ಮುಂಬಯಿ, ಜೂ.13: ಬಂಟ ಸಮಾಜದ ಹಿರಿಯ ಮುತ್ಸದ್ಧಿ, ತುಳು-ಕನ್ನಡಿಗರ ಪ್ರೇರಣಾಶಕ್ತಿಎಂ.ಡಿ.ಶೆಟ್ಟಿ(ಮೂಳೂರು ದೇಜು ಶೆಟ್ಟಿ) ಅವರು ತನ್ನ ಬದುಕಿನ ಆಯುಷ್ಯವನ್ನು ಭದ್ರಪಡಿಸುತ್ತಾ ಸದಾ ಹಸನ್ಮುಖರಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿ ಕೊಂಡವರಾಗಿದ್ದಾರೆ. ಸದಾ ಸೇವಾ ಕ್ಷೇತ್ರದ ವಿಶಾಲ ಪ್ರಪಂಚದಲ್ಲಿ ರಾಜ ಮರ್ಯಾದೆ ಪಡೆದ ಎಂ.ಡಿ ತನ್ನ ಬಾಳ ಸಂಗಾತಿ ರತಿ ಶೆಟ್ಟಿ ಮತ್ತು ಏಕೈಕ ಸುಪುತ್ರ ರಮೇಶ್ ಶೆಟ್ಟಿ ಅವರಿಬ್ಬರೂ ಬದುಕಿಗೆ ವಿದಾಯವನ್ನಿತ್ತಾಗ ಎಂ.ಡಿ ಏಕಾಂಗಿ ಆಗಿ ಬಾಳುವಂತಾಯಿತು.

ಆದರೆ ತನ್ನ ನಿರಾಸಕ್ತ ಜೀವನ ಮನವರಿಸಿ ಇನ್ನು ನನಗೆ ಬದುಕು ಬೇಕೇ ಯಾ ಬೇಡವೇ ಎಂದು ಕಾಡತೊಡಗಿದಾಗ ಮತ್ತೆ ಜನಪ್ರೇರಣೆಯಿಂದ ಸದಾಶಯವನ್ನು ಪುಲಕಿತ ಗೊಳಿಸಿ ಶಸಕ್ತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಎಂ.ಡಿ.ಶೆಟ್ಟಿಅವರು ಇಂದು (ಜೂ.15) ತನ್ನ ಜೀವನದ 87ರ ವಸಂತಗಳನ್ನು ಪೂರೈಸಿ 88ರ ನಡಿಗೆಯತ್ತ ಹೆಜ್ಜೆಯನ್ನಿರಿಸುತ್ತಿದ್ದಾರೆ. ಎಂ.ಡಿ ಶೆಟ್ಟಿ ಅವರೊಂದಿಗೆ ಅನೇಕ ಕ್ಷೇತ್ರದ ದಿಗ್ಗಜರು, ಉದ್ಯಮಿಗಳು, ಸಮಾಜ ಸೇವಕರು ತಮ್ಮ ಒಡನಾಟವನ್ನಿರಿಸಿರುವುದು ವ್ಯಾಪರೀಕರಣಕ್ಕಲ್ಲ ಬದಲಾಗಿ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯ ಬದುನಿನ ವೈಶಿಷ್ಟತೆಗಾಗಿ ಎನ್ನುವುದಂತು ಸತ್ಯ.
DSC08568

6-M. D Shetty-b

7A-M. D Shetty
ಅನೇಕ ವರ್ಷಗಳಿಂದ ಅವರೊಂದಿಗೆ ಬೆರೆತ ನೆನಪುಗಳು ನಿಜಕ್ಕೂ ಅವಿಸ್ಮರಣೀಯ ಎನ್ನುತ್ತಾರೆ ಅವರ ಆಪ್ತರು. ಅವರ ಸಾಧನೆ ಮತ್ತು ಸಾಧಕಗಳು ಅಜರಾಮರ. ಅವರ ಶ್ರೇಷ್ಟ ಸಾಧನೆಗಳು ಮತ್ತುನಿಸ್ವಾರ್ಥ ಸೇವೆ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಬಂಟರ ಸಂಘಕ್ಕೆ ಅವರು ನೀಡಿದ ಕೊಡುಗೆ ಮತ್ತು ಸವಲತ್ತುಗಳು ಅಸಂಖ್ಯ.ಎಂ ಡಿ ಶೆಟ್ಟಿಅವರು ಅತಿ ಸಣ್ಣ ವಯಸ್ಸಿನಲ್ಲಿ ಅಂದರೆ 1943ರಲ್ಲಿ ಮುಂಬಯಿಗೆ ಪಾದಾರ್ಪಣೆ ಮಾಡಿದ್ದರು. ಆ ಸಂದರ್ಭ ಎರಡು ಬಂಟರ ಸಂಘಟನೆಗಳು ಅಸ್ಥಿತ್ವದಲ್ಲಿದ್ದವು. ಅವುಗಳೆಂದರೆ ಒಂದನೇಯದು ಬಂಟರ ಅಥವಾ ನಾಡವರ ಸಂಘ ಮತ್ತು ಎರಡನೇಯದು ಬಂಟ್ಸ್ ಯುವಕ ಸಂಘ. ಯುವಕ ಸಂಘವು ಸ್ವತಂತ್ರವಾಗಿ ಕೆಲಸ ಮಾಡುತ್ತಿತ್ತು ಮತ್ತು ಕರ್ನಾಟಕ ಉಚಿತ ರಾತ್ರಿ ಹೈಸ್ಕೂಲು ನಡೆಸುತ್ತಿತ್ತು.

ಅವಾಗಲೇ ಸೇವೆಯಲ್ಲಿ ಸಕ್ರೀಯರಾಗಿ ಸುಮಾರು 6 ವರ್ಷಗಳಿಗೂ ಅಧಿಕ ಕಾಲ ಶಾಲಾ ಸಮಿತಿ ಅಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ ಶಾಲೆ ಹಣಕಾಸಿನ ವಿಚಾರದಲ್ಲಿ ಸಮರ್ಥಗೊಂಡಿದ್ದು ಮಾತ್ರವಲ್ಲ ಶಿಕ್ಷಣ ಗುಣಮಟ್ಟ ಕೂಡ ಅತ್ಯುತ್ತಮ ರೀತಿಯಲ್ಲಿ ಪ್ರಗತಿ ಪಡೆಯಲಾರಂಭಿಸಿತ್ತು. 1974 ರಲ್ಲಿ ಶಾಲೆಯು ಸಮರ್ಥವಾಗಿ ಸುವರ್ಣ ಮಹೋತ್ಸವವನ್ನೂ ಆಚರಿಸಿತ್ತು ಎನ್ನುತ್ತಿದ್ದಾರೆ. 1973ರಲ್ಲಿ ಬಂಟರ ಸಂಘದಲ್ಲಿ ಸಾಕಷ್ಟು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ದಾನಿಯೋರ್ವರು ನೀಡಿದ ಜಾಗದಲ್ಲಿ ಬಂಟ ಸಮುದಾಯ ಭವನ ನಿಮರ್ಿಸಬೇಕೆ ಬೇಡವೇ ಎಂಬ ವಿಚಾರದಲ್ಲಿ ತಕರಾರು ಹುಟ್ಟಿಕೊಂಡು ವಿರೋಧಾಭಿಪ್ರಾಯಗಳು ಕ್ಲೇಶ ಸೃಷ್ಟಿಸಿದ್ದವು. ಈ ಪ್ರಮುಖ ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಮ್ಯಾನೇಜಿಂಗ್ ಕೌನ್ಸಿಲ್ ಸಭೆಕರೆಯಲಾಯಿತು.

ಸಭೆಯಲ್ಲಿ ಎಂ ಡಿ ಅವರ ನೇರ ಮತ್ತು ದಿಟ್ಟ ನಿರ್ಧಾರವು ವಿರೋಧ ಬಣವನ್ನು ತಲ್ಲಣಗೊಳಿಸಿತು. ಪ್ರಸ್ತಾವನೆಗೆ ಎಂಡಿ ಶೆಟ್ಟಿನೀಡಿದ ನಿಖರವಾದ ಮತ್ತು ಖಡಾಖಂಡಿತವಾದ ಬೆಂಬಲ ವಿರೋಧಿಸುತ್ತಿದ್ದ ಪಂಗಡವು ನಿರ್ಧಾರವನ್ನು ಬದಲಾಯಿಸಿ ಕೊನೆಗೂ ಸಮುದಾಯ ಭವನವು ಬಂಟರ ಭವನ ಹೆಸರಲ್ಲಿ ತಲೆ ಎತ್ತಿ ನಿಂತಿತ್ತು. ಅಂದಿನ ಎಂಡಿ ಅವರ ದಿಟ್ಟಹೆಜ್ಜೆ, ಪ್ರೋತ್ಸಾಹ ಬಂಟರ ಸಂಘದ ಇತಿಹಾಸಕ್ಕೇ ಒಂದು ಪಾಠವಾಗಿ ಪರಿಣಮಿಸಿತು. ಇದು ಎಂಡಿ ಶೆಟ್ಟಿ ಅವರ ಮುಂದೊಡಗುವ ಪ್ರವೃತ್ತಿ ಮತ್ತು ಶ್ರದ್ಧಾಸಕ್ತಿಗಳು ಶಾಶ್ವತ ಸಮತಿ ರಚಿಸುವಲ್ಲಿ ಪ್ರತಿಫಲಿಸಿತು. ಆಗ ಹಣಕಾಸು ಒಂದು ದೊಡ್ಡ ಸಮಸ್ಯೆಯಾಗಿತ್ತು. ಅವಾಗ ಬಂಟರಲ್ಲಿ ಹೆಚ್ಚಿನವರು ಹಣಕಾಸು ವಿಚಾರದಲ್ಲಿ ಅಷ್ಟೊಂದು ಪರಿಣತರಾಗಿರಲಿಲ್ಲ.

ಅಲ್ಲದೆ ಸ್ವತಂತ್ರವಾಗಿ ದತ್ತಿ ನೀಡಲು ಯಾರೂ ಮುಂದಡಿಯಿಡುವ ಕಾಲವಲ್ಲವೂ ಅದಾಗಿರಲಿಲ್ಲ. ಆದರೂ ಎಂಡಿ ಮಾರ್ಗದರ್ಶನದಲ್ಲಿ ಅಗತ್ಯದ ನಿಧಿ ಸಂಗ್ರಹಿಸಿ ಕೊನೆಗೂ ಮಹತ್ವದ ಬಂಟರ ಭವನ ನಿರ್ಮಿಸುವಲ್ಲಿ ಯಶಸ್ವಿ ಆಯಿತು. ಸಂಘದ ಇತಿಹಾಸದಲ್ಲಿ ಇದು ಮಹತ್ವದ ಮೈಲುಗಲ್ಲು. ಈ ಯೋಜನೆ ಸಂಘದ ಕಾರ್ಯಚಟುವಟಿಕೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಲು ನಾಂದಿಯಾಯಿತು. ಆದುದರಿಂದಲೇ ಈ ವರೇಗಿನ ಸಂಘದ ಮಹತ್ವದ ಬೆಳವಣಿಗೆಗಳು ಸಾಕಷ್ಟು ಬದಲಾವಣೆಗಳಾಗುವಲ್ಲಿ ಎಂಡಿ ಪಾತ್ರ ಹಿರಿದು ಎಂದು ಅವರ ನಿಕಟವರ್ತಿಯೋರ್ವರು ಹೇಳುತ್ತಾರೆ. 1977-78ನೇ ವರ್ಷ ಸಂಘಕ್ಕೆ ಸುವರ್ಣ ಸಂಭ್ರಮ. ಈ ಅವಿಸ್ಮರಣೀಯ ವರ್ಷ ಎಂ ಡಿ ಅವರು ಸಂಘದ ಅಧ್ಯಕ್ಷತನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು.ಅವರ ಅವಿಶ್ರಾಂತ ಶ್ರಮದ ಫಲವಾಗಿ ಸುವರ್ಣ ಮಹೋತ್ಸವ
ಸಂಭ್ರಮ ಅದ್ದೂರಿಯಿಂದ ನೆರವೇರಿತು. ಈ ಸಂಭ್ರಮ ಪ್ರತಿಯೊಬ್ಬರಿಂದ ಶ್ಲಾಘನೆಗೆ ಒಳಗಾಗಿತ್ತು.

ಅದೇ ಕಾಲಕ್ಕೆ ಎಂಡಿ ಪತ್ನಿ ರತಿ ಅವರಿಂದ ಪ್ರೇರಿತರಾಗಿ ಸಂಘದ ಮಹಿಳಾ ವಿಭಾಗವನ್ನು ಸ್ಥಾಪಿಸಿದ್ದ ಪರಿಣಾಮ ಸಂಘದ ವಿವಿಧ ಚಟುವಟಿಕೆಗಳಲ್ಲಿ ಪಾಲು ಪಡೆಯಲು ಮಹಿಳೆಯರಿಗೂ ವಿಫುಲ ಅವಕಾಶ ದೊರೆತು ಅವರ ಪ್ರತಿಭೆಗಳ ಸದುಪಯೋಗದಿಂದ ಸಮುದಾಯದಲ್ಲಿ ಸಾಕಷ್ಟು ಅಭಿವೃದ್ಧಿಗಳು ನಡೆಸಲು ಸಾಧ್ಯವಾಯಿತು. ಇವೆಲ್ಲವುಗಳ ಶ್ರೇಯಸ್ಸು ನ್ಯಾಯೋಚಿತವಾಗಿ ಎಂ ಡಿ ಶೆಟ್ಟಿಅವರಿಗೆ ಸಲ್ಲಬೇಕು ಎನ್ನುತ್ತಾರೆ ಎಂಡಿ ಪರಮಮಿತ್ರ. ಈ ವರ್ಷವೇ ಇನ್ನೊಂದು ಅವಿಸ್ಮರಣೀಯ ದಿನ ಕೂಡಾ ಬಂದೊದಗಿತ್ತು. ಹೌದು, ವರ್ಲಿ ಯಲ್ಲಿ ನಿತ್ಯಾನಂದ ರಾತ್ರಿ ಹೈಸ್ಕೂಲು ಪ್ರಾರಂಭದ 1980ರಲ್ಲಿ ಎಂಡಿ ಎರಡನೇ ಬಾರಿ ಅಧ್ಯಕ್ಷರಾಗಿದ್ದ ಅವಧಿಗೆ ಸ್ವಾಮಿ ಮುಕ್ತಾನಂದ ಸಭಾಗೃಹವನ್ನು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊಫೆಸರ್ ಶಿವರಾಮ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಅಂದಿನ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಎ.ಆರ್ ಅಂತುಲೆ ಉದ್ಘಾಟಿಸಿದ್ದರು. ಇದೇ ವೇಳೆ ಸ್ವಾಮಿ ನಿತ್ಯಾನಂದರ ಪ್ರತಿಮೆ ಕೂಡ ಸಭಾಭವನದಲ್ಲಿ ಪ್ರತಿಷ್ಠಾಪಿಸಲಾಗಿರುವುದುಅಭಿನಂದನೀಯ.

ತನ್ನ ಸ್ವಂತ ಪ್ರಯತ್ನದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಒಟ್ಟುಗೂಡಿಸಿ ಸಂಘದ ಮಾಧ್ಯಮ ಸೇತುವೆಬಂಟರವಾಣಿ’ಯ ಸುಗಮ ನಡೆಗೆ ಅಡಿಪಾಯವನ್ನಿತ್ತ ಹಿರಿಮೆಯೂ ಎಂಡಿ ಅವರದ್ದಾಗಿದೆ. ಈ ಮಾಸಿಕವನ್ನು ಸ್ವದಕ್ಷವನ್ನಾಗಿ ಮಾಡಲು ಬಂಟರವಾಣಿಗೆ ಪೋಷಕ ಸದಸ್ಯರ ನೇಮಕಾತಿ ಗೊಳಿಸಿ ಮುನ್ನಡೆಸಲು ಪ್ರೇರಕಶಕ್ತಿ ಆಗಿದ್ದಾರೆ. ಅಂತೂಇಂತೂ ಎಂ ಡಿ ಶೆಟ್ಟಿ ಅವರು ಬಂಟರ ಸಂಘದಲ್ಲಿ ಕಳೆದ ಸುಮಾರು ಆರುವರೆ ದಶಕಗಳಿಗೂ ಅಧಿಕ ಅವಿಶ್ರಾಂತ ಸೇವೆ ಸಲ್ಲಿಸಿದ ಒಬ್ಬ ಕ್ರಿಯಾಶೀಲ ಸದಸ್ಯ. ಸಂಘದ ಹಲವು ಎಡರು ತೊಡರುಗಳಲ್ಲಿ ಮತ್ತು ಸವಾಲುಗಳು ಎದುರಾದ ಸಂದರ್ಭ ಎಂಟೆದೆ ಬಂಟನಾಗಿ ಅವೆಲ್ಲವನ್ನೂ ಸ್ವೀಕರಿಸಿ ಪರಿಹಾರ ಒದಗಿಸಿರುವರೇ ಅಲ್ಲದೆ ಸ್ವಂತಿಕೆಯ ಧೈರ್ಯದಿಂದ ಎದುರಿಸಿ ಸಂಘವನ್ನು ಮುನ್ನಡೆಸಿದ್ದಾರೆ.

ಸಂಘಕ್ಕೆ ಎದುರಾದ ಬಹುತೇಕ ಸಮಸ್ಯೆಗೂ ಪರಿಹಾರವೆಂಬ ಸಮರ್ಥ ಉಡುಗೊರೆಯನ್ನು ಅವರು ನೀಡಿದ್ದಾರೆ. ಅವರ ಶ್ರೇಷ್ಟ ವ್ಯವಹಾರದ ಚಿಂತನೆ ಪ್ರತಿಯೊಂದು ನಿರ್ಧಾರದಲ್ಲೂ ಎದ್ದು ಕಾಣುತ್ತದೆ. ಮಾತ್ರವಲ್ಲ ಒಂದು ಬಾರಿ ನಿರ್ಧರಿಸಿಬಿಟ್ಟರೆ ಅದನ್ನು ನಿಲ್ಲಿಸುವವ ರಲ್ಲ ಅಥವಾ ಹಿಂಪಡೆಯುವವರಲ್ಲ. ಗುರಿ ಮುಟ್ಟುವವರೆಗೆ ವಿಶ್ರಾಂತಿ ಪಡೆಯುವವರಲ್ಲ, ಅವರು ಪ್ರಬಲವಾದ ಧೃಢನಿಶ್ಚಯ ಮತ್ತು ಧೃಢಸಂಕಲ್ಪದ ವ್ಯಕ್ತಿ. ಮಾತ್ರವಲ್ಲ ಅವರು ಕ್ಲಿಷ್ಟಕರ ಪರಿಸ್ಥಿತಿಗಳನ್ನು ಶಾಂತಚಿತ್ತ
ಮತ್ತು ತಾಳ್ಮೆಯಿಂದ ನಿಭಾಯಿಸುತ್ತಾರೆ. ಪ್ರಾಮಾಣಿಕತೆ, ಪ್ರಜ್ಞಾಶೀಲ ಕೆಲಸ ಮತ್ತು ಗೌರವಯುತವಾದ ನಡವಳಿಕೆಯುಳ್ಳ ಜೀವನದಲ್ಲಿ ನಿಜವಾದ ಶ್ರೇಷ್ಟತೆ ಅಡಗಿದೆ ಎಂದು ಶ್ರೀಯುತರು ನಂಬಿದ್ದಾರೆ. ಇಂಡಿಯನ್ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಸಂಸ್ಥೆಯ ಎರಡು ಕಾಲಾವಧಿ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದರಲ್ಲದೆ ಹೊಟೇಲು ಉದ್ಯಮಿಗಳ ಒಕ್ಕೂಟವನ್ನು ಕೇವಲ ಮುಂಬಯಿಯಲ್ಲೇ ಕಾರ್ಯಗತಗೊಳಿಸದೆ ಇಡೀ ಮಹಾರಾಷ್ಟ್ರ ರಾಜ್ಯದಲ್ಲೇ ವ್ಯಾಪಿಸುವ ನೀಟ್ಟಿನಲ್ಲಿ `ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ’ ರೂಪಿಸಿ ಅದರ ಸಂಸ್ಥಾಪಕಾಧ್ಯಕ್ಷರಾಗಿ ದುಡಿದಿದ್ದಾರೆ.

ಸದ್ಯಫೆಡರೇಶನ್ನ `ಅಜೀವ ಗೌರವಾಧ್ಯಕ್ಷ’ರಾಗಿ ಮತ್ತು ಬಂಟ್ಸ್ ನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸೇವಾ ನಿರತ ಎಂ.ಡಿ.ಶೆಟ್ಟಿ ಅವರನ್ನು ಅರಿತುಕೊಳ್ಳುವ ಭಾಗ್ಯ ಪಡೆದ ಸಮಾಜಕ್ಕೆ ಅವರು ನೀಡಿದ ಮತ್ತು ನೀಡುತ್ತಿರುವ ನಿಸ್ವಾರ್ಥ ಸೇವೆಯ ಆಸಕ್ತಿ, ಅವರೊಂದಿಗಿನ ಆತ್ಮೀಯತೆಯನ್ನು ಇಮ್ಮಡಿಗೊಳಿಸಿದೆ. ಶ್ರೀಯುತಎಂ ಡಿ ಶೆಟ್ಟಿಅವರ ಕೀರ್ತಿ , ಘನತೆ, ಗೌರವ ಎಲ್ಲೆಡೆಯಲ್ಲಿ ಇದೀಗಲೇ ಎಲ್ಲೆಡೆ ಪಸರಿದ್ದು, ಭವಿಷ್ಯತ್ತಿನ್ನುದ್ದಕ್ಕೂ ಇನ್ನೂ ಹೆಸರು ಜಗಜ್ಜಾಹೀರಾಗಲಿ.ಸರ್ವಸಮರ್ಥ ದೇವರು ಅವರಿಗೆ ನೆಮ್ಮದಿ ಮತ್ತು ಆಯುರಾರೋಗ್ಯ ಭಾಗ್ಯ ಕರುಣಿಸಿ ಶತಾಯುಷ್ಯ ಕರುಣಿಸಲಿ ಎನ್ನುವ ಆಶಯ.

ಚಿತ್ರ ಬರಹ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *