ಬಂಟ್ವಾಳ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಶನಿವಾರ ರಾತ್ರಿ ನಾವೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೈಂದಲ ಎಂಬಲ್ಲಿ ನಡೆದಿದೆ. ಉಮೇಶ್ ಮಡಿವಾಳ ಎಂಬವರ ಪುತ್ರ ಪ್ರದೀಪ್ (18) ಮೃತ ದುರ್ದ್ಯೆವಿ.
ತನ್ನ ಮೊಬೈಲ್ ಪೋನನ್ನು ಚಾರ್ಜ್ ಗೊಳಿಸಲು ಚಾರ್ಜರ್ ಸಿಕ್ಕಿಸುತ್ತಿದ್ದ ವೇಳೆ ಏಕಾಏಕಿ ಅಪ್ಪಳಿಸಿದ ಸಿಡಿಲಿನಿಂದ ಈ ದುರ್ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
images

ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ಮನೆಮಂದಿ ತಿಳಿಸಿದ್ದಾರೆ. ಮೃತದೇಹವನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

By Suddi9

Leave a Reply

Your email address will not be published. Required fields are marked *