ಸುದ್ದಿ 9ಬಜಪೆ: ಮರಳು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಪಲ್ಟಿಯಾಗಿ ಲಾರಿಯಲ್ಲಿದ್ದ ಬಿಹಾರ ಮೂಲದ ಜೆಸಿಬಿ-ಕ್ರೇನ್ ಆಪರೇಟರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬಜಪೆ ಪೊರ್ಕೊಡಿ.
ಮೃತನನ್ನು ಬಿಹಾರ ಮೂಲದ ರಾಕೇಶ್(32) ಎಂದು ಗುರುತಿಸಲಾಗಿದೆ. ಮೃತನ ದೇಹ ಪಲ್ಟಿಯಾದ ಲಾರಿಯ ಚಕ್ರದಡಿ ಸಿಲುಕಿತ್ತು ಎಂದು ಸ್ಥಳೀಯರು ತಿಳಿಸಿದ್ಧು ಗಂಭೀರ ಗಾಯಗೊಂಡ ಲಾರಿ ಚಾಲಕ ಬಿಹಾರ ಮೂಲದ ಉಮೇಶ ಎಂಬಾತನನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಎಂಆರ್ಪಿಎಲ್-ಎಂಎಸ್ಇಝಡ್ ಕಂಪೆನಿಗಳ ನಿಮರ್ಾಣ ಕಾಮಗಾರಿಗೆ ಮರಳು ಸಾಗಿಸುತ್ತಿದ್ದ ಲಾರಿ ಬಜಪೆ ಕಡೆಯಿಂದ ಪೊಕರ್ೋಡಿ ರಸ್ತೆಯಲ್ಲಿ ಮುಖ್ಯರಸ್ತೆ(ಪೊಕರ್ೋಡಿ ದ್ವಾರ)ಯಿಂದ ಸುಮಾರು 1ಕಿ.,ಈ. ಎದುರು ಚಾಲಕನ ನಿಯಂತ್ರಣ ತಪ್ಪಿ ಬೃಕ್ ವೈಫಲ್ಯದಿಂದಾಗಿ ಆಳಕ್ಕೆ ಉರುಳಿ ಬಿತ್ತೆನ್ನಲಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಲಾರಿಯ ಡೀಸೆಲ್ ಕೂಡಾ ಚೆಲ್ಲಿರಬಹುದೆನ್ನಲಾಗಿದೆ.
ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳದ ಎರಡು ವಾಹನಗಳು ಆಗಮಿಸಿ ಸ್ಥಳ ಪರಿಶೀಲಿಸಿ ತೆರಳಿದರು.


