13

ನವದೆಹಲಿ(ಜ.17): ಇಡೀ ಭಾರತವನ್ನೇ ಗಡಗಡ ನಡುಗಿಸಿ ಈಗ ಜೈಲುಪಾಲಾಗಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸೀನ್ ಭಟ್ಕಳ್ ಬಿಡುಗಡೆಗಾಗಿ ಆತನ ಸಹಚರರು ವಿಮಾನ ಹೈಜಾಕ್ ತಂತ್ರ ರೂಪಿಸಿದ್ದರು ಎಂಬುವುದನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಈ ಬಗ್ಗೆ ಎರಡು ವಾರದ ಮುಂಚೆಯೇ ಮಾಧ್ಯಮಗಳಲ್ಲಿ ವರದಿ ಬಂದಿತ್ತಾದರೂ ಗುಪ್ತಚರ ಇಲಾಖೆ ಇದನ್ನು ದೃಢಪಡಿಸಿರಲಿಲ್ಲ.
ವಿಮಾನವನ್ನು ಅಪಹರಿಸಿ ಅದರಲ್ಲಿನ ಪ್ರಯಾಣಿಕರನ್ನು ಒತ್ತೆಯಾಳನ್ನಾಗಿಸಿ ಯಾಸೀನ್ನನ್ನು ಬಿಡುಗಡೆಗೊಳಿಸುವುದು ಭಯೋತ್ಪಾದಕರ ತಂತ್ರವಾಗಿತ್ತು. ಆದರೆ ಇದನ್ನು ಗುಪ್ತಚರ ಇಲಾಖೆ ಮೊದಲೇ ಬಹಿರಂಗಪಡಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ.
ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈ ಅಲಟರ್್ ಘೋಷಿಸಲಾಗಿದ್ದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದ್ದು ಜ.20ರಿಂದ ವಿಸಿಟಸರ್್ ಪಾಸ್ ವಿತರಣೆಯನ್ನು ಸ್ಥಗಿತಗೊಳಿಸಲು ಚಿಂತಿಸಲಾಗಿದೆ.
1999ರಲ್ಲಿ ಅಪಘಾನಿಸ್ತಾನದ ಕಂದಹಾರ್ನಲ್ಲಿ ಜೈಷೆ ಇ ಮೊಹಮ್ಮದ್ ಎಂಬ ಹಗ್ರ ಸಂಘಟನೆ ವಿಮಾನ ಅಪಹರಿಸಿ ಅದರ ಮುಖ್ಯಸ್ಥನಾದ ಮೌಲಾನಾ ಮಸೂದ್ ಅಝರ್ನನ್ನು ಬಿಡುಗಡೆಗೊಳಿಸಲು ಉಗ್ರರು ಯಶಸ್ವಿಯಾಗಿದ್ದು ಅದನ್ನೇ ಇಲ್ಲೂ ಪ್ರಯೋಗಿಸಲು ಯಾಸೀನ್ ಸಹಚರ ಉಗ್ರು ತಂತ್ರ ರೂಪಿಸಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ

By suddi9

Leave a Reply

Your email address will not be published. Required fields are marked *