ಬಂಟ್ವಾಳ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರವನ್ನು ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಉದ್ಘಾಟಿಸಿದರು.
ಯೋಜನೆ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ ಶಿರ್ಲಾಲ್, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ನಾಯಕ್, ಕೋಶಾಧಿಕಾರಿ ಜೆ.ಜನಾರ್ಧನ, ರಾಜ್ಯ ಪರಿಷತ್ ಸದಸ್ಯ ಆರ್.ನಾಗೇಶ್, ಶಿಕ್ಷಕ ಜಯರಾಮ, ಆರೋಗ್ಯಮಿತ್ರ ಉಷಾ ಮತ್ತಿತರರು ಇದ್ದರು.

