ಬಂಟ್ವಾಳ: ಅಂತರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಸಾಗಾಟ ವಿರೋಧಿ ದಿನ ಆಚರಣೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪುದು ಗ್ರಾಮದ ಸುಜೀರು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಡಶಾಲೆಯಲ್ಲಿ ಕಾರ್ಯಗಾರ ನಡೆಯಿತು.


ಈ ಕಾರ್ಯಗಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಭಾಸ್ಕರ. ವಿ, ಸುಜೀರ್ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಆರ್. ಗುರುವ ಹಾಗೂ ಸುಜೀರು ಸರಕಾರಿ ಪ್ರೌಡಶಾಲೆಯ ಅಧ್ಯಾಪಕರಾದ ಬಿ ಮಹಮ್ಮದ್ ತುಂಬೆ ಅವರು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಜಯಪ್ರಕಾಶ್ ರವರು ನಿರೂಪಿಸಿದರು
