ಸುದ್ದಿ9 ಕೈಕಂಬ: ಮಹಿಳೆಯರು ದೌರ್ಜನ್ಯದ ವಿರುದ್ಧ ಪ್ರತಿಭಟಿಸಲೇಬೇಕು ನಾವೆಲ್ಲರೂ ಅವರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಬ್ರೇಕ್ ಥ್ರೂ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಭರತ್ ಎಸ್ ಕರ್ಕೆರ ಹೇಳಿದರು. ದಿಶಾ ಟ್ರಸ್ಟ್ ಆಶ್ರಯದಲ್ಲಿ ಬ್ರೇಕ್ ಥ್ರೂ ಸಂಸ್ಥೆಯ ಸಹಯೋಗದೊಂದಿಗೆ ಕೈಕಂಬ ದಿಶಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಮಾನವ ಹಕ್ಕುಗಳು ಮತ್ತು ಲಿಂಗ-ಲಿಂಗತ್ವ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.


ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಅನುಸೂಯ ಕಾಜವ ಸಭಾಧ್ಯಕ್ಷತೆ ವಹಿಸಿದ್ದರು, ದಿಶಾ ಟ್ರಸ್ಟ್ ನ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ, ಬ್ರೇಕ್ ಥ್ರೂ ಸಂಸ್ಥೆಯ ಕಾರ್ಯಕರ್ತರಾದ ತೇಜಸ್ವಿನಿ ಸ್ಪಂದನ ಒಕ್ಕೂಟದ ಕಾರ್ಯದರ್ಶಿ ಸವಿತ ಕೊಳವೂರು ಕೋಶಾಧಿಕಾರಿ ಎಲ್ಸಿ ಡಿ ಸೋಜ ಮೂಡುಶೆಡ್ಡೆ, ದಿಶಾ ಟ್ರಸ್ಟ್ನ ಸಂಯೋಜಕರಾದ ಹೆನ್ರಿ ವಾಲ್ಡರ್, ಕ್ಷೇತ್ರ ಸಂಯೋಜಕ ರುದೇಶ್, ಕಾರ್ಯಕರ್ತೆಯರಾದ ಶ್ರೀಮತಿ ಸುಮಂಗಲ, ಶ್ರೀಮತಿ ರಂಜಿನಿ, ಶ್ರೀಮತಿ ವಿನೋದ ಶ್ರೀಮತಿ ಹರಿಣಾಕ್ಷಿ ಉಪಸ್ಥಿತರಿದ್ದರು.

