ಕೈಕಂಬ: ಮನೆ ಮನೆಯಲ್ಲಿ ತುಳು ಭಾಷೆ ಮಾತನಾಡಿ ನಮ್ಮ ತುಳುನಾಡಿನ ಭಾಷೆ ಸಂಸ್ಕೃತಿಯನ್ನು ಆ ಮೂಲಕ  ಉಳಿಸುವ ಎಂದು ವಾದಿರಾಜ ಕಿನ್ನಿಕಂಬಳ ಹೇಳಿದರು. ಅವರು ರಾಜಶ್ರೀ ಯುವಕ ಮಂಡಲ ಪೊಳಲಿ ಮತ್ತು ರಾಜೇಶ್ವರೀ ಮಹಿಳಾ ಮಂಡಳಿ ಇದರ ಜಂಟಿ ಆಶ್ರಯದಲ್ಲಿ ಆ.9 ರಂದು ಭಾನುವಾರ ಪೊಳಲಿ ಅಖಿಲೇಶ್ವರ ದೇವಸ್ಥಾನದ ಎದುರಿನ ಕೆಲ್ಲೇಶ್ವರ ಗದ್ದೆಯಲ್ಲಿ ಆಟಿಡ್ ಕೆಸರ್ಡೊಂಜಿ ದಿನ ಕಾರ್ಯಕ್ರಮದಲ್ಲಿ “ಆಟಿ ತಿಂಗೊಲ್ದ ಬದ್ಕ್” ಎಂಬ ವಿಷಯದಲ್ಲಿ ಮಾತನಾಡಿದರು.

 

 

16

 

18

19

 

8

9

10

11

12

13

14

15

17

7

ನಮ್ಮ ಹಿರಿಯರು ಶರೀರವನ್ನು ಪ್ರಕೃತಿಗೆ ಅರ್ಪಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ  ತನ್ನನ್ನು ತಾನು ತೊಡಗಿಸಿ ಕೊಂಡಿದ್ದರಿಂದ  ರೋಗರುಜಿನಗಳಿಗೆ ತುತ್ತಾಗುತಿರಲಿಲ್ಲ. ಆದರೆ ಈಗ ಪಾಕೃತಿಕ ಸತ್ವಗಳು ನಮಗೆ ದೊರಕೆದೇ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಕಡಿಮೆಯಾಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪೊಳಲಿ ದೇವಸ್ಥಾನದ ಅರ್ಚಕ ರಾಮ ಭಟ್ ವಹಿಸಿದ್ದರು. ಆಟಿತಿಂಗಳಿನ ಮಹತ್ವವನ್ನು ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ , ಮುಖ್ಯ ಅಥಿತಿಗಳಾಗಿ ಪೊಳಲಿ ವೆಂಕಟೇಶ್ ನಾವಡ,ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಶಿವರಂಜಿನಿ ಮ್ಯೂಸಿಕಲ್ಸ್ ಸುಬ್ಬರಾವ್, ಪೊಳಲಿ ನಾರಾಯಣ ಸಪಲಿಗ, ರಾಜಶ್ರೀ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು. ಮೋಹನ್ ಬಿಲ್ವಪತ್ರೆ ಸ್ವಾಗತಿಸಿ ಕೇಶವ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *