ಮುಂಬಯಿ, ಜು.31: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇಂದಿಲ್ಲಿ ಶುಕ್ರವಾರ ರಾತ್ರಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ವಿಜೃಂಭನೆಯಿಂದ ಗುರುಪೂರ್ಣಿಮೆಯನ್ನು ಸಂಭ್ರಮದಲ್ಲಿ ಆಚರಿಸಲಾಯಿತು.
ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಶಶಿ ನಿತ್ಯಾನಂದ್, ಗೌರವಾಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ ಗುರುಪೂರ್ಣಿಮಾ ಸಂಭ್ರಮಕ್ಕೆ ಚಾಲನೆ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪುಷ್ಫಹಾರನ್ನಿತ್ತು ಗುರುವರ್ಯರಿಗೆ ನಮನ ಸಲ್ಲಿಸಿದರು.
ಗುರುಪೂರ್ಣಿಮೆ ಪ್ರಯುಕ್ತ ಸುಭಾಶ್ ಮಾಬಿಯಾನ್, ಸಂತೋಷ್ ಪೂಜಾರಿ ಮತ್ತು ಗಣೇಶ್ ಪೂಜಾರಿ ಶಾಂತಿಗಳು ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಆರಾಧಿಸಿದರು. ನಡೆಸಿ ಮಹಾ ಆರತಿಗೈದು ಪ್ರಸಾದ ವಿತರಿಸಿದರು. ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ಜಿ.ಪೂಜಾರಿ ಪ್ರಾರ್ಥನೆಯನ್ನು ನೆರವೇರಿಸಿದರು.
ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಎಲ್.ವಿ ಅಮೀನ್ ಪರಿವಾರ ರೂಪಿಸಿದ ಗುರುಪೂರ್ಣಿಮೆ ನಿಧಿಯಿಂದ ವಿಶೇಷವಾಗಿ ಆಚರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಎಲ್.ವಿ.ಅವಿೂನ್ ಮತ್ತು ಶ್ರೀಮತಿ ಸುಧಾ ಎಲ್.ಅವಿೂನ್ ಪರಿವಾರ, ಹಾಗೂ ಅತಿಥಿಗಳಾಗಿ ಉಪಸ್ಥಿತ ಸಮಾಜ ಸೇವಕರುಗಳಾದ ಧರ್ಮಪಾಲ ಯು.ದೇವಾಡಿಗ, ವಿಶ್ವನಾಥ ಯು.ಮಾಡ, ಜಿ.ಟಿ ಆಚಾರ್ಯ, ಸುರೇಶ್ ಶೆಟ್ಟಿ ಯೆಯ್ಯಡಿ, ವಾವನ ಪೂಜಾರಿ, ಶ್ರೀನಿವಾಸ ಕರ್ಕೆರ, ಸಿಎ| ಅಶ್ವಜಿತ್ ಹೆಜ್ಮಾಡಿ ಮತ್ತು ವಿಶೇಷ ಪೂಜೆಯ ಸಹಭಾಗಿಗಳೆಲ್ಲರಿಗೂ ಶಾಲು ಹೊದಿಸಿ, ಫಲಪುಷ್ಫಗಳನ್ನಿತ್ತು ಗೌರವಿಸಲಾಯಿತು. ನೆರೆದ ಭಕ್ತರಿಗೆ ಪ್ರಸಾದರೂಪವಾಗಿ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ. ಬಂಗೇರ, ಶಂಕರ ಡಿ.ಪೂಜಾರಿ ಮತ್ತು ಡಾ| ಯು.ಧನಂಜಯ ಕುಮಾರ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಕಾರ್ಕಳ, ಗೌ| ಜೊತೆ ಕಾರ್ಯದರ್ಶಿಗಳಾದ ಧನಂಜಯ ಎಸ್.ಕೋಟ್ಯಾನ್, ಹರೀಶ ಜಿ.ಸಾಲ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ಶಿವರಾಮ ಎಸ್.ಪೂಜಾರಿ, ಸದಾಶಿವ ಎ.ಕರ್ಕೇರ, ಮೋಹನ್ ಡಿ.ಪೂಜಾರಿ, ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್. ಕೋಟ್ಯಾನ್, ನಿರ್ದೇ ಶಕರುಗಳಾದ ಎಂ.ಬಿ ಕುಕ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಜ್ಯೋತಿ ಕೆ.ಸುವರ್ಣ, ಮುಂದಾಳುಗಳಾದ ರಾಜಶೇಖರ್ ಕೋಟ್ಯಾನ್, ರವೀಂದ್ರ ಎ.ಅವಿೂನ್, ತೋನ್ಸೆ ಸಂಜೀವ ಪೂಜಾರಿ, ನಿಲೇಶ್ ಕೋಟ್ಯಾನ್, ಬನ್ನಂಜೆ ರವೀಂದ್ರ ಅವಿೂನ್, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಸೇರಿದಂತೆ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿ ಸದಸ್ಯರು , ಭಕ್ತವರ್ಯರು ಉಪಸ್ಥಿತರಿದ್ದು ಗುರುವರ್ಯರಿಗೆ ನಮಿಸಿದರು.














