
ಸುದ್ದಿ9 ಕೈಕಂಬ: ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರು ಅಡ್ಡೂರು ಕಾಂಜಿಲಕೋಡಿ(ಲಚ್ಚಿಲ್) ರಮೇಶ್ ಶೆಟ್ಟಿ ಎಂಬವರ ಮನೆಯ ವಠಾರದಲ್ಲಿ `ದಶಾವತಾರ’ ಎಂಬ ಹರಕೆಯ ರೂಪದ ಯಕ್ಷಗಾನ ಬಯಲಾಟವನ್ನು ಮಾ.14ರ ಸೋಮವಾರ ರಾತ್ರಿ 9.30ಕ್ಕೆ ಆಡಿತೋರಿಸಲಿದ್ದಾರೆ. ಈ ಪ್ರಯುಕ್ತ ಚೌಕಿ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ರಮೇಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
