ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಶರಣಪ್ಪ ಐಪಿಎಸ್ ರವರ ಆದೇಶ  ಡಿ.ಸಿ.ಐ.ಬಿ ಪೊಲೀಸರು ಮಂಗಳೂರು ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಟಾರು ಸೈಕಲ್ ಕಳ್ಳತನ ಮಾಡಿದ್ದ ಅಭಿಜಿತ್ ಪ್ರಾಯ 23 ವರ್ಷ ತಂದೆ  ಕೃಷ್ಣ ಅಜ್ಜಿಬೆಟ್ಟು ಮನೆ, ಅಜ್ಜಿಬೆಟ್ಟು ಶಾಲೆಯ ಹತ್ತಿರ, ಬಿ ಮೂಡಾ ಗ್ರಾಮ ಬಂಟ್ವಾಳ ತಾಲೂಕು. ಎಂಬ ಆರೋಪಿಯನ್ನು ವಶಕ್ಕೆ ಪಡೆದು ಕಳವು ಮಾಡಿದ ಮೋಟಾರು ಸೈಕಲ್ ಗಳನ್ನು  ವಶಪಡಿಸಿಕೊಂಡಿರುತ್ತಾರೆ. ಈತನು ಈ ಹಿಂದೆ ಮಂಗಳೂರು ನಗರದ ಬಂದರು ಠಾಣಾ ಸರಹದ್ದಿನಲ್ಲಿ ಬೈಕ್ ಕಳ್ಳತನ ಮತ್ತು ಬಂಟ್ವಾಳದ ವಕೀಲರೊಬ್ಬರ ಕಾರು ಕಳ್ಳತನ ಸೇರಿದಂತೆ ಹಲವಾರು ವಾಹನ ಕಳ್ಳತನ ಪ್ರರಕಣಗಳಲ್ಲಿ ಭಾಗಿಯಾಗಿ  ಇತ್ತಿಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದನು.

DSC_7560

ಈ ದಿನ ಡಿಸಿಐಬಿ ಫ್ರಭಾರ ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಖಚಿತವರ್ತಮಾನದಂತೆ    ಬಿಸಿರೋಡ್ ಜಂಕ್ಷನ್ನಲ್ಲಿ ಬಂದು ಕಾಯುತ್ತಿದ್ದಾಗ ಮೆಲ್ಕಾರ್ ಕಡೆಯಿಂದ ಬಿಸಿರೋಡ್ ಕಡೆಗೆ ಬಂದ ಕಪ್ಪು ಬಜಾಜ್ ಮೋಟಾರ್ ಸೈಕಲ್ನ್ನು ನಿಲ್ಲಿಸುವಂತೆ ಸೂಚಿಸಿದಾಗ ಒಮ್ಮೆಲೆ ಬೈಕ್ ನಿಲ್ಲಿಸದೆ ಮೋಟಾರ್ ಸೈಕಲ್ನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದಾಗ ಸುತ್ತುವರಿದು ಅವನನ್ನು ಹಿಡಿದುವಿಚಾರಿಸಿದಾಗ ಮೋಟಾರ್ ಸೈಕಲ್ ಸವಾರನನ್ನು ಹಿಡಿದು ವಿಚಾರಿಸಲಾಗಿ ಸುಮಾರು ಒಂದು ವಾರದ ಹಿಂದೆ ಮಂಗಳೂರಿನ ಎಂಪ್ಶೆರ್ ಮಳಿಗೆಯ ಹತ್ತಿರದಿಂದ ಕೀ ಸಮೇತ ನಿಲ್ಲಿಸಿಟ್ಟಿದ್ದ ಬೈಕ್ನ್ನು ಕಳವು ಮಾಡಿಕೊಂಡು ಬಂದುದಾಗಿಯೂ ತಿಳಿಸಿದನು.

ಆರೋಪಿಯನ್ನು ಕೂಲಂಕುಷವಾಗಿ ವಿಚಾರಿಸಿದಾಗ ಸುಮಾರು 8 ತಿಂಗಳ ಹಿಂದೆ ಬಿಸಿರೋಡ್ ಲೊರೆಟ್ಟೋ ಪದವು ಟಿಪ್ಪುನಗರ ಎಂಬಲ್ಲಿಂದ ಒಂದು ಬಜಾಜ್ ಪಲ್ಸರ್ ಬೈಕ್ನ್ನು ಕಳವು ಮಾಡಿ ಮಾರಾಟ ಮಾಡುವರೇ ಯಾರು ಸಿಗದೆ ಇದ್ದುದರಿಂದ ಸುಮಾರು ಒಂದು ತಿಂಗಳು ಅದನ್ನು ಉಪಯೋಗಿಸಿ ಬಾಂಬಿಲದಲ್ಲಿ ಬಿಟ್ಟು ಹೋಗಿದ್ದನು. ಬಂಟ್ವಾಳ ನಗರ ಠಾಣಾ  ಆರೋಪಿಯನ್ನು ಮತ್ತು ಮಂಗಳೂರು ನಗರದ ಬಕೆ ಪೊಲೀಸ್ ಠಾಣೆಯ ಸಂಬಂಧಪಟ್ಟ  ಸ್ವಾದೀನ ಪಡಿಸಿಕೊಂಡ ಬೈಕ್ ಅನ್ನು  ಮುಂದಿನ ಕ್ರಮದ ಬಗ್ಗೆ  ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಿರುತ್ತಾರೆ.
ಈ ಕಾರ್ಯಚರಣೆಯಲ್ಲಿ ಡಿಸಿಐಬಿ ಪ್ರಭಾರಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿಮಂಜುಳ  ಹಾಗೂ ಸಿಬ್ಬಂದಿಯವರಾದ  ಎಎಸ್ಐ¸ಸಂಜೀವ ಪುರುಷ, ಉದಯ ರೈ, ತಾರನಾಥ್, ಪಳನಿವೇಲು, ಇಕ್ಬಾಲ್, ಮತ್ತು ಚಾಲಕರಾದ  ವಾಸುನಾಯ್ಕ ರವರುಗಳು ಭಾಗವಹಿಸಿರುತ್ತಾರೆ.

 

 

By Suddi9

Leave a Reply

Your email address will not be published. Required fields are marked *