ಮುಂಬಯಿ, ಜೂ.08: ಮಹಾನಗರದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಸಾಂತಕ್ರೂಜ್ ಪೂರ್ವದಲ್ಲಿನ ಶ್ರೀ ಗುರುನಾರಾಯಣ ರಾತ್ರಿಹೈಸ್ಕೂಲು ಈ ಬಾರಿಯೂ ಎಸ್.ಎಸ್.ಸಿಯಲ್ಲಿ 100% ಫಲಿತಾಂಶ ಧಕ್ಕಿಸಿ ಕೊಂಡಿದೆ. ಕನ್ನಡ ಮಾಧ್ಯಮ ಪರೀಕ್ಷೆಯ ಮೂಲಕ ಹಾಜರಾದ ಪರೀಕ್ಷೆಗೆ ಹಾಜರಾದ ಹನ್ನೊಂದು ವಿದ್ಯಾರ್ಥಿಗಳೂ ಪಾಸಾಗಿದ್ದು 100% ಫಲಿತಾಂಶವನ್ನು ಗಳಿಸಿ ಬಿಲ್ಲವರ ಅಸೋಸಿಯೇಶನ್ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

PATIL SHARAN SUBHASH.KAMBLE ARUN RAVINDRA

ಶರಣ್ ಪಾಟೀಲ್ 85.81% ಅಂಕಗಳೊಂದಿಗೆ ಶಾಲೆಯಲ್ಲೇ ಪ್ರಥಮ ಸ್ಥಾನಗಳಿಸಿದ್ದಾರೆ.  ಕಾಂಬ್ಲೆ ಅರುಣು ರವೀಂದ್ರ ಎಂಬ ವಿದ್ಯಾರ್ಥಿ ಶೇ .80 ಅಂಕಗಳನ್ನುಗಳಿಸಿದ್ದಾರೆ.  ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ನ ಗೌರವಾಧ್ಯಕ್ಷರೂ ಜಯ ಸಿ.ಸುವರ್ಣ, ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಗೌ| ಪ್ರ| ಕಾರ್ಯದರ್ಶಿ ನ್ಯಾ| ಧನಂಜಯ ಕುಮಾರ್, ಅಸೋಸಿಯೇಶನ್ನ ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಮತ್ತು ಸರ್ವ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು, ಮುಖ್ಯೋಪಾಧ್ಯಾಯ ರಾಮಚಂದ್ರಯ್ಯ ಸಿ. ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗವನ್ನು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *