ಮುಂಬೈ: ಬಾಲಿವುಡ್ ನಟಿ ಕಲ್ಕಿ ಕೋಚಲಿನ್ ಬಾಲ್ಯಾವಸ್ಥೆಯಲ್ಲಿದ್ದಾಗ ಲೈಂಗಿಕ ಶೋಷಣೆಗೊಳಗಾಗಿದ್ದಳಂತೆ. ಹಾಗಂತ ಕಲ್ಕಿಯೇ ಹೇಳಿಕೊಂಡಿದ್ದಾಳೆ. ಯಾವ ರೀತಿ ಅಥವಾ ಯಾರಿಂದ ಲೈಂಗಿಕ ಕಿರುಕುಳವಾಯಿತೆಂದು ವಿವರ ನೀಡದ ಕಲ್ಕಿ, ತನ್ನಂತೆ ಬಹಳಷ್ಟು ಹೆಣ್ಣುಮಕ್ಕಳು ಇಂಥ ಶೋಷಣೆಗೆ ಗುರಿಯಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

kalki-koechlin-read

ಬಾಲ್ಯ ಲೈಂಗಿಕ ಶೋಷಣೆ ವಿರುದ್ಧದ ಹೋರಾಡುತ್ತಿರುವ ನಟ ರಾಹುಲ್ ಬೋಸ್ ಅವರ ಸರ್ಕಾರೇತರ ಸಂಸ್ಥೆ “ಹೀಲ್” ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕಲ್ಕಿ ಕೋಚಲಿನ್ ತನ್ನ ನೋವು ತೋಡಿಕೊಂಡಿದ್ದಾಳೆ. ಬಾಲಕಿಯಾಗಿದ್ದಾಗ ತನಗಾದ ಲೈಂಗಿಕ ಶೋಷಣೆ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಕಲ್ಕಿ, “ನನಗೆ ಈ ವಿಷಯದ ಬಗ್ಗೆ ಮಾತನಾಡಲು ಇಷ್ಟ ಇಲ್ಲ. ಹೀಗಾಗಿ, ಇದು ಸುದ್ದಿಯಾಗಿಲ್ಲ. ನನಗೆ ಇದು ಯಾವುದೋ ಒಂದು ದಿನದ ಹೆಡ್’ಲೈನ್ ಅಲ್ಲ. ಬಹಳ ದಿನಗಳ ಕಾಲ ನನ್ನನ್ನ ಬಾಧಿಸುವ ವಾಸ್ತವ ಸತ್ಯವಿದು. ನಮ್ಮಲ್ಲಿರುವ ಬಳಷ್ಟು ಮಂದಿ ಈ ನೋವನ್ನ ಅನುಭವಿಸಿದ್ದೇವೆ. ನನ್ನ ಸ್ನೇಹಿತರು, ಅದರಲ್ಲೂ ಮಹಿಳೆಯರು ಈ ಬಾಲ್ಯ ಲೈಂಗಿಕ ಶೋಷಣೆಗೆ ಒಂದಲ್ಲ ಒಂದು ರೀತಿಯಲ್ಲಿ ತುತ್ತಾಗಿದ್ದಾರೆ… ಇದು ನಿಜಕ್ಕೂ ಕಡೆಗಣಿಸುವಂಥ ವಿಚಾರವಲ್ಲ” ಎಂದು ಎಚ್ಚರಿಸಿದ್ದಾಳೆ.

By suddi9

Leave a Reply

Your email address will not be published. Required fields are marked *