ಬಂಟ್ವಾಳ: ಬಂಟ್ವಾಳ ತಾಲ್ಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ರಾತ್ರಿ ವೇಳೆ ಐಕಾನ್ ಕಾರಿನಲ್ಲಿ ತೆರಳಿ ಅಡಿಕೆ ಮಾರಾಟ ಕೇಂದ್ರ ಮತ್ತು ಅಡಿಕೆ ಸಂಗ್ರಹಿಸಿಡುವ ಗೋದಾಮಿಗೆ ನುಗ್ಗಿ ಅಡಿಕೆ ಕಳವು ಮಾಡುತ್ತಿದ್ದ ಐವರು ಅಂತರ್ ಜಿಲ್ಲಾ ಅಡಿಕೆ ಕಳ್ಳರನ್ನು ಮಂಗಳವಾರ ಬಂಧಿಸಿದ್ದ ಬಂಟ್ವಾಳ ನಗರ ಠಾಣೆ ಪೊಲೀಸರು ಬುಧವಾರ ಬಿ.ಸಿ.ರೋಡ್ ಜೆಎಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ಆ.5ರತನ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ತಾಲ್ಲೂಕಿನ ವಿಟ್ಲ ಸಹಿತ ಪಣಂಬೂರು, ಮಂಗಳೂರು, ಬೆಳ್ತಂಗಡಿ, ವಿಟ್ಲ, ಉಡುಪಿ ಮತ್ತಿತರ ಕಡೆಗಳಲ್ಲಿ ಅಡಿಕೆ ಕಳವು ಪ್ರಕರಣದಲ್ಲಿ ಇವರು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಕಂಡು ಬಂದಿದೆ.
ಬಂಧಿತರನ್ನು ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿ ಮಹಮ್ಮದ್ ನವಾಝ್, ಮಹಮ್ಮದ್ ಶಾಫಿ, ಮಂಗಳೂರಿನ ಕುಳಾಯಿ ನಿವಾಸಿ ವಿಜಯ, ಪೆರ್ಮನ್ನೂರು ನಿವಾಸಿ ಹಬೀಬ್ ಹಸನ್, ನೀರುಮಾರ್ಗ ನಿವಾಸಿ ಮಹಮ್ಮದ್ ಅಜರುದ್ದೀನ್ ಎಂದು ಗುರುತಿಸಲಾಗಿದ್ದು, ಇವರಲ್ಲಿ ಹಬೀಬ್ ಹಸನ್ ಹೆಚ್ಚಾಗಿ ಕಾರು ಚಲಾಯಿಸುತ್ತಿದ್ದನು. ಕಳೆದ ಮೇ.14ರಂದು ರಾತ್ರಿ ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಎಂಬಲ್ಲಿ ಅಡಿಕೆ ವ್ಯಾಪಾರಿ ಕಮಲಾಕ್ಷ ಶೆಣೈ ಎಂಬವರ ಅಡಿಕೆ ಅಂಗಡಿಯಲ್ಲಿ ಸಂಗ್ರಹಿಸಿಡಲಾಗಿದ್ದ ತಲಾ 65ಕಿಲೋ ತೂಕದ ಒಟ್ಟು 8ಗೋಣಿಚೀಲ ಅಡಿಕೆ ಕಳವು ಮಾಡಿದ್ದು, ಇದರ ಒಟ್ಟು ಮೌಲ್ಯ ರೂ 1.45ಲಕ್ಷ. ಬಂಧಿತದಿಂದ ಅಡಿಕೆ ಸಹಿತ ಐಕಾರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Untitled-1 copy
ಮಂಗಳೂರು ನಗರ ಅಪರಾಧ ಪತ್ತೆ ದಳ ಇನ್ಸ್ಪೆಕ್ಟರ್ ವೆಲೆಂಟಿನ್ ಡಿಸೋಜ ನೇತೃತ್ವದ ತಂಡ ಮತ್ತು ಬಂಟ್ವಾಳದಿಂದ ಇಲ್ಲಿನ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್, ಎಎಸೈ ಸಂಜೀವ ಮತ್ತಿತರ ಪೊಲೀಸರು
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *