ವಿಟ್ಲ:ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆ.11ರಂದು ಶ್ರೀ ಗುರುದೇವಾನಂದ ಸ್ವಾಮೀಜಿಗಳ 55ನೇ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ಗ್ರಾಮೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ರಸ್ತೆ ತೊಂದರೆಯಾಗಬಾರದೆಂದು ಭಾನುವಾರ ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕನ್ಯಾನದಿಂದ ನೆಲ್ಲಿಕಟ್ಟೆವರೆಗಿನರಸ್ತೆ ಹೊಂಡತುಂಬಿಸುವ ಕಾರ್ಯನಡೆಯಿತು.
4 ದಿನಗಳಿಂದ ಒಂದು ಜೆಸಿಬಿ, 2 ಟಿಪ್ಪರ್ಗಳನ್ನು ಬಳಸಿ ತುಂಡುಕಲ್ಲುಜಲ್ಲಿ ಮರಳು ಮಿಶ್ರಣ ಹಾಕುವ ಕಾರ್ಯನಡೆಯಿತು.ಶ್ರಮ ಸೇವೆಯಲ್ಲಿ ಭಾಗವಹಿಸಿದ್ದ ಯುವಕರು ಸಹಕಾರದ ಹಾಗೂ ಜನ ಪ್ರತಿನಿಧಿಗಳ ವಿರುದ್ಧಆಕ್ರೋಶ ವ್ಯಕ್ತ ಪಡಿಸಿದರು. ಸರಕಾರ ತಕ್ಷಣ ಎಚ್ಚೆತ್ತು ಶೀಘ್ರವಾಗಿ ರಸ್ತೆಗೆ ಶಾಶ್ವತ ಪರಿಹಾರ ಒದಗಿಸಿ ಕೊಡಬೇಕು, ತಪ್ಪಿದಲ್ಲಿ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಚಕ್ರವರ್ತಿ ಕ್ರಿಕೆಟರ್ಸ್ಕ ಕನ್ಯಾನ, ಶ್ರೀ ರಾಘವೇಂದ್ರ ಭಜನಾ ಮಂಡಳಿ ಕನ್ಯಾನ, ಶ್ರೀ ಮಲರಾಯ ದೈವಸ್ಥಾನ ನಿರ್ವಾಹಣಾ ಸಮಿತಿ ಕನ್ಯಾನ, ಶ್ರೀ ಗಣೇಶೋತ್ಸವ ಮಿತ್ತನಡ್ಕ, ಹಿಂದೂ ಸೇವಾ ಸಮಿತಿ ಮಿತ್ತನಡ್ಕ, ಗಣೇಶೋತ್ಸವ ಸಮಿತಿ ಮಿತ್ತನಡ್ಕ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಕನ್ಯಾನ, ಬನಾರಿ ಶ್ರೀ ಗೋಪಾಲಕೃಷ್ಣ ನಿರ್ವಹಣಾ ಸಮಿತಿ, ಗೋಪಾಲಕೃಷ್ಣ ಯುವ ಸೇವಾ ಸಮಿತಿ ಬನಾರಿ, ಭಾರತಿ ಸೇವಾ ಕುಡ್ಪಲ್ತಡ್ಕ, ಜೀರ್ಣೋದ್ಧಾರ ಸಮಿತಿವಗೆನಾಡು ಸುಬ್ರಾಯದೇವಸ್ಥಾನ, ಚಾಮುಂಡೇಶ್ವರಿ ಭಜನಾ ಮಂಡಳಿ ಕಣಿಯೂರು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು.
ಈ ಸಂದರ್ಭಕರೋಪಾಡಿಗ್ರಾಮ ಪಂಚಾಯಿತಿಅಧ್ಯಕ್ಷೆ ಬೇಬಿ ಆರ್ ಶೆಟ್ಟಿ, ಉಪಾಧ್ಯಕ್ಷಅಬ್ದುಲ್ಜಲೀಲ್ಕರೋಪಾಡಿ, ಕನ್ಯಾನಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಘರಾಮ್ ಶೆಟ್ಟಿ, ಪಂಚಾಯಿತಿ ಸದಸ್ಯರಾದ ದಿನೇಶ್ ಪಟ್ಲ, ಉದಯ ರಮಣ ಭಟ್ ಕನ್ಯಾನ, ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆ ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ, ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಕನ್ಯಾನ ಪದವಿ ಪೂರ್ವಕಾಲೇಜು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ, ಉಪನ್ಯಾಸಕ ಗಣೆಶ್ ಕೆ, ಡಿ. ರಾಜೇಂದ್ರರೈ, ಮಣಿಕಂಠನ್ ನಾಯರ್, ಶ್ರೀಕಂಠೆ ಗೌಡ, ಸುರೇಶ್ ಕುಲಾಲ್ ಒಡಿಯೂರು, ಟಿ ತಾರನಾಥಕೊಟ್ಟಾರಿ, ಸದಾಶಿವ ಅಳಿಕೆ ಮತ್ತಿತರರು ಹಾಜರಿದ್ದರು.
ಚಿತ್ರಇದೆ:
ವಿಐಎಲ್_9 ಆಗಸ್ಟ್_8 :ಕನ್ಯಾನದಿಂದ ನೆಲ್ಲಿಕಟ್ಟೆವರೆಗಿನರಸ್ತೆ ಹೊಂಡತುಂಬಿಸುವ ಕಾರ್ಯ ನಡೆಯಿತು.

