mani
ನವದೆಹಲಿ(ಜ.17): ನರೇಂದ್ರ ಮೋದಿ ಭಾರತದ ಪ್ರಧಾನಿಯಂತೂ ಆಗೋಲ್ಲ, ಏಐಸಿಸಿ ಸಭೆಯಲ್ಲಿ ಮೋದಿ ಟೀ ಮಾರಲು ಒಪ್ಪಿದರೆ ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಉದ್ಧಟನದ ಹೇಳಿಕೆ ನೀಡಿ ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದ ಮಣಿಶಂಕರ್ ಅಯ್ಯರ್ ಈ ರೀತಿಯ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.
ಬಾಲ್ಯದಲ್ಲಿ ಬಡತನದ ಬೇಗುದಿಯಲ್ಲಿ ಬೆಳೆದಿದ್ದ ಮೋದಿ ವಿದ್ಯಾಭ್ಯಾಸಕ್ಕಾಗಿ ಟೀ ಮಾರಿಕೊಂಡು ಹಣ ಸಂಪಾದಿಸುತ್ತಿದ್ದರು. ಆದರೆ ಮೋದಿಯವರನ್ನು ಟೀಕಿಸುವ ಭರದಲ್ಲಿ ಮಣಿಶಂಕರ್ ಅಯ್ಯರ್ ಈ ರೀತಿ ಹೇಳಿಕೆ ನೀಡಿರುವುದುರಿಂದ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿದೆ. ಮಣಿಶಂಕರ್ ಅಯ್ಯರ್ ಮೋದಿಯವರನ್ನು ವ್ಯಕ್ತಿಗತವಾಗಿ ಟೀಕಿಸುವುದು ಇದೇ ಮೊದಲಲ್ಲ, ಇದಕ್ಕಿಂತ ಮೊದಲು ಕೂಡಾ ಮೋದಿಯೊಬ್ಬ ಜೋಕರ್, ಅವರಿಗೆ ಇತಿಹಾಸ ಹಾಗೂ ಆಥರ್ಿಕತೆಯ ಬಗ್ಗೆ ಗಂಧಗಾಳಿ ಇಲ್ಲ ಎಂದು ಟೀಕಿಸಿದ್ದರು.

By suddi9

Leave a Reply

Your email address will not be published. Required fields are marked *