ಬಂಟ್ವಾಳ : ಕಾಲ ಬದಲಾದಂತೆ ನಮ್ಮ ಬದುಕುವ ಶೈಲಿಯೂ ಬದಲಾಗುತ್ತದೆ. ಆಧುನಿಕತೆಗೆ ತಕ್ಕ ಸೌಲಭ್ಯವನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಶಿಕ್ಷಣ ವ್ಯವಸ್ಥೆಗೆ ಪೂರಕವಾದ ಸೌಲಭ್ಯಗಳು ನಮ್ಮ ಹತ್ತಿರಕ್ಕೆ ಬಂದಾಗ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕು. ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿ ಉಳಿಸುವುದು ನಮ್ಮ ಜವಾಬ್ದಾರಿ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಹೇಳಿದರು.
ಅವರು ಇಂದು ಕಾಲೇಜನಲ್ಲಿ ವಿದ್ಯಾರ್ಥಿಗಳ ಪ್ರಯೋಜನಾರ್ಥ ಸಿದ್ದಗೊಂಡ ನೂತನ ಕಾಲೇಜು ಬಸ್ ವ್ಯವಸ್ಥೆಯ ಉದ್ಧಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ಬಸ್ ವ್ಯವಸ್ಥೆಯನ್ನು ಉದ್ಧಾಟಿಸಿದರು.
DSC_8884
ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶಶಿಕಲಾ ಕೆ ವಂದಿಸಿದರು. ಕಾಲೇಜಿನ ಉಪಪ್ರಾಂಶುಪಾಲ ತುಕಾರಾಂ ಪೂಜಾರಿ, ಪ್ರಾಧ್ಯಾಪಕರಾದ ಡಾ| ಟಿ. ಕೆ. ರವೀಂದ್ರನ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *