ಮುಂಬಯಿ : ಕನ್ನಡಕಸ್ತೂರಿಟೊರೊಂಟೋ, ಬಿ.ವಿ ನಾಗ್ ಕಮ್ಯೂನಿಕೇಷನ್ ಇನ್ ಕಾರ್ಪೋರೇಶನ್  ಕೆನಡಾ ಮತ್ತು ಹೃದಯವಾಹಿನಿ ಕನ್ನಡ ಮಾಸಿಕ ಮಂಗಳೂರು ಇವುಗಳ ಸಹಯೋಗದೊಂದಿಗೆ ಇದೇ ಜೂ.27 ಮತ್ತು 28ರಂದು ಕೆನಡಾದ ಟೊರೊಂಟೋದಲ್ಲಿ ನಡೆಯಲ್ಪಡುವ ಹನ್ನೊಂದನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ

ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮಕೆ.ಭಂಡಾರಿ ಅತ್ತೂರು ಅವರಿಗೆ ವಿಶ್ವಮಾನ್ಯರು ಪ್ರಶಸ್ತಿ-2015 ಪ್ರಶಸ್ತಿಪ್ರದಾನಿಸಿ ಗೌರವಿಸಲಾಗುವುದು ಎಂದು ಸಮ್ಮೇಳನ ಸಮಿತಿ ಕೆನಡಾ ಅಧ್ಯಕ್ಷ ಮತ್ತು ಭಾರತೀಯ ನಿರೀಕ್ಷಕ ಬಿ.ವಿ ನಾಗರಾಜು ತಿಳಿಸಿದ್ದಾರೆ.

Shivaram Bhandary-A
ಸಮ್ಮೇಳನವು ಗ್ರ್ಯಾಂಡ್ ವಿಕ್ಟೋರಿಯನ್ ಕನ್ವೇನ್‍ಶನ್ ಸೆಂಟರ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಉದ್ಯಮ ಗೋಷ್ಠಿ, ಕವಿಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ನಡೆಯಲಿದೆ ಎಂದು ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಭಾನುವಾರ ಥೈಲ್ಯಾಂಡ್ ರಾಷ್ಟ್ರದ ಬ್ಯಾಂಕಾಕ್‍ನಲ್ಲಿ 2015ರ ಜಾಗತಿಕ ಸಾಧಕ ಉದ್ಯಮಶೀಲರ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾದ ಮುಂಬಯಿಯಲ್ಲಿನ ಉಅದಯೋನ್ಮುಖ ಯುವ ಉದ್ಯಮಿ, ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ನಾಡಿನ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಅತ್ತೂರು ಶಿವರಾಮ್ ಕೆ.ಭಂಡಾರಿ ಅವರಿಗೆ ಡಾಕ್ಟರೇಟ್ ಸನದು ಪ್ರದಾನಿಸಿ ಗೌರವಿಸಿದರು.

ತನ್ನ ಮಮತೆಯ ಮಾತೆ ಶ್ರೀಮತಿ ಗುಲಾಬಿ ಭಂಡಾರಿ ಅವರ ಆಸರೆಯಲ್ಲಿ ಬೆಳೆದು ಮುಂಬಯಿ ಸೇರಿ ಸಲೂನ್‍ನಲ್ಲಿ ಕೆಲಸ ನಿರ್ವಹಿಸುತ್ತಾ ತನ್ನ ಸಾಧನೆಯಿಂದ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ, ಪ್ರತಿಷ್ಠಿತ ಕೇಶ ವಿನ್ಯಾಸಗಾರದ  ಶಿವರಾಮ ಕೆ.ಭಂಡಾರಿ ಅವರ ಅನನ್ಯ ಸಾಧನೆಯನ್ನು ಗುರುತಿಸಿ ಗೌರವಿಸಲಾಗುವುದು ಎಂದು ಸಮ್ಮೇಳನ ಸಮಿತಿ ಕೆನಡಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ರಾವ್ ಪುತ್ತೂರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *