ಸುದ್ದಿ9 ಕೈಕಂಬ: ಯಕ್ಷಾಭಿಮಾನಿ ಅಮ್ಮುಂಜೆ  ಇಲ್ಲಿಯ  ಮಳೆಗಾಲದ ಸಂಚಾರಿ ಯಕ್ಷಗಾನವು ಪ್ರಾರಂಭಗೊಂಡಿದೆ ತಂಡದಲ್ಲಿ 8 ರಿಂದ 10 ಜನರಿರುತ್ತಾರೆ ಗೆಜ್ಜೆ ಕಟ್ಟಿ ವೇಷದಾರಿಗಳು ಮನೆಗೆ ಬರುವುದೆಂದರೆ ಜನರಿಗೆ ಎಲ್ಲಿಲ್ಲದ ಸಂತಸ. ಚಿಕ್ಕ ಮೇಳವು ದಿನ ನಿತ್ಯ ಸಾಯಂಕಲ 6 ರಿಂದ 11.30ರವರೆಗೆ ಸುಮಾರು 30 ಮನೆಗಳಿಗೆ ತೆರಳಬೇಕಾಗುತ್ತದೆ.
_DSC6359

_DSC6351

_DSC6353

_DSC6356

ಜೂ.15ರಂದು ಸೋಮವಾರ ರಾತ್ರಿ 10ಗಂಟೆಯ ಸಮಯದಲ್ಲಿ ಮಣಿಕಂಠಪುರಕ್ಕೆ ಆಗಮಿಸಿದಾಗ ಮನೆಯವರು 1 ಸೇರು ಅಕ್ಕಿ 1 ತೆಂಗಿನಕಾಯಿ, 5 ವಿಳ್ಯದೆಲೆ ಅಡಿಕೆ ಹೂವು ಬಾಳೆಎಲೆಯಲ್ಲಿ ಕಾಣಿಕೆ ದೇವರ ಹತ್ತಿರ ಇಡಬೇಕಾಗುತ್ತದೆ. ಯಕ್ಷಗಾನದ ಹಾಡು ಭಾಗವತರು ಹಾಡಿದಾಗ ಚೆಂಡೆಯ ಬಡಿತಕ್ಕೆ ವೇಷದಾರಿಗಳು ಕುಣಿದು ಮಂಗಳದೊಂದಿಗೆ ದೇವರಿಗೆ ಆರತಿ ಬೆಳಗಿಸಿ ಪ್ರಸಾದ ನೀಡುತ್ತಾರೆ.

By Suddi9

Leave a Reply

Your email address will not be published. Required fields are marked *