ಭಾರತ್ ಬ್ಯಾಂಕ್ ಬಡಜನತೆಗೆ ಲೈಫ್ ನೀಡಿದೆ: ಎಂ.ಡಿ.ಶೆಟ್ಟಿ
ಮುಂಬಯಿ : ಬಾಂದ್ರ ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯಿಂದ ಪ್ರಪ್ರಥಮ ಸ್ಥಾನದೊಂದಿಗೆ `ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ಪಡೆದ ತುಳು-ಕನ್ನಡಿಗರ ಪ್ರತಿಷ್ಠಿತ
ಆರ್ಥಿಕ ಸಂಸ್ಥೆ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 69ನೇ ಶಾಖೆಯು ಬಾಂದ್ರಾಪಶ್ಚಿಮದ ಎಸ್.ವಿ ರೋಡ್ ಅಲ್ಲಿನ ಬಾಂದ್ರಾ ಲೇಕ್ ಸಮೀಪ ಹೊಟೇಲ್ ಸಿದ್ದಾರ್ಥ್ ಕಟ್ಟಡದಲ್ಲಿ
ಇಂದಿಲ್ಲಿ ಗುರುವಾರ ಬೆಳಿಗ್ಗೆ ಉದ್ಘಾಟಿಸಲ್ಪಟ್ಟಿತು.ಪೀಡಿತರಿಗೆಕ್ಷಣಾರ್ಥದಲ್ಲಿ ಸ್ಪಂದಿಸುವ ಬ್ಯಾಂಕ್ವೊಂದಿದ್ದರೆ ಅದು ಭಾರತ್ ಬ್ಯಾಂಕ್ ಮಾತ್ರವಾಗಿದೆ.
ಜೆ.ಸಾಲ್ಯಾನ್ ಅವರು ಎಟಿಎಂ ಹಾಗೂ ಶ್ರೀಮತಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆ ಚಾಲನೆಯನ್ನೀಡಿದರು. ಬಿಲ್ಲವ ಸಮಾಜ ಮತ್ತು ನನಗೆ73 ವರ್ಷಗಳ ನಂಟುವಿದೆ. ಬಲ್ಲವರಾದ ಬಿಲ್ಲವರ ಭಾರತ್ ಬ್ಯಾಂಕ್ ಸಹಕಾರಿ ಕ್ಷೇತ್ರಕ್ಕೆ ಸರ್ವೋತ್ಕೃಷ್ಟ ವರವಾಗಿದೆ. ಒಂದು ಬ್ಯಾಂಕಿನ ಪ್ರಯೋಜನ ಎಷ್ಟೇಂದು ಭಾರತ್ ಬ್ಯಾಂಕ್ನಿಂದ ತಿಳಿಯಬಹುದು. ಅನೀರಿಕ್ಷಿತ ಮತ್ತು ಆನಾರೋಗ್ಯ ವಿಶೇಷವಾಗಿ ನಮ್ಮೂರ ಜನತೆಯ ಹಣಕಾಸು ವ್ಯವಸ್ಥೆಗೆ ಸಹಯೋಗವನ್ನು ನೀಡವಲ್ಲಿ ಈ ಬ್ಯಾಂಕ್ನ ಸಾಧನೆ ಅನನ್ಯವಾದುದು.
ಭಾರತ್ ಬ್ಯಾಂಕ್ ಜನಸಾಮಾನ್ಯರಿಗೆ ಲೈಫ್ ನೀಡಿದ ಸಂಸ್ಥೆಆಗಿದೆ. ಇಂತಹ ವೈಶಿಷ್ಟತೆಗಳು ಬೇರೆ ಯಾವುದೇ ಬ್ಯಾಂಕ್ಗಳಲ್ಲಿ ಕಾಣಸಿಗದು. ಇದರ ಉನ್ನತಿಗೆ ಗ್ರಾಹಕರ ವಿಶ್ವಾಸವೇ ಪ್ರಮಾಣಪತ್ರ (ಸರ್ಟಿಪಿಕೇಟ್) ಆಗಿದೆ ಎಂದು ಎಂ.ಡಿ.ಶೆಟ್ಟಿ ಅಭಿಪ್ರಾಯಪಟ್ಟರು. ಕಟ್ಟಡ ಮಾಲೀಕ ಕೇತನ್ ಕೊಠಾರಿ ಮಾತನಾಡಿ ಈ ಪ್ರದೇಶದ ಜನತೆಗೆ ವಿಶ್ವಾಸನೀಯ ಬ್ಯಾಂಕ್ ಆಗಿ ಸೇವಾ ನಿರತಗೊಂಡು ಶ್ರೇಯೋಭಿವೃದ್ಧಿಯತ್ತ ಸಾಲಗಿ ಎಂದು ಆಶಯ ವ್ಯಕ್ತಪಡಿಸಿದರು. ಭಾರತ್ ಬ್ಯಾಂಕ್ನಲ್ಲಿ ಅಪಾರ ನಂಬಿಕೆಯನ್ನಿರಿಸಿದೆ.
ಇದನ್ನು ಬಲಪಡಿಸುವಲ್ಲಿ ನಾವುಗಳು ಬ್ಯಾಂಕ್ನ ಮತ್ತಷ್ಟು ಸೇವೆಯನ್ನು ಪಡೆಯುವ ಪ್ರಯತ್ನ ನಡೆಸಲುದ್ದೇಶಿಸಿದ್ದೇವೆ. ಎಲ್ಲರಿಗೂ ಈ ಬ್ಯಾಂಕ್ ಒಳಿತನ್ನೇ ಕರುಣಿಸಲಿ ಎಂದು ಉದ್ಯಮಿ ಡಾ| ನೇಮಿಚಂದ್ ಚ್ಹಾಜೇದ್ ಶುಭಾರೈಸಿದರು. ಸಮಾಜ ಸೇವಕ ಶಂಕರ್ ಕೆ.ಸುವರ್ಣ ಖಾರ್ ಮಾತನಾಡಿ ಕಾರ್ಮಿಕರಿಂದ ಮಾಲಿಕರವರೆಗೆ, ನೌಕರರಿಂದ ಉದ್ಯಮಿಗಳ ತನಕಅವರವರ ಇತಿಮಿತಿಗೆ ಅನುಗುಣವಾಗಿ ಆರ್ಥಿಕ ಸೇವಾ ನಿವಾರಣೆ ಪೂರೈಸುವಲ್ಲಿ ಭಾರತ್
ಬ್ಯಾಂಕ್ ಮುಂಚೂಣಿಯಲ್ಲಿದೆ.
ಇದರ ಪ್ರಾಮಾಣಿಕತೆ ಮತ್ತು ದಕ್ಷ ಸೇವೆ ಬ್ಯಾಂಕ್ನ್ನು ಶಿಖರಕ್ಕೇರಿಸಿದೆ. ಜಯ ಸುವರ್ಣರ ಶತ ಶಾಖೆಗಳ ಸ್ವಪ್ನವು ಶೀಘ್ರವೇ ನನಸಾಗಲಿ. ಬ್ಯಾಂಕ್ ಮತ್ತಷ್ಟುಉಜ್ವಲ ಭವಿಷ್ಯವನ್ನು ರೂಪಿಸಲಿ ಭವಿಷ್ಯ ಉಜ್ವಲಗೊಳ್ಳಲಿ ಎಂದರು. ಗೌರವ್ವಾನಿತ ಗಣ್ಯರುಗಳಾಗಿ ಮಹಾನೀಯರುಗಳಾದರಘುರಾಮ ಕೆ.ಶೆಟ್ಟಿ ಬೆಳಗಾಂ, ಸಿಎ| ಅಶ್ವಜಿತ್ ಹೆಜ್ಮಾಡಿ, ಪ್ರಶಾಂತ್ ಕೋಟ್ಯಾನ್, ರತ್ನಾಕರ್ ಶೆಟ್ಟಿ ಮುಂಡ್ಕೂರು, ನಾರಾಯಣ ಪೂಜಾರಿ, ಪುಷ್ಫರಾಜ್ ಶೆಟ್ಟಿ, ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕರುಗಳಾದ ಎಲ್.ವಿ ಅಮೀನ್, ಎನ್.ಎಂ ಸನೀಲ್, ಎನ್. ನಿತ್ಯಾನಂದ್ ಮತ್ತು ಸ್ಥಳಿಯ ನೂತನ ಗ್ರಾಹಕರು ಉಪಸ್ಥಿತರಿದ್ದು ಪಥಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ವಾಸುದೇವ ಆರ್. ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಹರೀಶ್ಚಂದ್ರ ಜಿ. ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ.ಪೂಜಾರಿ, ಕೆ.ಬಿ.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಉಪಸ್ಥಿತರಿದ್ದು ಶುಭೇಚ್ಛಕೋರಿದರು.
ಉಳ್ಳೂರು ಧನಂಜಯ್ ಶಾಂತಿ, ವಾಸ್ತುಪೂಜೆ, ಉಳ್ಳೂರು ದಿನೇಶ್ ಶಾಂತಿ ಅವರು ಗಣಹೋಮ ನೆರವೇರಿಸಿ ಹರಸಿದರು. ಶ್ರೀ ಶೇಖರ ಶಾಂತಿ ಉಳ್ಳೂರು ದ್ವಾರಪೂಜೆ ನಡೆಸಿದ್ದು, ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಮೋಹನ್ ಕರ್ಕೇರ ಮತ್ತು ರಂಜನಿ ಮೋಹನ್ ಹಾಗೂ ಪುಷ್ಪ ಕಿರಣ್ ಮತ್ತು ಕಿರಣ್ ಪೂಜಾರಿ ದಂಪತಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡಿದ್ದರು.
ಬ್ಯಾಂಕ್ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ಸುರೇಶ್ ಎಸ್.ಸಾಲ್ಯಾನ್, ವಿವೇಕ್ ಎಸ್. ಶ್ಯಾನ್ಭಾಗ್, ಪ್ರಭಾಕರ್ ಜಿ.ಸುವರ್ಣ, ವಿದ್ಯಾನಂದ್ ಎಸ್.ಕರ್ಕೇರ, ವಿಶ್ವನಾಥ ಜಿ.ಸುವರ್ಣ, ದಿನೇಶ್ ಬಿ.ಸಾಲ್ಯಾನ್, ಸಹಾಯಕ ಪ್ರಧಾನ ಪ್ರಬಂಧಕರುಗಳಾದ ವಾಸುದೇವ ಎಂ.ಸಾಲ್ಯಾನ್, ಸತೀಶ್ ಬಂಗೇರಾ, ನ್ಯಾ| ಯು.ಧನಂಜಯ್ ಕುಮಾರ್, ಹಿರಿಯ ಪ್ರಬಂಧಕರುಗಳಾದ ಗೋಪಾಲ್ ಕೋಟ್ಯಾನ್, ರತ್ನಾಕರ್ ಸಾಲ್ಯಾನ್, ಸುವರ್ಣ, ಬ್ಯಾಂಕ್ನ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ವಿಭಾಗದ ಸುನೀಲ್ ಗುಜರನ್, ಸುಧೀರ್ ಸುವರ್ಣ, ವಿಜಯ ಪಾಲನ್, ಅವೀಶ್ ಪೂಜಾರಿ, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಕಿರಣ್ ಬಿ.ಅಮೀನ್ ಹಾಗೂ ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ ಮತ್ತು ಬ್ಯಾಂಕ್ನ ಹಲವಾರು ಉನ್ನತಾಧಿಕಾರಿಗಳು ಸೇರಿದಂತೆ ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದು ಶಾಖೆಯ ಉನ್ನತಿಗೆ ಶುಭಕೋರಿದರು.
ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಸ್ವಾಗತಿಸಿ ಬ್ಯಾಂಕ್ನ ಸೇವಾ ವೈಖರಿಯನ್ನು ಪ್ರಸ್ತಾಪಿಸುತ್ತಾ ಕಾರ್ಯಕ್ರಮ ನಿರ್ವಹಿಸಿದರು. ಶಾಖೆಯ ಮುಖ್ಯಸ್ಥೆ ಸುರೇಖಾ ರಾವ್, ಅಧಿಕಾರಿಗಳಾದ ವಿದ್ಯಾ ಆರ್.ಸನೀಲ್, ಮಹೇಶ್ ಆರ್.ಕೋಟ್ಯಾನ್, ಆಶ್ನಾ ಸಿ.ಅಮೀನ್ ಮತ್ತು ಅಕ್ಷಯ್ ಆರ್. ಅಮೀನ್ ಅತಿಥಿಗಳಿಗೆ ಪುಷ್ಫಗುಪ್ಚವನ್ನೀಡಿ ಸುಖಾಗಮನ ಬಯಸಿದರು.
ಸಹಾಯಕ ಪ್ರಬಂಧಕ ಮೋಹನ್ ಕರ್ಕೇರಧನ್ಯವಾದ ಸಮರ್ಪಿಸಿದರು. ಶಾಖೆಯ ಶುಭಾರಂಭದ ಮೊದಲದಿನವೇ ಸುಮಾರು 1,000 ನೂತನ ಖಾತೆಗಳು ತೆರೆಯುವ ಮತ್ತು ರೂಪಾಯಿ10 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಹಿಸುವ ಗುರಿಯನ್ನು ಹೊಂದಿದ್ದೇವೆ. ಬೃಹನ್ಮುಂಬಯಿಯಲ್ಲಿನ ಬ್ಯಾಂಕ್ ಅಸೋಸಿಯೇಶನ್ ಸಂಸ್ಥೆಯು ವರ್ಷಂಪ್ರತಿ ಆಯ್ಕೆ ಗೊಳಿಸುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್ಗಳ ಸ್ಪರ್ಧೆಯಲ್ಲಿ 2014ರ ಹಣಕಾಸು ಸಾಲಿನ ಒಂದು ಸಾವಿರದ ಐನೂರು ಕೋಟಿ
ಮೊತ್ತಕ್ಕಿಂತ ಅಧಿಕ ಠೇವಣಿ ಹೊಂದಿದ ಸಹಕಾರಿ ಬ್ಯಾಂಕುಗಳ ಪೈಕಿ ಈ ಬಾರಿ ಭಾರತ್ ಬ್ಯಾಂಕ್ಗೆ ಪ್ರಪ್ರಥಮ ಸ್ಥಾನಲಭ್ಯವಾಗಿರುವುದೇ ಬ್ಯಾಂಕ್ನ ಸರ್ವೋತ್ಕೃಷ್ಟ ಸೇವೆ ಮತ್ತು ಗುಣಮಟ್ತಕ್ಕೆ ಸಾಕ್ಷಿಯಾಗಿದೆ ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ತಿಳಿಸಿದರು.










