ಮುಂಬಯಿ, ಜು.04: ನಗರದ ಹಿರಿಯ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಮರು ಆಯ್ಕೆಯಾದರು. ಜು.2ರಂದು ಗುರುವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಜರಗಿದ ಬಿಲ್ಲವರ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ ಸಭೆಯು ನಡೆಯಿತು. ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ.ಕೋಟ್ಯಾನ್ ಸರ್ವಾನುಮತದಿಂದ ಆಯ್ಕೆಯಾದರು.

ಡಾ| ನ್ಯಾಯವಾದಿ ಯು. ಧನಂಜಯ ಕುಮಾರ್, ಶಂಕರ ಡಿ.ಪೂಜಾರಿ, ಭಾಸ್ಕರ ವಿ.ಬಂಗೇರ ಮತ್ತು ರಾಜ ವಿ.ಸಾಲ್ಯಾನ್ ಅವರು ಉಪಾಧ್ಯಕ್ಷರಾಗಿ, ಧರ್ಮಪಾಲ ಜಿ.ಆಂಚನ್ ಅವರು ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ಮಹೇಶ್ ಕಾರ್ಕಳ ಅವರು ಗೌರವ ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಯಾದರು.ನಿತ್ಯಾನಂದ ಡಿ. ಕೋಟ್ಯಾನ್ ಕಳೆದ 23 ವರ್ಷಗಳಿಂದ ಬಿಲ್ಲವರ ಎಸೋಸಿಯೇಶನಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದ ಅವರು ಪ್ರಾರಂಭದಲ್ಲಿ ಅಸೋಸಿಯೇಶನ್ ಜತೆ ಕೋಶಾಧಿಕಾರಿಯಾಗಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಸೋಸಿಯೇಶನ್ ಸಂಚಾಲಕತ್ವದ ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಮುಂಬಯಿ ನಿಯಮಿತ ಪಥಸಂಸ್ಥೆಯಲ್ಲಿ ಸುಮಾರು ಎರಡುವರೆ ದಶಕಗಳಲ್ಲಿ ವಿವಿಧ ಹುದ್ದೆಗಳೊಂದಿಗೆ ಸೇವಾ ನಿರತರಾದ ನಿತ್ಯಾನಂದ್ ಇತ್ತೀಚೆಗಷ್ಟೇ ಭಾರತ್ ಬ್ಯಾಂಕ್ ಮಹಾ ಪ್ರಬಂಧಕರಾಗಿ ನೇಮಕಗೊಂಡಿರುವರು.
ಮೂಲತಃ ಉಡುಪಿ ಜಿಲ್ಲೆಯ ತೋನ್ಸೆ ಅಲ್ಲಿನ ನಿತ್ಯಾನಂದ್ ಅವರು ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮವತೀ ಗರೋಡಿ ಮುಂಬಯಿ ಸಮಿತಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ .
ಧರ್ಮಪಾಲ ಜಿ.ಆಂಚನ್ : ಬಿಲ್ಲವರ ಅಸೋಸಿಯೇಶನಿನಲ್ಲಿ ಜೊತ್ ಕೋಶಾಧಿಕಾರಿಯಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಿತಿಯಲ್ಲಿ ಸೇವೆ ಸಲ್ಲಿಸಿರುವ ಅಂಚನ್ ಸಾಮಾಜಿಕ ಸೇವೆಯಲ್ಲಿ ತನ್ನನ್ನು ದಾಢವಾಗಿ ತೊಡಗಿಸಿರುವ ಧರ್ಮಪಾಲ ಜಿ.ಆಂಚನ್ ಅವರು ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಮಹೇಶ್ ಕಾರ್ಕಳ: ಎಸೋಸಿಯೇಶನಿನ ಗೌ| ಪ್ರ| ಕೋಶಾಧಿಕಾರಿಯಾಗಿ ಆಯ್ಕೆಯಾಗಿರುವ ಮಹೇಶ್ ಕಾರ್ಕಳ ಅವರು ಜೊತೆ ಕಾರ್ಯದರ್ಶಿಯಾಗಿ ಜೊತೆ ಕೋಶಾಧಿಕಾರಿಯಾಗಿ ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸಿದ್ದಾರೆ. ಓರ್ವ ಹವ್ಯಾಸಿ ಪತ್ರಕರ್ತನಾಗಿರುವ ಅವರು ಅಕ್ಷಯ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಸೋಸಿಯೇಶನಿನ ಇತರ ಪದಾಧಿಕಾರಿಗಳು: ಗೌ| ಜೊತೆ ಕಾರ್ಯದರ್ಶಿಗಳಾಗಿ ಧನಂಜಯ
ಎಸ್.ಕೋಟ್ಯಾನ್, ಹರೀಶ್ ಜಿ.ಸಾಲ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಆಶಾಲತಾ ಕೋಟ್ಯಾನ್ ಆಯ್ಕೆಯಾದರು.
ಜೊತೆ ಕೋಶಾಧಿಕಾರಿಯಾಗಿ ರಾಜೇಶ್ ಜೆ.ಬಂಗೇರ, ಶಿವರಾಮ ಎಸ್.ಪೂಜಾರಿ, ಸದಾಶಿವ ಎ.ಕರ್ಕೇರ, ಮೋಹನ್ ಡಿ.ಪೂಜಾರಿ ಆಯ್ಕೆಯಾದರು. ಸೇವಾದಳದ ಜಿ.ಓ.ಸಿ.ಯಾಗಿ ಗಣೇಶ್ ಕೆ. ಪೂಜಾರಿ ಆಯ್ಕೆಗೊಂಡಿದ್ಡಾರೆ. ಮೋಹನ್ದಾಸ್ ಜಿ.ಪೂಜಾರಿ, ಎಂ.ಆನಂದ ಪೂಜಾರಿ, ರವೀಂದ್ರ ಎ.ಅಮೀನ್, ಬಿ.ರವೀಂದ್ರ ಅಮೀನ್, ಶಕುಂತಳಾ ಕೆ.ಕೋಟ್ಯಾನ್, ಬೇಬಿ ಎಸ್.ಕುಕ್ಯಾನ್, ಎನ್.ನಿತ್ಯಾನಂದ, ಶ್ರೀನಿವಾಸ್ ಆರ್.ಕರ್ಕೇರ, ದಯಾನಂದ ಆರ್.ಪೂಜಾರಿ, ರಾಜಶೇಖರ ಕೋಟ್ಯಾನ್, ಹರೀಶ ಹೆಜ್ಮಾಡಿ, ವಿಶ್ವನಾಥ್ ತೋನ್ಸೆ, ಶಿವರಾಮ್ಕೆ .ಸಾಲ್ಯಾನ್, ಪದ್ಮನಾಭ ಎ.ಪೂಜಾರಿ, ಸುಮಿತ್ರಾ ಎಸ್.ಬಂಗೇರ, ನೀಲೇಶ್ ಬಿ.ಪೂಜಾರಿ, ನಾಗೇಶ್ ಎಸ್.ಕೋಟ್ಯಾನ್, ಅಶೋಕ್ ಕುಕ್ಯಾನ್ ಸಸಿಹಿತ್ಲು, ಉಮೇಶ್ ಎನ್.ಕೋಟ್ಯಾನ್ ಅವರು ಆಯ್ಕೆಯಾದರು.



