ಬಜ್ಪೆ: ಮಹಿಳೆಯೋರ್ವರ ಚಿನ್ನದ ಸರ ಹಾಗೂ ಚಿನ್ನದ ಬಳೆಗಳನ್ನು ಆರೋಪಿಗಳು ಬಲಾತ್ಕಾರವಾಗಿ ಎಳೆದುಕೊಂಡ ಹೋದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೊಂಡಮೂಲ ಗ್ರಾಮದ ಕೋಡೇಲ ಗುತ್ತು ಎಂಬಲ್ಲಿ ನಡೆದಿದೆ. ಕೊಂಡಮೂಲ ಗ್ರಾಮದ ಕೋಡೇಲ ಗುತ್ತು ನಿವಾಸಿ ಇಂದಿರಾ ಶೆಟ್ಟಿ ಪ್ರಕರಣದ ದೂರುದಾರರಾಗಿದ್ದಾರೆ.

ಇಂದಿರಾ ಶೆಟ್ಟಿ ಹಾಗೂ ಆರೋಪಿಗಳೆನ್ನಲಾದ ಸದಾನಂದ ಶೆಟ್ಟಿ, ಕೋಚು ಶೆಟ್ಟಿ ಮತ್ತು ದಾಸ ಪ್ರಕಾಶ ಶೆಟ್ಟಿ ಇವರ ಮಧ್ಯೆ ಸಾಗುವಳಿ ಭೂಮಿಯ ವಿವಾದವಿದೆ ಎನ್ನಲಾಗಿದೆ. ಮೇ.30ರಂದು ಆರೋಪಿ ಸದಾನಂದ ಶೆಟ್ಟಿ ಇಂದಿರಾ ಶೆಟ್ಟಿಯವರ ಮೈಮೇಲಿದ್ದ 4.5 ಪವನ್ ಚಿನ್ನದ ಸರ, 2 ಚಿನ್ನದ ಬಳೆ ಬಲಾತ್ಕಾರವಾಗಿ ಎಳೆದುಕೊಂಡು ಹೋಗಿದ್ದಾರೆ. ಇದನ್ನು ವಾಪಸ್ ಕೇಳಿದಾಗ ಆರೋಪಿಗಳು ಕೊಡುವುದಿಲ್ಲ ಎಂದು ಹೇಳಿದ್ದಾರೆಂದು ಇಂದಿರಾ ಶೆಟ್ಟಿ ಬಜ್ಪೆಗೆ ದೂರು ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಜೂನ್ 18ರಂದು ಸದಾಶಿವ ಶೆಟ್ಟಿ ಎಂಬವರು ಕೊಂಡೆಲ ಗುತ್ತು ಮನೆಯಲ್ಲಿ ಇರಿಸಿದ್ದ ಮಾರುತಿ ವ್ಯಾನ್ನ ಕೀಯನ್ನು ಆರೋಪಿಗಳಾದ ಕೋಚು ಶೆಟ್ಟಿ ಮತ್ತು ದಾಸ ಪ್ರಕಾಶ ಶೆಟ್ಟಿ ಇವರು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿದ್ದಾರೆ.
ಆದರೆ ಜೂನ್ 20ರಂದು ಆರೋಪಿಗಳು ಕಾರನ್ನು ವಾಪಸ್ ತಂದು ಅಂಗಳದಲ್ಲಿರಿಸಿದ್ದಾರೆ. ಆದರೆ ಕಾರಿನ ಮೂಲ ದಾಖಲೆ ಪತ್ರಗಳನ್ನು ಹಾಗೂ ಕಾರಿನ ಕೀಯನ್ನು ತೆಗೆದುಕೊಂಡು ಹೋಗಿದ್ದಾರೆಂದು ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *