ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ (ರಿ.) ಇದರ 18ನೇ ವಾರ್ಷಿಕ ಮಹಾಸಭೆಯು ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಕಳೆದ ಭಾನುವಾರ ಸಂಘದ ಅಧ್ಯಕ್ಷ ಬಿ.ಮುನಿರಾಜ
ಜೈನ್ ಅಜಿಲ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀಮತಿ ವಾಣಿ ವೈದ್ಯ, ಶ್ರೀಮತಿ ಸುನೀತಾ ಬಲ್ಲಾಳ್, ಶ್ರೀಮತಿ ಪದ್ಮಾವತಿ ಅವರಪ್ರಾರ್ಥನೆಯೊಂದಿಗೆ ಮಹಾಸಭೆ ಆದಿಗೊಂಡಿದ್ದು, ಸಭೆಯಲ್ಲಿ, ಗೌ| ಕಾರ್ಯದರ್ಶಿ ಸಂತೋಷ್ ಎಂ.ಜೈನ್, ಜತೆ ಕೋಶಾಧಿಕಾರಿ ಸಂಪತ್ಕುಮಾರ್ ಎಸ್.ಜೈನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾಣಿ ವೈಧ್ಯ, ಜಯ ಎ.ಜೈನ್, ಯುವ ವಿಭಾಗದ ಕಾರ್ಯಾಧ್ಯಕ್ಷ ಭರತ್ರಾಜ್ ಜೈನ್ ಉಪಸ್ಥಿತರಿದ್ದು, ಗೌರವ ಪ್ರಧಾನ ಕಾರ್ಯದರ್ಶಿ ಪವನಂಜಯ ಬಲ್ಲಾಳ್ ವಾರ್ಷಿಕ ವರದಿ ವಾಚಿಸಿದರು. ಗೌ| ಕೋಶಾಧಿಕಾರಿ ಪಿ.ಅನಂತರಾಜ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ2015-17ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆಗೊಳಿಸಲಾಗಿದ್ದು ಅಧ್ಯಕ್ಷರಾಗಿ ಬಿ.ಮುನಿರಾಜ ಜೈನ್ ಅಜಿಲ ಪುನಾರಾಯ್ಕೆ ಗೊಂಡರು. ಇತರ ಪದಾಧಿಕಾರಿಗಳಾಗಿ ಟಿ.ಪ್ರಭಾಕರ್ ಹೆಗ್ಡೆ(ಉಪಾಧ್ಯಕ್ಷರು), ಪವನಂಜಯ ಬಲ್ಲಾಳ್ (ಗೌ| ಪ್ರ| ಕಾರ್ಯದರ್ಶಿ), ಪಿ.ಅನಂತರಾಜ (ಗೌ| ಪ್ರ| ಕೋಶಾಧಿಕಾರಿ), ಮನೀಷ್ ಹೆಗ್ಡೆ ಮತ್ತು ರಘುವೀರ್ ಹೆಗ್ಡೆ (ಜೊತೆ ಕಾರ್ಯದರ್ಶಿಗಳು), ಸಂಪತ್ಕುಮಾರ್ ಎಸ್.ಜೈನ್(ಜೊತೆ ಕೋಶಾಧಿಕಾರಿ), ಉದಯ ಅ ಕಾರಿ, ಲೋಕನಾಥ್ ಜೈನ್, ಜಯ ಎ.ಜೈನ್, ಶ್ರೀಮತಿ ವಿನಂತಿ ಹೆಗ್ಡೆ, ಪಿ.ಯುವರಾಜ್ ಜೈನ್, ಮಹಾವೀರ್ ಜೈನ್, ರವಿಕೀರ್ತಿ ಜೈನ್, ಜಗತ್ಪಾಲ್ ಜೈನ್ ಮತ್ತು ರಾಜೇಂದ್ರ ಹೆಗ್ಡೆ (ಕಾರ್ಯಕಾರಿ ಸಮಿತಿ ಸದಸ್ಯರು), ಅಂತರಿಕ ಲೆಕ್ಕ ಪರಿಶೋಧಕರಾಗಿ ಜಿನೇಶ್ ಜೈನ್ ಅವರನ್ನು ಆಯ್ಕೆಗೊಳಿಸಲಾಯಿತು.
ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಭಾರತ್ರಾಜ್ ಜೈನ್ ಮರು ನೇಮಕ ಗೊಂಡರು. ಪವಿತ್ರ ಜೈನ್ ಮತ್ತು ಕವಿತಾ ಜೈನ್ (ಉಪ ಕಾರ್ಯಾಧ್ಯಕ್ಷರು), ಸೂರಜ್ ಜೈನ್ (ಕಾರ್ಯದರ್ಶಿ), ಸೌಮ್ಯ ಜೈನ್ (ಜೊತೆ ಕಾರ್ಯದರ್ಶಿ), ವಿನ್ಯಾಸ್ ಹೆಗ್ಡೆ, ಸಂಪತ್ ಜೈನ್, ಸಂಕೇತ್ ಜೈನ್, ಸ್ವಾಭಿಮಾನ್ ಜೈನ್, ಸುದರ್ಶನ್ ಹೆಗ್ಡೆ, ಅಮಿತ್ ಜೈನ್ ಮತ್ತು ಶ್ವೇತಾ ಹೆಗ್ಡೆ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು. ಸಭೆಯಲ್ಲಿ ವಿಶೇಷಆಮಂತ್ರಿತಸಂಪನ್ಮೂಲವ್ಯಕ್ತಿಯಾಗಿ ರಜಕ ಸಂಘಮುಂಬಯಿ ಇದರಅಧ್ಯಕ್ಷ ಸತೀಶ್ ಸಾಲ್ಯಾನ್ ಉಪಸ್ಥಿತರಿದ್ದು ಸಂಸ್ಥೆಯನ್ನು ಪ್ರಗತಿಯತ್ತ ಒಯ್ಯುವ ಕುರಿತು ಮಾರ್ಗದರ್ಶನ ನೀಡಿದರು. ಸಂಘದ ಮಹತ್ವ ಮನವರಿಸಿ ಉಪಸ್ಥಿತರಿದ್ದ ಎಲ್ಲಾ ಜೈನ ಬಾಂಧವರಿಗೆ ಸಮಾಜವನ್ನು ಏಕತೆಯಿಂದ ಮುನ್ನಡೆಸುವ ಬಗ್ಗೆ ಮಾಹಿತಿ ನೀಡಿದರು. ಉಪಸ್ಥಿತರಿದ್ದ ಯುವಕ ಯುವತಿಯರನ್ನು ವೇದಿಕೆಗೆ ಅಹ್ವಾನಿಸಿ ಅವರಿಂದ ಚಿತ್ರಗಳನ್ನು ಬಿಡಿಸಿ ಅದರ ಮಹತ್ವಗಳನ್ನು ತಿಳಿಸಿ ಸಂಘಕ್ಕೆ ಯುವ ಪೀಳಿಗೆಯ ಮಹತ್ವ ಏನೆಂದು ತಿಳಿಯಪಡಿಸಿದರು. ಮುಂದಿನ ವರ್ಷದಲ್ಲಿ ಮಹಾನಗರದಲ್ಲೊಂದು ಜೈನ ಭವನ ನಿರ್ಮಾಣ ಆಗಬೇಕೆಂದು ಸದಸ್ಯರಿಗೆ ಹುರಿದುಂಬಿಸಿದರು. ಮುನಿರಾಜ ಜೈನ್ ಅಧ್ಯಕ್ಷೀಯ ಭಾಷಣಗೈದು ಸದಸ್ಯರು ತಮ್ಮ ವೈಯುಕ್ತಿಕ ಅಭಿವೃದ್ಧಿಯ ಜೊತೆ ಸಮಾಜ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಸರ್ವರೂ ಒಗ್ಗಟ್ಟಿನಿಂದ ಸಹಕರಿಸಿದ್ದಲ್ಲಿ ಸಮುದಾಯ ನಿರ್ವಾಹಣೆಯೊ ಂದಿಗೆ ಭವನ ನಿರ್ಮಾಣವೂ ಸುಲಭಸಾಧ್ಯವಾಗ ಬಲ್ಲದು ಎಂದರು. ಸಂಘದ ಪದಾಧಿಕಾರಿಗಳು ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರಾದ ಸುಜಾತ ಭರತ್ ಜೈನ್ ಮತ್ತು ರೇಷ್ಮ ಸಂತೋಷ್ ಜೈನ್, ಕಾರ್ಯದರ್ಶಿಯರುಗಳಾದ ಕವಿತಾ ಜೈನ್ ಮತ್ತು ಸುಪ್ರಿಯಾ ಮನೀಷ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದು ಸಮಾಜ ಬಾಂಧವ ಪ್ರತಿಭಾನ್ವಿತರಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಗತ ಸಾಲಿನ ಹೆಚ್ಎಸ್ಸಿ ಮತ್ತು ಎಸ್ಎಸ್ಸಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಧನ ಸಹಾಯವನ್ನಿತ್ತ ಟಿ.ಪ್ರಭಾಕರ ಹೆಗ್ಡೆ ಅವರನ್ನೊಳಗೊಂಡು ಅಧ್ಯಕ್ಷರು ಧನಸಹಾಯ ವಿತರಿಸಿ ಪ್ರೋತ್ಸಾಹಿಸಿದರು. ಅಲ್ಲದೆ ಸಂಘಕ್ಕೆ ವಿವಿಧ ರೀತಿಯಲ್ಲಿ ಸಹಾಯ ನೀಡಿದವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಶ್ರಾವಕ ಶ್ರಾವಕಿಯರಿಂದ ಜನಭಕ್ತಿಗೀತೆಗಳು ಮತ್ತು ಮಹಿಳೆಯರು ಹಾಗೂ ಮಕ್ಕಳು ವಿವಿಧ ವಿನೋದಾವಳಿಗಳನ್ನು ಪ್ರಸ್ತುತ ಪಡಿಸಿದರು. ಲೋಕನಾಥ್ ಜೈನ್ ಸ್ವಾಗತಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಧನ್ಯವದಿಸಿದರು.
