ಬಂಟ್ವಾಳ: ಆದಾಯ ಪ್ರಮಾಣ ಪತ್ರ ಪಡೆಯಲು ಬಿ.ಸಿ.ರೋಡಿನ ನಾಡಕಚೇರಿಯಲ್ಲಿ ಸೋಮವಾರ ನೂಕುನುಗ್ಗಲು ಉಂಟಾಗಿದೆ. ಇಲ್ಲಿನ ಹಳೇ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲೆ, ದೃಢಪತ್ರಗಳನ್ನು ಪಡೆಯಲು ಹರ ಸಾಹಸ ಪಡಬೇಕಾಯಿತು. ಇಲ್ಲಿನ ಕಚೇರಿಯ ಜಗಲಿಯಲ್ಲಿ ಉದ್ದನೆಯ ಸರತಿ ಸಾಲು ಕಂಡು ಬಂದಿದ್ದು ಕಂದಾಯ ಇಲಾಖೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Adhar

Adhar1

manavi
ಇದೇ ಸಂದರ್ಭ ಕೆಲ ಬ್ರೋಕರ್‍ಗಳು ಸರತಿ ತಪ್ಪಿಸಿ ಮಧ್ಯದಲ್ಲಿ ನುಗ್ಗಿ ಕೆಲಸ ಮಾಡಿಕೊಳ್ಳುತ್ತಿದ್ದುದರಿಂದ ಪರಸ್ಪರ ಮತಿನ ಚಕಮಕಿಯೂ ನಡೆಯಿತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು ಚಿಕ್ಕ ಮಕ್ಕಳನ್ನು ಹಿಡಿದುಕೊಂಡು ಸರತಿ ಸಾಲಿನಲ್ಲಿ ಕಾಯುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇದು ಯಾವುದಕ್ಕೆ ಸರತಿ ಸಾಲು ಎನ್ನುವುದು ಗೊತ್ತಗದೆ ಕೆಲ ವೃದ್ದರು ಆಧಾರ್ ಕಾರ್ಡ್ ಪಡೆಯಲು ಇದೇ ಸರತಿಯಲ್ಲಿ ಕಾದು ಬೇಸ್ತು ಬಿದ್ದರು.

By Suddi9

Leave a Reply

Your email address will not be published. Required fields are marked *