ಮುಂಬಯಿ, ಜೂ.23: ಕನ್ನಡ ಕಸ್ತೂರಿ ಟೊರೊಂಟೋ ಮತ್ತಿತರ ಸಂಸ್ಥೆಗಳ ಸಹಯೋಗದೊಂದಿಗೆ ಇದೇಜೂ.27 ಮತ್ತು 28ರ ಎರಡು ದಿನಗಳಲ್ಲಿ ಕೆನಡಾದ ಟೊರೊಂಟೋದಲ್ಲಿ ಆಯೋಜಿಸಿರುವ 11ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮುಂಬಯಿಯ ಹಿರಿಯ ಸಮಾಜ ಸೇವಕಎನ್.ಪಿ.ಸುವರ್ಣ ಅವರಿಗೆವಿಶ್ವ ಮಾನ್ಯರು ಪ್ರಶಸ್ತಿಪ್ರದಾನಿಸಿ ಗೌರವಿಸಲಿದೆ ಎಂದುಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Untitled-1 copy
ಮಹಾನಗರಿ ಮುಂಬಯಿಯಲ್ಲಿ ಸುಮಾರು 5 ದಶಕಗಳಿಂದ ಅವಿರತವಾಗಿ ವಿದ್ಯಾ ಹಾಗೂ ಸಮಾಜ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿರುವ ಸುವರ್ಣರು ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಸಂಸ್ಥೆಯ ಸುವರ್ಣ ಹಾಗೂ ವಜ್ರಮಹೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಿಸಿರುತ್ತಾರೆ. ಐದು ದಶಕಗಳಿಂದ ಈವರೆಗೂ ಸೊಸೈಟಿಯಲ್ಲಿ ದುಡಿಯುತ್ತಿದ್ದಾರೆ. ಬಿಲ್ಲವ ಜಾಗ್ರತಿ ಬಳಗದ ಸ್ಥಾಪನೆಯಿಂದಲೂ ಕಾರ್ಯಕಾರಿ  ಸಮಿತಿಯಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿಯಾಗಿ, ಅಕ್ಷಯ ಮಾಸಿಕದ ಪ್ರಗತಿಗಾಗಿ ಮಹತ್ತರದ ಪಾತ್ರ ವಹಿಸಿ ಅದರ ಕಾರ್ಯನಿರತ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಬಹುಮುಖ ಪ್ರತಿಭೆಯುಳ್ಳ ಸುವರ್ಣರು ಕನ್ನಡ ಭವನ ಸೊಸೈಟಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದು, ಅಖಿಲ ಭಾರತ ಬಿಲ್ಲವರ ಯೂನಿಯನ್ನ ಮುಂಬಯಿ ಸಂಘಟನಾ
ಕಾರ್ಯದರ್ಶಿ  ಆಗಿದ್ದಾರೆ. ಯೂನಿಯನ್ ಬ್ಯಾಂಕ್ನ ಉನ್ನತ ಹುದ್ದೆಯಲ್ಲಿ ನಿವೃತ್ತರಾಗಿರುವ ಅವರನ್ನು ಹಲವಾರು ಸಂಸ್ಥೆಗಳು, ಅವರ
ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕರ್ತವ್ಯ, ನಿಷ್ಠೆ ಹಾಗೂ ಅನುಪಮ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳೊಂದಿಗೆ ಗೌರವಿಸಿದ್ದಾರೆ. ಅಬುಧಾಬಿ ಹಾಗೂ ಇತ್ತೀಚೆಗೆ ಮಲೇಷಿಯಾದಲ್ಲೂ ಸನ್ಮಾನಿಸಲ್ಪಟ್ಟಿದ್ದಾರೆ. ಜ್ಞಾನಮಂದಾರ ಅಕಾಡೆಮಿ ಬೆಂಗಳೂರು ಸಂಸ್ಥೆಯ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೇ ಜೂ.27-28ರ 2ದಿನಗಳಲ್ಲಿ ಕೆನಡಾದದಲ್ಲಿ ನಡೆಯುವ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಎನ್.ಪಿ.ಸುವರ್ಣ ಅವರಿಗೆ ವಿಶ್ವಮಾನ್ಯರು ಪ್ರಶಸ್ತಿಯೊಂದಿಗೆ ಗೌರವಿಸಲ್ಪಡಲಿದ್ದಾರೆ. ಸುವರ್ಣರ ಧರ್ಮಪತ್ನಿ ಪ್ರಭಾ ಎಸ್.ಸುವರ್ಣ ಅವರೂ ಈ ಸಮ್ಮೇಳನದಲ್ಲಿ ಕವಿ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಜೂ.25 ರಂದು ಕೆನಡಾ ಪ್ರವಾಸಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಭಾ ಸುವರ್ಣ ಅವರು ಕಳೆದ ಸುಮಾರು 4 ದಶಕಗಳಿಂದ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಮುಖ್ಯಾತ ಮಹಿಳಾ ಪ್ರಧಾನ ಸಂಸ್ಥೆಗಳ ಮುಖೇನ ಸೇವಾ ನಿರತರಾಗಿದ್ದು ಬಹುಮುಖ ಪ್ರತಿಭಾ ಸಂಪನ್ನಾ ಹಸನ್ಮುಖಿ ನಾರಿ ಎಂದೆಣಿಸಿದ್ದಾರೆ. ಮಂಗಳೂರಲ್ಲಿ ಹುಟ್ಟಿ, ಮುಂಬಯಿಯಲ್ಲಿ ಬೆಳೆದು, ಕಲಿತು, ರಿಸವರ್್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತಾಧಿಕಾರಿ ಆಗಿ ಸದ್ಯ ನಿವೃತ್ತರಾಗಿದ್ದಾರೆ. ಮುಂಬಯಿಯಲ್ಲಿನ ಪ್ರತಿಷ್ಠಿತ ಸಂಸ್ಥೆಗಳಾಗಿರುವ ಯಂಗ್ಮೆನ್ಸ್ ಎಜ್ಯುಕೇಶನ್ ಸೊಸೈಟಿ ಹಾಗೂ ಬಿಲ್ಲವ ಜಾಗೃತಿ ಬಳಗ ಇತ್ಯಾದಿ ಅನೇಕ ಸಂಸ್ಥೆಗಳಲ್ಲಿ ಅವಿರತ ಸೇವೆ ಮಾಡುತ್ತಿದ್ದಾರೆ. ಬಳಗದ ಮಹಿಳಾ ವಿಬಾಗೀಯ ಕಾಯರ್ಾಧ್ಯಕ್ಷೆಆಗಿಯೂ ಸೇವೆ ಸಲ್ಲಿಸಿ ಇದೀಗ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿದ್ದಾರೆ. ಅಸೋಸಿಯೇಶನ್ ಫಾರ್ ಮಸೋಮಿ ಲೇಡಿಸ್ ಸಂಸ್ಥೆಯಲ್ಲಿ ಕೆಲವು ವರ್ಷಗಳಿಂದ ಯೋಗದಾನ ಮಾಡುತ್ತಿದ್ದು, ಈ ಸಂಸ್ಥೆಯಲ್ಲಿ ಕಾಯರ್ಾಧ್ಯಕ್ಷೆಯಾಗಿಯೂ ದಕ್ಷತೆ ತೋರಿಸಿದ್ದಾರೆ. ಶಾಲೆ ಕಾಲೇಜು ದಿನಗಳಿಂದಲೇ ಸಂಗೀತ ಹಾಗೂ ಕವಿತೆ ಬರೆಯುವ ಅಭಿರುಚಿವುಳ್ಳ ಪ್ರಭಾ ಅವರು ಸುಮಾರು 200, ತುಳು ಕನ್ನಡ ಹಿಂದಿ ಪಂದ್ಯಗಳನ್ನು ರಚಿಸಿದ್ದಾರೆ. ಅವುಗಳನ್ನು ನಿಸರ್ಗಳವಾಗಿ ಹಾಡಬಲ್ಲರು. ಅವರ ಕೆಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆನಡಾದಲ್ಲಿ ಜರಗುವ ಸಂಸ್ಕೃತಿ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ

By suddi9

Leave a Reply

Your email address will not be published. Required fields are marked *