1 (1)

2 (1)

3 (1)

ಸುದ್ದಿ9 ಬಂಟ್ವಾಳ (ಜ.17): ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ಗ್ರಾಮದೆಡೆಗೆ ಬಿಜೆಪಿ ನಡಿಗೆಯ ನಾಲ್ಕನೇ ದಿನದ ಪಾದಾಯಾತ್ರೆಗೆ ಶುಕ್ರವಾರ ಬೆಳಿಗ್ಗೆ ವೀರಕಂಭದಲ್ಲಿ ಚಾಲನೆ ನೀಡಲಾಯಿತು. ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ಬೋಳಂತೂರು, ಅಮ್ಟೂರು, ಗೋಳ್ತಮಜಲು, ಬಾಳ್ತಿಲ ಗ್ರಾಮಗಳಲ್ಲಿ ಸಂಚರಿಸಿತು.
ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರೂವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು, ಪಕ್ಷದ ಪ್ರಮುಖರಾದ ಜಿ ಆನಂದ, ದೇವದಾಸ್ ಶೆಟ್ಟಿ, ನೇಮಿರಾಜ್ ರೈ, ರಾಮದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ಪರುಷ ಸಾಲ್ಯಾನ್ ನೆತ್ತರಕೆರೆ, ಚರಣ್ ಜುಮಾದಿಗುಡ್ಡೆ, ಪ್ರಥ್ವಿರಾಜ್, ಸುಧಾಕರ ರೈ, ಜಯರಾಮ ಶೆಟ್ಟಿ, ಬೃಜೇಶ್ ಚೌಟ, ಚಂದ್ರಶೇಖರ ಬಾಯಿಲ, ವೀರಪ್ಪ ಮೂಲ್ಯ, ವಿಷ್ಣು ಭಟ್, ಗಣೇಶ್ ರೈ ಮಾಣಿ, ವಿಶ್ವನಾಥ ವೀರಕಂಬ, ಅಜಿತ್ ಬೋಪಯ್ಯ, ಚಂದ್ರಿಕಾ, ವೇಣುಗೋಪಾಲ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *