ಬಂಟ್ವಾಳ: ದ.ಕ. ಜಿಲ್ಲೆಯ ಅಭಿವೃದ್ದಿಯಲ್ಲಿ ಬಂಟರ ಕೊಡುಗೆ ಅಪಾರ ಇದೆ. ಸಮಾಜ ಸೇವೆ ಎನ್ನುವುದು ಬಂಟ ಸಮಾಜಕ್ಕೆ ರಕ್ತಗತವಾಗಿ ಬಂದಿದೆ. ಬಂಟರಲ್ಲಿರುವ ನಾಯಕತ್ವ ಗುಣವನ್ನು ಇತರ ಸಮಾಜದವರು ಒಪ್ಪಿಕೊಂಡಿರುವುದರಿಂದ ಆದರ್ಶದ ಸಮಾಜಸೇವೆ ಹಾಗೂ ನಾಯಕತ್ವನ್ನು ಮುಂದೆಯೂ ಬಂಟರು ಸಮಾಜಕ್ಕೆ ನೀಡಬೇಕಾಗಿದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಕೆ.ಎನ್ ಅಭಿಪ್ರಾಯಪಟ್ಟರು.

ಬಂಟರ ಯಾನೆ ನಾಡವರ ಸಂಘ ಕಲ್ಲಡ್ಕ ವಲಯ ಇದರ ಆಶ್ರಯದಲ್ಲಿ ಕಲ್ಲಡ್ಕದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಹಿರಿಯರು ಶರೀರವನ್ನು ಪ್ರಕೃತಿಗೆ ಅರ್ಪಿಸಿಕೊಂಡಿದ್ದರಿಂದ ಅವರು ರೋಗರುಜಿನಗಳಿಗೆ ತುತ್ತಾಗುತಿರಲಿಲ್ಲ. ಆದರೆ ಈಗ ಪಾಕೃತಿಕ ಸತ್ವಗಳು ನಮಗೆ ದೊರಕೆದೇ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಕಡಿಮೆಯಾಗುತ್ತಿವೆ ಎಂದು ಅಭಿಪ್ರಾಯ ಪಟ್ಟ ಅವರು ಆಟಿ ದಿನದ ವಿಶೇಷತೆಯ ಬಗ್ಗೆ ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಪದ್ಮನಾಭ ರೈ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕ ಜೀವನ ಪದ್ದತಿಯಿಂದ ಆಟಿಯ ದಿನಗಳು ಮರೆತು ಹೋಗುತ್ತಿದೆ. ಇದನ್ನು ನೆನಪಿಸಿಕೊಡುವ ನಿಟ್ಟಿನಲ್ಲಿ ಆಟಿದ ಕೂಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲಾ ಸಮಾಜ ಭಾಂದವರ ಸಹಕಾರದಿಂದಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಅಭಿಪ್ರಾಯ ಪಟ್ಟರು. ಸಂಘದ ವತಿಯಿಂದ ನಡೆಸುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಪ್ರಪುಲ್ಲಾ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಗೌರವಧ್ಯಕ್ಷ ಮಹಾಬಲ ಶೆಟ್ಟಿ ನಂದ ಗೋಕುಲ, ಉಪಾಧ್ಯಕ್ಷೆ ಮೃಣಾಲಿನಿ ಸಿ ನಾಕ್ ಉಪಸ್ಥಿತರಿದ್ದರು. ಹಿರಿಯ ಸಾಧಕರನ್ನು ಹಾಗೂ ಬಾಲಪ್ರತಿಭೆಗಳನ್ನು ಗೌರವಿಸಲಾಯಿತು. ಗ್ರಾ.ಪಂ.ಪ್ರತಿನಿಧಿಗಳಾಗಿ ನೂತನವಾಗಿ ಆಯ್ಕೆಯಾದ ಸ್ವ ಸಮಾಜದ ಸದಸ್ಯರನ್ನು ಅಭಿನಂದಿಸಲಾಯಿತು.
ರಾಮಣ್ಣ ಶೆಟ್ಟಿ ಸುಧೆಕಾರ್ ಸ್ವಾಗತಿಸಿ ಪ್ರೇಮನಾಥ ಬಂಟ್ವಾಳ ವಂದಿಸಿದರು. ಶಿಕ್ಷಕ ಜಗದೀಶ ರೈ ನಿರೂಪಿಸಿದರು.
