಿ ಟೈಮ್ಸ್ನಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ಹಲವಾರು ಪ್ರಮುಖ ದೈನಿಕ ಪತ್ರಿಕೆಗಳಿಗೂ ಅಂಕಣಗಳನ್ನು ಬರೆದಿದ್ದಾರೆ. ಇದೆಲ್ಲಕ್ಕಿಂತ ನಾನೊಬ್ಬ ಗೃಹಿಣಿ, ಮಗುವಿನ ತಾಯಿ ಎಂದು ಹೇಳಿಕೊಳ್ಳುವ ಮೆಹರ್, ಸುನಂದಾ ಎಂದರೆ ಸಿಡಿದೇಳುತ್ತಿದ್ದರು. ಐಎಸ್ಐ ಏಜೆಂಟ್ ಎಂದಿರುವ ಸುನಂದಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹೆಸರಿನಲ್ಲಿ ಲೇಖನ ಬರೆದಾಗ ಅವರೊಟ್ಟಿಗೆ ನನ್ನ ಸಖ್ಯ ಬೆಳೆಯಿತು. ಅವರ ರಾಜಕೀಯ ನಿಲುವು ನನಗಿಷ್ಟ. ಆದರೆ, ಸುನಂದಾ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದರು.
ಕೇಂದ್ರ ಸಚಿವ ಶಶಿ ತರೂರ್ ದಾಂಪತ್ಯದಲ್ಲಿ ಬಿರುಕು ಮೂಡಿಸುವಲ್ಲಿ ಯಶಸ್ವಿಯಾಗಿದ್ದ ಮೆಹರ್ ತರಾರ್ ಹಾಗೂ ಶಶಿ ತರೂರ್ ಬಗ್ಗೆ ಮಾಧ್ಯಮಗಳು ಮುಂಚೆಯೇ ವರದಿ ಮಾಡಿದ್ದವು. ಇದನ್ನು ಗಮನಿಸಿದ್ದ ಸುನಂದಾ `ಶಶಿ ಬೇರೆ ಯುವತಿಯರ ಹಿಂದೆ ಬೀಳಲಾರರು, ಶಶಿ ಹಾಗೂ ಮೆಹರ್ ನಡುವಿನ ಒಡನಾಟವಿದ್ದರೂ ಅದನ್ನು ಪ್ರೇಮ ಎನ್ನಲು ಬರುವುದಿಲ್ಲ. ಶಶಿ ತನ್ನ ಪತ್ನಿಯನ್ನು ತೊರೆದು ಪರನಾರಿ ಹಿಂದೆ ಹೋಗುವ ವ್ಯಕ್ತಿಯಲ್ಲ. ಆದುದರಿಂದ ಮಾಧ್ಯಮಗಳು ನಮ್ಮ ಖಾಸಗಿತನವನ್ನು ಗೌರವಿಸಬೇಕು..’ ಎಂದು ಹೇಳಿದ್ದರು.
2010ರ ಮೇಯಲ್ಲಿ ಶಶಿಯ ಕೈ ಹಿಡಿದಿದ್ದ ಸುನಂದ ಶಶಿ ತರೂರ್ರವರ ಮೂರನೇ ಪತ್ನಿಯಾಗಿದ್ದಾರೆ. 2010ರಲ್ಲಿ ಐಪಿಎಲ್ನಲ್ಲಿ ಕೊಚ್ಚಿ ಟಸ್ಕರ್ ತಂಡದಲ್ಲಿ 70ಕೋಟಿಯ ಪಾಲುದಾರಿಕೆ ಹೊಂದಿದ್ದ ಸುನಂದಾ ಈ ಮೂಲಕ ಏಕಾಏಕಿ ಮಾಧ್ಯಮ ದೆದುರು ಕಾಣಿಸಿಕೊಂಡಿದ್ದರು. ಸುನಂದಾ ಜೊತೆ ಶಶಿ ತರೂರು ಜತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುತೂಹಲಕ್ಕೂ ಕಾರಣವಾಗಿದ್ದರು. ಶಶಿ ಆಗಷ್ಟೇ ಕಾಂಗ್ರೆಸ್ ರಾಜಕಾರಣಿ ಯಾಗಿದ್ದ ಹಿನ್ನೆಲೆಯಲ್ಲಿ ಮಹತ್ವ ಪಡೆದಿತ್ತು.

