ಬಂಟ್ವಾಳ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಡಿಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಪ್ರೆಸ್ ಕ್ಲಬ್ (ರಿ) ಬಿ.ಸಿ.ರೋಡು ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲ ಅಂಚನ್ ಆಯ್ಕೆಯಾಗಿದ್ದಾರೆ.

prasanth
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಕೋಶಾಧಿಕಾರಿಯಾಗಿ ವೆಂಕಟೇಶ್ ಬಂಟ್ವಾಳ್, ಉಪಾಧ್ಯಕ್ಷರಾಗಿ ರತ್ನದೇವ್ ಪುಂಜಾಲಕಟ್ಟೆ, ಸೂರ್ಯನಾರಾಯಣ ಪೂವಳ, ವಿಷ್ಣುಗುಪ್ತ ಪುಣಚ, ಜನಾರ್ಧನ ವಿಟ್ಲ, ಕಾರ್ಯದರ್ಶಿಗಳಾಗಿ ಮಹಮ್ಮದ್ ಆಲಿ, ಚಂದ್ರಶೇಖರ ಕಲ್ಮಲೆ, ಜತೆ ಕಾರ್ಯದರ್ಶಿಯಾಗಿ ಯಾಧವ ಅಗ್ರಬೈಲು ಆಯ್ಕೆಯಾದರು.
ಕ್ಲಬ್ಬಿನ ಕಾನೂನು ಸಲಹೆಗಾರರಾಗಿ ರಾಘವೇಂದ್ರ ಬನ್ನಿಂತಾಯ, ಸಲಹೆಗಾರರಾಗಿ ರೋನ್ಸ್ ಬಂಟ್ವಾಳ್, ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಹರೀಶ ಮಾಂಬಾಡಿಯವರನ್ನು ಆರಿಸಲಾಯಿತು.
ಮೌನೇಶ ವಿಶ್ವಕರ್ಮ, ನಿಶಾಂತ್ ಬಿಲ್ಲಂಪದವು, ಸಂದೀಪ್ ಸಾಲ್ಯಾನ್, ಉದಯಶಂಕರ್ ನೀರ್ಪಾ ಜೆ, ಕಿಶೋರ್ ಪೆರಾಜೆ, ಸುಕುಮಾರ್ ಬಂಟ್ವಾಳ, ಹಮೀದ್ ವಿಟ್ಲ,  ವಾಮನ ಪೂಜಾರಿ ಮಣಿಕಂಠಪುರ,  ಚಂದ್ರಹಾಸ ನೂರ್ತಾಡಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತಿಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ಚುನಾವಣಾ ಪ್ರಕ್ರಿಯೆ ನಡೆಸಿದರು.

 

By Suddi9

Leave a Reply

Your email address will not be published. Required fields are marked *