ವಾಷಿಂಗ್ಟನ್: ವಿಶ್ವದ ಆರ್ಥಿಕತೆ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಭಾರತೀಯರು ಮತ್ತು ಚೀನಿಯರಿಂದ ಅಮೆರಿಕನ್ನರು ಸ್ಪರ್ಧೆ ಎದುರಿಸುತ್ತಿದ್ದಾರೆ. ಹೀಗಂತಾ ಹೇಳಿದ್ದು ಬೇರಾರೂ ಅಲ್ಲ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ. ಮೇರಿ ಲ್ಯಾಂಡ್`ನಲ್ಲಿ ನಿನ್ನೆ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಒಬಾಮಾ, ವಿದ್ಯಾರ್ಥಿಗಳೇ ಮುಂದಿನ ದಿನಗಳಲ್ಲಿ ನೀವು ಒಳ್ಳೆಯ ಕೆಲಸಗಳನ್ನು ಗಿಟ್ಟಿಸಲು ಕೇವಲ ಅಮೆರಿಕದಲ್ಲಷ್ಟೇ ಅಲ್ಲದೇ ವಿಶ್ವಾದ್ಯಂತ ಭಾರೀ ಪೈಪೋಟಿ ಎದುರಿಸಬೇಕಾಗಿದೆ. ಭಾರತ ಮತ್ತು ಚೀನಾದ ಯುವಕರು ನಿಮಗೆ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದು, ವಿಶ್ವಾದ್ಯಂತ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ನಿಜವಾದ ಸ್ಪರ್ಧೆ ಎದುರಾಗಿದೆ. ಈ ಹಿಂದೆ ನಾವು ಮಾಡಿರುವ ಸಾಧನೆಯನ್ನು ನೆನೆದು ಸುಮ್ಮನೆ ಕೂರುವುದನ್ನ ಬಿಟ್ಟು ಅವರ ಸ್ಪರ್ಧೆಗೆ ಪ್ರತಿಸ್ಪರ್ಧೆ ಒಡ್ಡಬೇಕು. ಹೊಸ ಹೊಸ ಸೃಜನಶೀಲ ಆಲೋಚನೆ ಯೋಜನೆಗಳ ಮೂಲಕ ಮುಂದುವರೆಯಬೇಕು ಎಂದು ಒಬಾಮಾ ಕರೆ ನೀಡಿದ್ದಾರೆ.
ಅಮೆರಿಕಾದಲ್ಲಿ ಉನ್ನತ ಹುದ್ದೆಯಲ್ಲಿರುವವರ ಪೈಕಿ ಹೆಚ್ಚಿನವರು ಭಾರತ ಮತ್ತು ಚೀನಾ ಮುಲದವರಾಗಿದ್ದಾರೆ. ಅದರಲ್ಲೂ ಅಮೆರಿಕಾದಲ್ಲಿ ಭಾರತೀಯರ ಪ್ರಾಬಲ್ಯ ತುಸು ಹೆಚ್ಚೇ ಎಂದು ಹೇಳಬಹುದು. ಇದರ ಬಗ್ಗೆ ಒಬಾಮಾ ಅಧ್ಯಕ್ಷರಾದಾಗಿನನಿಂದಲೂ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

