ಬಂಟ್ವಾಳ; ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಮಾನಸಿಕ ಸ್ಥಿತಿ ಬದಲಾಗುತ್ತದೆ, ಹದಿ ಹರೆಯದ ವಯಸ್ಸಿನಲ್ಲಿ ನಾವು ಇಡುವ ದಿಟ್ಟ ಹೆಜ್ಜೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ, ಈ ನಿಟ್ಟಿನಲ್ಲಿ ಯುವಜನಾಂಗ ಮಾದಕದ್ರವ್ಯಗಳಿಂದ ದೂರವಿರುವ ದಿಟ್ಟ ಸಂಕಲ್ಪ ತೊಡಬೇಕು ಎಂದು ಕಾರ್ಡ್ಸ್  ಸಂಸ್ಥೆಯ ಯೋಜನಾ ವ್ಯವಸ್ಥಾಪಕ ವೀರೇಶ್ ಹೇಳಿದರು. ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ಪ್ರಥಮ ದರ್ಜೆ  ಕಾಲೇಜು ಬಿಮೂಡ ಇವರ ಜಂಟಿ ಸಹಯೋಗದಲ್ಲಿ ಕಾಮಾಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಾದಕದ್ರವ್ಯ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

1 (2)

ಹಾದಿ ತಪ್ಪಿಸುವಂತಹಾ ವಿಚಾರಗಳು ನಮ್ಮನ್ನು ಬೇಗನೇ ಸೆಳೆದುಕೊಳ್ಳುತ್ತದೆ, ಈ ನಿಟ್ಟಿನಲ್ಲಿ ನಮ್ಮ ಮನಸ್ಸುಗಳನ್ನು ಸ್ವಯಂ ನಿಯಂತ್ರಣದಲ್ಲಿಟ್ಟುಕೊಂಡು ಸುಂದರ ಭವಿಷ್ಯವನ್ನು ಹೊಂದುವಂತೆ ಅವರು ಕರೆ ನೀಡಿದರು. ಕಾಳೇಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಪ್ರೊಭೆಷನರಿ ಎಸೈ ಮಂಜುನಾಥ್ ಮಾದಕ ದ್ರವ್ಯ ತಡೆಗೆ ಪೂರಕವಾದ ಕಾನೂನುಗಳ ಮಾಹಿತಿ ನೀಡಿದರು. ನಗರ ಠಾಣಾಧಿಕಾರಿ ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದಕದ್ರವ್ಯ ಸೇವನೆ, ಸಾಗಾಟದಂತಹಾ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಕಾಲೇಜು ವಿದ್ಯಾರ್ಥಿನಿ ಗಾಯತ್ರಿ ಪ್ರಾರ್ಥಿಸಿದರು, ವಿನುತಾಕ್ಷಿ ಸ್ವಾಗತಿಸಿದರು, ಪೊಲೀಸ್ ಸಿಬ್ಬಂದಿ ಅಬ್ದುಲ್ ಕರೀಂ ವಂದಿಸಿದರು. ರಾಜ್ಯ ಗುಪ್ತವಾರ್ತೆಯ ಸಿಬ್ಬಂದಿ ಶ್ರೀಧರ್.ಬಿ. ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *