ಬಂಟ್ವಾಳ : ಭಾರತದ ಸಂವಿಧಾನ ಮತ್ತು ಅದಕ್ಕೆ ಪೂರಕವಾದ ಭಾರತದ ಆಡಳಿತ ವ್ಯವಸ್ಥೆಯ ಬೆಳವಣಿಗೆಯ ಜ್ಞಾನವನ್ನು ನಾವೆಲ್ಲ ಪಡೆಯಬೇಕು. ಅದಕ್ಕೆ ರಾಜಕೀಯ ಶಾಸ್ತ್ರದ ಅರಿವು ಅಗತ್ಯ. ಕಲಾ ವಿಭಾಗದಲ್ಲಿ ತಂತ್ರಜ್ಞಾನದಂತಹ ಆಧುನಿಕ ವಿಷಯಗಳನ್ನು ಅಳವಡಿಸಿಕೊಂಡಾಗ ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲು ಸಾಧ್ಯ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಹೇಳಿದರು.
ಅವರು ಕಾಲೇಜಿನಲ್ಲಿ ನಡೆದ ಕಲಾ ಪದವಿಯ ರಾಜ್ಯಶಾಸ್ತ್ರ ಪಠ್ಯ ವಿಷಯ ಕುರಿತ ಕಾರ್ಯಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
Political Science
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷೆ ಪ್ರೊ. ಅಕ್ಕಮ್ಮ ಮಾತನಾಡಿ ರಾಜ್ಯಶಾಸ್ತ್ರದ ಉಪನ್ಯಾಸಕರಾದವರು ವಿಷಯ ಕುರಿತು ಸಂಪೂರ್ಣ ಅರಿವು ಪಡೆದು ಪರಿಣಾಮಕಾರಿಯಾಗಿ ಭೋದಿಸಬೇಕು ಎಂದರು.
ಕಾರ್ಯಗಾರದ ಸಂಯೋಜಕ ಪ್ರೊ. ನಾರಾಯಣ ಭಂಡಾರಿ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಉಪನ್ಯಾಸಕ ಸಂಘದ ಕೋಶಾಧಿಕಾರಿ ಪ್ರೊ. ಕೃಷ್ಣಾನಂದ ವಂದಿಸಿದರು. ಉಪನ್ಯಾಸಕಿ ಪ್ರೊ. ಸಕೀನಾ ನಾಸರ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *