ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹುಟ್ಟುಹಬ್ಬವೆಂಬುದು ಅತ್ಯಂತ ಮಹತ್ವಪೂರ್ಣವಾದದ್ದು. ಇಂತಹ ಹುಟ್ಟುಹಬ್ಬವನ್ನು ಭಾರತೀಯ ಸಂಸ್ಕಾರದಂತೆ ನಡೆಸಿದಾಗ ಆ ಹುಟ್ಟುಹಬ್ಬದ ದಿನ ಶ್ರೇಷ್ಠ ದಿನವಾದೀತು. ಅಂತಹ ಕಾರ್ಯವನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಸುತ್ತಿರುವುದು ಶ್ರೇಯಸ್ಕರ ಎಂದು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಭಜನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಯತೀನ್ ಕುಮಾರ್ ಏಳ್ತಿಮಾರ್ ಪಂಚವಟಿ ಇಂಡಸ್ಟ್ರೀಸ್ ಮಾಲಕರು ತಿಳಿಸಿದರು.
bajane 1
ಬಂಕಿಮಚಂದ್ರ ಚಟರ್ಜಿ ಜನ್ಮದಿನದ ಅಂಗವಾಗಿ ಶ್ರೀ ರಾಧಾಕೃಷ್ಣ ಅಡ್ಯಂತಾಯ ಶ್ರೀಮಾನ್ ಬಂಕಿಮಚಂದ್ರ ಚಟರ್ಜಿ ಯವರ ಜೀವನದ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳು ಏಪ್ರಿಲ್. ಮೇ, ಜೂನ್ ತಿಂಗಳಲ್ಲಿ ಹುಟ್ಟಿದ ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಿ ಆಶೀರ್ವಾದ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಮೇಶ್ ಶ್ರೀಮಾನ್ ಮುಖ್ಯ ಶಿಕ್ಷಕರು ಶ್ರೀರಾಮ ಪ್ರೌಢಶಾಲೆ ಇವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸರೋಜ ಯತೀನ್ ಏಳ್ತಿಮಾರ್ ಭಾಗವಹಿಸಿದರು. ಪ್ರೌಢಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವಸಂತಿಕುಮಾರಿ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಹರ್ಷಿತಾ(8ಏಕಲವ್ಯ) ನಿರೂಪಿಸಿ, ಕೀರ್ತಿ (8ಏಕಲವ್ಯ) ಸ್ವಾಗತಿಸಿ ಮೇದಿನಿ(8ಏಕಲವ್ಯ) ವಂದಿಸಿದರು.

By Suddi9

Leave a Reply

Your email address will not be published. Required fields are marked *