ಬಂಟ್ವಾಳ : ಬಂಟ್ವಾಳ ತಾಲೂಕು ತುಂಬೆ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜು.6ರಂದು ಜರಗಿತು. ಅಧ್ಯಕ್ಷರಾಗಿ ಹೇಮಲತಾ ಜಿ. ಪೂಜಾರಿ, ಉಪಾಧ್ಯಕ್ಷರಾಗಿ ಪ್ರವೀಣ್ ಬಿ.ತುಂಬೆ ಅ„ಕಾರ ಸ್ವೀಕರಿಸಿದರು.

ಗ್ರಾ.ಪಂ.ನೂತನ ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪುರುಷ ಸಾಲಿಯಾನ್, ಟಿ.ಸೋಮಪ್ಪ ಕೋಟ್ಯಾನ್, ಮಹಮ್ಮದ್ ವಳವೂರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಕಾಶ್ ಅಚಾರ್ಯ, ದಿನೇಶ್ ಕೈವಳವೂರು, ಮನೋಜ್ ಆಚಾರ್ಯ, ಗಣೇಶ್ ಸುವರ್ಣ, ಮನೋಹರ ಕೋಟ್ಟಾರಿ, ಎ.ಕೆ.ಗಿರೀಶ್, ಪದ್ಮನಾಭ ಸಾಲಿಯಾನ್ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಬಕಾರಿ ಶಿವಾನಂದ ಪೂಜಾರಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಮನೋಹರ ಪರ್ಲಕ್ಕೆ ವಂದಿಸಿದರು.
