ಮುಂಬಯಿ, ಜು.18: ಬೊಂಬೇ ಬಂಟ್ಸ್ ಅಸೋಸಿಯೇಶನ್ನ ವಿಶ್ವಸ್ಥ ಸಮಿತಿ ವಿಶೇಷ ಸಭೆಯು ಶನಿವಾರ ಸಂಜೆ ಸಯಾನ್ ಅಲ್ಲಿನ ಹೊಟೇಲ್ ಪೆನಿನ್ಸುಲಾ ಸಭಾಗೃಹದಲ್ಲಿ ಅಸೋಸಿಯೇಶನ್ನ ಅಧ್ಯಕ್ಷ ಶ್ಯಾಮಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಪ್ರಮುಖರಾಗಿ ವಿಶ್ವಸ್ಥ ಸದಸ್ಯರುಗಳಾದ ರಘುರಾಮ ಕೆ.ಶೆಟ್ಟಿ, ಪ್ರಭಾಕರ್ ಜೆ.ಶೆಟ್ಟಿ, ಹೆಜಮಾಡಿ ವಿಠಲ ಶೆಟ್ಟಿ, ಬಾಬು ಎನ್.ಶೆಟ್ಟಿ, ಸದಾನಂದ ಆರ್.ಶೆಟ್ಟಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಅಸೋಶಿಯೇಶನ್ನ ಗೌ|ಪ್ರ|ಕಾರ್ಯದರ್ಶಿ ಚಂದ್ರಶೇಖರ್ ಎಸ್.ಶೆಟ್ಟಿ, ಗೌ| ಕೋಶಾಧಿಕಾ
ರಿ ಸಿಎ| ಸುರೇಂದ್ರ ಕೆ.ಶೆಟ್ಟಿ, ಮಹಿಳಾ ವಿಭಾಗದಧ್ಯಕ್ಷೆ ಶ್ರೀಮತಿ ಸರಳಾ ಬಿ.ಶೆಟ್ಟಿ, ಯುವ ವಿಭಾಗದ
ಕಾರ್ಯಾಧ್ಯಕ್ಷ ಚೇತನ್ ಆರ್.ಶೆಟ್ಟಿವೇದಿಕೆಯಲ್ಲಿ ಆಸೀನರಾಗಿದ್ದರು.
ಸಭೆಯಲ್ಲಿ ಅಸೋಸಿಯೇಶನ್ನ ಉನ್ನತ ಶಿಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ರತ್ನಾಕರ ವಿ.ಶೆಟ್ಟಿ, ಮಾಜಿ
ಅಧ್ಯಕ್ಷರುಗಳಾದ ಎನ್.ಸಿ ಶೆಟ್ಟಿ, ಜಯರಾಮ ಮಲ್ಲಿ, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ತೋಕುರು
ಭಾಸ್ಕರ್ ಶೆಟ್ಟಿ, ನ್ಯಾ| ಆನಂದ್ ವಿ.ಶೆಟ್ಟಿ, ಮತ್ತು ಜಯಂತ್ ಕೆ.ಶೆಟ್ಟಿ, ಜಯ ಎನ್.ಶೆಟ್ಟಿ, ನ್ಯಾ| ಅಶೋಕ್ ಡಿ.ಶೆಟ್ಟಿ
ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾಗಿ ಅಸೋಸಿಯೇಶನ್ಗೆ ಅನನ್ಯ ಸೇವೆ ಸಲ್ಲಿಸುತ್ತಾ ಇದೀಗ ರಾಷ್ಟ್ರೀಯ
ತನಿಖಾ ಕರ್ತೃತ್ವ ಸಂಸ್ಥೆಗೆ (ಎನ್ಐಎ) ಆಯ್ಕೆಯಾದ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ
ಅವರನ್ನು ಪುಷ್ಫಗುಚ್ಛವನ್ನಿತ್ತು ಅಸೋಸಿಯೇಶನ್ ಪರವಾಗಿ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿಅಭಿನಂದಿಸಿದರು.
ಚಂದ್ರಶೇಖರ್ ಎಸ್.ಶೆಟ್ಟಿಸ್ವಾಗತಿಸಿ ನಿರ್ವಹಿಸಿದರು. ವ್ಯವಸ್ಥಾಪಕ ರಾಮ್ಮೋಹನ್ ಶೆಟ್ಟಿ ಬಳ್ಕುಂಜೆ ವಂದಿಸಿದರು
ಚಿತ್ರ ವರದಿ : ರೋನ್ಸ್ ಬಂಟ್ವಾಳ್



