ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭದಲ್ಲಿ ದ.ಕ. ಜಿಲ್ಲಾ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಕಟೀಲು: ಕನ್ನಡ ಸಾಹಿತ್ಯ ಪರಿಷತ್ತು 100 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದ.ಕ. ಜಿಲ್ಲಾ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಶ್ರೀ ಕ್ಷೇತ್ರ ಕಟೀಲಿನ ಆವರಣದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಆಗೋಸ್ತು 28, 29, 30 ಮೂರು ದಿನಗಳ ಕಾಲ ಸಾಹಿತ್ಯಜಾತ್ರೆ ಸ್ವರೂಪದಲ್ಲಿ ಸಮ್ಮೇಳನ ನಡೆಸುವರೇರೂಪುರೇಶೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ವಿಶೇಷವಾಗಿ ಈ ಬಾರಿಕಾಸರಗೋಡು, ದಕ್ಷಿಣಕನ್ನಡಉಡುಪಿ ಮೂರು ಜಿಲ್ಲೆಗಳ ಸಮಷ್ಠಿ ದೃಷ್ಟಿಯನ್ನು ಗಮನದಲ್ಲಿರಿಸಿ ಕಾರ್ಯಕ್ರಮ ರೂಪಿಸಲಾಗಿದೆ. ಏಕಕಾಲದಲ್ಲಿ ಮೂರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.
ವೇದಮೂರ್ತಿ ಹರಿನಾರಾಯಣಆಸ್ರಣ್ಣ, ಕ್ಷೇತ್ರದಆಡಳಿತಾಧಿಕಾರಿ ನಿಂಗಯ್ಯ ಹಾಗೂ ಊರಿನ ಗಣ್ಯರ ಮಾರ್ಗದರ್ಶನ, ಸಹಕಾರದೊಂದಿಗೆ ಸ್ಥಳೀಯ ವಿದ್ಯಾಸಂಸ್ಥೆ, ಪ್ರಮುಖರಾದ ಪ್ರೊ. ಬಾಲಕೃಷ್ಣ ಶೆಟ್ಟಿ, ಜಯರಾಮ ಪೂಂಜ, ಸೋಮಪ್ಪ ಅಲಂಗಾರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ, ರಾಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಅಭಯಚಂದ್ರಜೈನ್ ಹಿರಿತನದಲ್ಲಿ ಸ್ವಾಗತ ಸಮಿತಿಯನ್ನುರಚಿಸಲಾಗುವುದು. ಇದಕ್ಕೆ ಸಂಬಂಧಿಸಿ ಸಲಹೆ, ಸಹಕಾರ, ಸಹಯೋಗ ನೀಡಿಕಾರ್ಯಕ್ರಮ ಯಶಸ್ವಿಗೊಳಿಸುವಂತೆ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
