ಬಂಟ್ವಾಳ : ಮಂಗಳೂರು-ಬೆಂಗಳೂರು , ಮಂಗಳೂರು-ಧರ್ಮಸ್ಥಳ ಮುಂತಾದ ಪ್ರಮುಖ ರಸ್ತೆಗಳು ಒಟ್ಟು ಸೇರುವ ಬಿ.ಸಿ.ರೋಡ್ ನ ಪ್ರಮುಖ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಯುವವಾಹಿನಿ(ರಿ). ಬಂಟ್ವಾಳ ತಾಲೂಕು ಘಟಕವು ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ , ಪರಿಸರ, ಜೀವಿಶಾಸ್ತ್ರ ಸಚಿವ ರಾದ ಬಿ.ರಮಾನಾಥ ರೈ ಯವರಿಗೆ ಜೂ.28ರಂದು ಭಾನುವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಯುವವಾಹಿನಿ ಘಟಕದ ಅಧ್ಯಕ್ಷರಾದ ರಾಜೇಶ್ ಸುವರ್ಣ , ಪುರಸಭಾ ಸದಸ್ಯರಾದ ವಾಸು ಪೂಜಾರಿ ಮತ್ತು ಲೋಕೇಶ್ ಸುವರ್ಣ , ಯುವವಾಹಿನಿ ಮಾಜಿ ಅಧ್ಯಕ್ಷರಾದ ತಾರನಾಥ ಕೆ. , ಭುವನೇಶ್ ಪಚ್ಚಿನಡ್ಕ , ಶ್ರೀಧರ ಅಮೀನ್ , ಹರೀಶ್ ಎಸ್.ಕೋಟ್ಯಾನ್ , ಯೋಗೀಶ್ ಪೂಜಾರಿ , ನಾಗೇಶ್ ಪೊನ್ನೋಡಿ , ಲೋಕೇಶ್ ಪೂಜಾರಿ ಪಿ., ಗಣೇಶ್ ಪೂಂಜೆರಕೋಡಿ , ಹರೀಶ್ ಕೋಟ್ಯಾನ್ ಕುದನೆ , ಹರೀಶ್ ಸಾಲ್ಯಾನ್ ಅಜೆಕಲ , ಕಿರರ್ಣ ರಾಜ್ , ಪ್ರವೀಣ್ ಸುವರ್ಣ,ಸುನೀಲ್ ಮರ್ದೋಳಿ , ಸುನೀಲ್ ಕುಮಾರ್ ಕಾಯರ್ಮಾರ್ , ನಾಗೇಶ್ ಏಲಬೆ, ಸತೀಶ್ , ಜಗದೀಶ್ ಸುವರ್ಣ ಕಕ್ಯಗುತ್ತು ,ಅರುಣ್ ಕುಮಾರ್, ಜಗದೀಶ್ , ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
