ದೆಹಲಿ: ಗ್ಯಾಸ್ ಗಾಗಿ ಪರದಾಡ ಬೇಕಾದ ದಿನಗಳು ಇನ್ನು ದೂರವಾಗಲಿದೆ.ಈಗ ಭಾರತದ ಕಿರಾಣಿ ಅಂಗಡಿ ಮತ್ತು ಶಾಪಿಂಗ್‌‌ಮಾಲ್‌ ನಲ್ಲಿ ಕೂಡ ಅಡುಗೆ ಅನಿಲ ಸಿಗುವ ದಿನಗಳು ಇನ್ನು ದೂರವಿಲ್ಲ. ಸುರಕ್ಷತೆಯಿಂದ ಅಂಗಡಿ ಮತ್ತು ಶಾಪಿಂಗ್‌‌ ಮಾಲ್ ನಲ್ಲಿ ಎಲ್‌‌ಪಿಜಿಯ ಮಾರಾಟ ಪ್ರಾರಂಭವಾಗಲಿದೆ ಎಂದು ಕಂಪೆನಿಯ ವರಿಷ್ಠ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಿ ಜನರು, ವಿಧ್ಯಾರ್ಥಿಗಳು, ಬಿಪಿಓ ಮತ್ತು ಐಟಿ ನೌಕರರನ್ನು ದೃಷ್ಟಿಯಲ್ಲಿಟ್ಟುಕೊಂಡ ಸರ್ಕಾರ ಪೆಟ್ರೋಲ್‌‌ ಪಂಪ್‌ ಜೊತೆಗೆ ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ಸಿಲಿಂಡರ್ ಮಾರಾಟ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

gas

ಗೋರಕ್‌ಪೂರ, ಲಖನೌ, ಅಲಿಘಢ್‌ , ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಆಯ್ದ 11 ಅಂಗಡಿಗಳಲ್ಲಿ ಎಲ್‌ಪಿಜಿ ಮಾರಾಟವಾಗುತ್ತಲಿದೆ. ಅತಿ ಬೇಗ ದೆಹಲಿ ಸಹಿತ ಇತರ 50 ನಗರಗಳಲ್ಲಿ ಈ ಸೌಲಭ್ಯ ಪ್ರಾರಂಭ ಮಾಡಲಾಗುವುದು. ಪೆಟ್ರೋಲಿಯಂ ಸಚಿವಾಲಯದ ಅನುಮತಿ ಪಡೆದುಕೊಂಡು 5 ಕೆ.ಜಿಯ ಸಿಲಿಂಡರ್‌ ಮಾರಾಟ ಪ್ರಾರಂಭವಾಗಿದೆ. ಈ ಐದು ಕಿಲೋ ಸಿಲಿಂಡರ್‌ನ ಬೆಲೆ 1600ರಿಂದ 1700 ರೂಪಾಯಿಗಳ ನಡುವೆ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಇದರಲ್ಲಿ ಸೆಕ್ಯೂರಿಟಿ ಮತ್ತು ರೆಗ್ಯುಲೇಟರ್‌ ಬೆಲೆ ಕೂಡ ಇದೆ. ಆದರೆ ಗ್ಯಾಸ್ ಖಾಲಿಯಾದ ನಂತರ ಮತ್ತೊಮ್ಮೆ ಗ್ಯಾಸ್ ತುಂಬಲು ಕೇವಲ ಗ್ಯಾಸ್‌ನ ಬೆಲೆ ಮಾತ್ರ ಭರಿಸಬೇಕಾಗುತ್ತದೆ. ಈ ಸಣ್ಣ ಗ್ಯಾಸ್ ಪಡೆಯಲು ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ , ಪ್ಯಾನ್‌ ಕಾರ್ಡ್ , ಆಧಾರ ಕಾರ್ಡ್ , ಬ್ಯಾಂಕ್ ಪಾಸ್‌ಬುಕ್ , ಪಾಸಪೋರ್ಟ್‌ ಇತ್ಯಾದಿ ಒಂದು ಗುರುತಿನ ಚೀಟಿ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

By suddi9

Leave a Reply

Your email address will not be published. Required fields are marked *