ಸುದ್ದಿ 9ಮೂಲ್ಕಿ; ಇಪ್ಪತ್ತರ ಹರೆಯದಲ್ಲೇ ಹೆಣವಾಗಿ ಹೋದ ಆತ ಚಿಗುರು ಮೀಸೆಯ ಯುವಕನಾಗಿದ್ದ. ಆಕೆ ಪದವಿ ಪಡೆದು ಐಟಿಬಿಟಿ ಎಂದು ಕಾಲ್ ಸೆಂಟರ್ನಲ್ಲಿ ದುಡಿಯುವ ಯುವತಿ ಇವರಿಬ್ಬರ ಪ್ರೇಮ ಪ್ರಕರಣಕ್ಕೆ ಖಳನಾಯಕನಾದ ಇಪ್ಪತ್ತರ ಹರೆಯದ ಯುವಕ ಈಗ ಜೈಲು ಪಾಲಾಗಿದ್ದಾನೆ. ಇದೊಂದು ಸಿನಿಮಾ ಕಥೆ ಎಂದು ಭಾವಿಸಬೇಡಿ, ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಕರಣದ ಝಲಕ್ ಅಷ್ಟೇ…
ಹಿನ್ನಲೆ;
ಕಾರ್ಕಳದ ಬೋಳ ಕೆಂದೊಟ್ಟು ಪದವು ನಿವಾಸಿ ವಿದ್ಯಾನಂದ ಸುವರ್ಣರ ಹಿರಿಯ ಮಗ ಅವಿನಾಶ್ ಪೂಜಾರಿ (21) ಈ ತ್ರಿಕೋಣ ಪ್ರೇಮಕ್ಕೆ ಬಲಿಯಾಗಿದ್ದು, ಆತನನ್ನು ಪ್ರೀತಿಸುತ್ತಿದ್ದ ಯುವತಿಯನ್ನು ಕಾನರ್ಾಡಿನಲ್ಲಿ ವಿದ್ಯುತ್ ದುರಸ್ಥಿ ಮಾಡುವ ಅಂಗಡಿಯನ್ನು ಹೊಂದಿರುವ ಮಾಬೆನ್ ಎಂಬುವರ ಮಗಳಾದ ಸುಷ್ಮಾ ಪ್ರೆಸಿಲ್ಲಾ ಎಂಬಾಕೆಯೇ ಈ ತ್ರಿಕೋನ ಪ್ರೇಮದ ನಾಯಕಿಯಾಗಿದ್ದು, ಇವರಿಬ್ಬರ ನಡುವೆ ಖಳನಾಗಿ ಬಂದಿರುವ ಅವಿನಾಶ್ನನ್ನು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಹೊತ್ತಿರುವ ಮಂಗಳೂರಿನ ಮುಳಿಹಿತ್ಲು ನಿವಾಸಿ ಮೂಲತಹ ತಿಪಟೂರಿನ ಗವಿರಂಗ ಯಾನೆ ಹರೀಶ್ (20) ಎಂಬುವನೇ ಈಗ ಪೊಲೀಸರ ವಶದಲ್ಲಿದ್ದಾನೆ.
ಮೂಲ್ಕಿ ಬಪ್ಪನಾಡು ಬಡಗುಹಿತ್ಲುವಿನಲ್ಲಿ ಕೆಲವು ವರ್ಷ ಇದ್ದ ವಿದ್ಯಾನಂದ ಸುವರ್ಣ ರಿಕ್ಷಾ ಚಾಲಕರಾಗಿದ್ದು, ನಂತರ ಕೆ.ಎಸ್.ರಾವ್.ನಗರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದು ನಂತರ ಬೋಳದ ಸಕರ್ಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಬೋಳದಲ್ಲಿ ರಿಕ್ಷಾವನ್ನು ಚಲಾಯಿಸಿಕೊಂಡು ಪತ್ನಿ ಎರಡು ಗಂಡು ಹಾಗೂ ಒಂದು ಹೆಣ್ಣುಮಗಳೊಂದಿಗೆ ತಮ್ಮಷ್ಟೆಕ್ಕೆ ಇದ್ದರು ಗಂಡು ಮಕ್ಕಳಲ್ಲಿ ಹಿರಿಯವರ ಅವಿನಾಶ್ ಹಾಗೂ ಕಿರಿಯವ ವಿಲಾಸ್ ಅವಿನಾಶ್ ಶಾಲೆಯನ್ನು ಎಂಟನೇ ತರಗತಿಗೆ ಮೊಟಕುಗೊಳಿಸಿ ತಂದೆಯೊಂದಿಗೆ ಮನೆಗೆ ಆಸರೆ ಆಗಿದ್ದನು ಈಗ ಯುವತಿಯ ಪ್ರೇಮ ಬಲೆಗೆ ಸಿಲುಕಿ ಬಲಿಯಾಗಿದ್ದು ಮನೆಯ ಹಿರಿಯ ಚೇತನವೇ ಇಲ್ಲದಂತಾಗಿದೆ.
ಪ್ರೇಮ ಸಲ್ಲಾಪ;
ಫ್ರೌಢಶಾಲೆಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಅವಿನಾಶ್ಗೆ ಕೆ.ಎಸ್.ರಾವ್.ನಗರದಲ್ಲಿದ್ದಾಗಲೇ ಕೊಳಚಿಕಂಬಳದ ಸುಷ್ಮಾಳ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆಕೆ ಆಗ ಮೂಲ್ಕಿಯ ಕಾಲೇಜೊಂದಕ್ಕೆ ಹೋಗುತ್ತಿದ್ದಳು, ಇವರ ಸ್ವಚ್ಚಂದ ಪ್ರೇಮಕ್ಕೆ ಅವಿನಾಶ್ ಹಾಗೂ ಸುಷ್ಮಾಳ ಫೇಸ್ಬುಕ್ ಪ್ರತ್ಯಕ್ಷ ಸಾಕ್ಷಿಯಾಗಿದೆ. ಅವಿನಾಶ್ ರಿಕ್ಷಾ ಚಲಾಯಿಸುತ್ತಾ ಡ್ರೈವರ್ ಆಗಿ ಟಿಪ್ಪರ್ ಹಾಗೂ ರಿಕ್ಷಾ ಟೆಂಪೋವನ್ನು ಚಲಾಯಿಸುತ್ತಾ ಕಾರ್ಕಳ ಬಳಿಯ ಬೋಳದ ಗಾಯತ್ರಿ ಗೇರು ಬೀಜ ಕಾಖರ್ಾನೆಯಲ್ಲಿ ವಾಹನವನ್ನು ಸಲಾಯಿಸುವ ಕಾಯಕವನ್ನು ಮಾಡುತ್ತಿದ್ದನಲ್ಲದೇ ಸುಷ್ಮಾಳೊಂದಿಗೆ ಒಡನಾಟ ಹೆಚ್ಚಿತ್ತಲ್ಲದೇ ಆಕೆಯನ್ನು ತನ್ನ ಮನೆಯವರಿಗೂ ಪರಿಚಯಿಸಿಕೊಂಡು ಆಕೆಯನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದ ಇದಕ್ಕೆ ಸುಷ್ಮಾ ಸಹ ಒಪ್ಪಿಗೆ ಸೂಚಿಸಿದ್ದಳು ಎನ್ನಲಾಗಿದೆ. ಆದರೆ ಇವರಿಬ್ಬರ ಪ್ರೇಮ ಪ್ರಕರಣವು ಸುಷ್ಮಾಳ ಮನೆಯವರಿಗೆ ತಿಳಿದು ಆಕೆಗೆ ಹಾಗೂ ಅವಿನಾಶ್ಗೆ ಹಲವಾರು ಬಾರಿ ಸುಷ್ಮಾಳ ತಂದೆ ಮಾಬೆನ್ ಎಚ್ಚರಿಕೆ ನೀಡಿದ್ದರು. ಇದ್ಯಾವುದಕ್ಕೂ ಜಗ್ಗಲಿಲ್ಲ ಈ ಪ್ರೇಮಿಗಳು.
ಆತ ಹರೀಶ;

love craim
love craim

 

1aprilbike

photo0487

ಈ ಪ್ರೇಮಿಗಳ ನಡುವೆ ಬಂದವನೇ ಹರೀಶ್ ಎಂಬ ಮುಳಿಹಿತ್ಲುವಿನ ಯುವಕ ಈತ ಸುಷ್ಮಾ ಕೆಲಸ ಮಾಡುತ್ತಿದ್ದ ಕಾಲ್ ಸೆಂಟರ್ನ ಸುಮೋ ವಾಹನವನ್ನು ಚಲಾಯಿಸುತ್ತಿದ್ದನಲ್ಲದೇ ಆಕೆಯನ್ನು ಮೂಲ್ಕಿಯವರೆಗೆ ಮುಂಜಾನೆಯ ಹೊತ್ತಿನಲ್ಲಿ ತಲುಪಿಸುತ್ತಿದ್ದಾಗಲೇ ಆಕೆಯ ಮೇಲೆ ಪ್ರೇಮಾಂಕುರವಾಗಿದೆ. ಇದು ಏಕಮುಖ ಪ್ರೇಮವೋ ಅಥವ ತ್ರಿಕೋನ ಪ್ರೇಮವೋ ತಿಳಿದಿಲ್ಲ ಆದರೆ ಹರೀಶ್ನಿಗೆ ಸುಷ್ಮಾಳ ಸಾಂಗತ್ಯ ಅಗತ್ಯವಿದ್ದುದರಿಂದ ಆಕೆಗಾಗಿ ಅವಿನಾಶ್ನನ್ನೇ ಮುಗಿಸಲು ತೀಮರ್ಾನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಈ ನಡುವೆ ಸುಷ್ಮಾಳು ಸಹ ಅವಿನಾಶ್ನೊಂದಿಗೆ ಅಷ್ಟಾಗಿ ಮಾತನಾಡದೇ ಹರೀಶನಿಗೆ ಹತ್ತಿರವಾಗುತ್ತಿದ್ದಾಳೆ ಎಂಬ ಸಂಶಯವಿದ್ದು ಅದು ಹರೀಶ್ ಅನೇಕ ಬಾರಿ ಬೆದರಿಕೆಯನ್ನು ಹಾಕಿದ್ದನು ಎಂದು ಆತನ ಮೊಬೈಲ್ನಲ್ಲಿನ ಸಂದೇಶವೆ ನೈಜತೆಯನ್ನು ತಿಳಿಸುತ್ತಿದೆ.
ಹತಾಶನಾದ ಹರೀಶ್ ಕೊನೆಗೂ ಹಳೆಯಂಗಡಿ ಪಾವಂಜೆ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ಮುಂಜಾನೆ ಅವಿನಾಶ್ನ ಬೈಕ್ಗೆ ಡಿಕ್ಕಿ ಹೊಡೆಸಿ ಪ್ರಶ್ನಿಸಲು ಬಂದವನನ್ನು ಸುಮೋದ ಚಕ್ರದಡಿಗೆ ಸಿಲುಕಿಸಿ ಭೀಕರವಾಗಿ ಕೊಲೆ ಮಾಡಿಯೇ ಬಿಟ್ಟಿದ್ದಾನೆ.
ಹಿಂದಿನ ದಿನ;
ಅವಿನಾಶ್ ಸುಷ್ಮಾಳನ್ನು ಬಹಳವಾಗಿ ಪ್ರೀತಿಸಿದ್ದನಲ್ಲದೇ ಆಕೆಯು ಈತನಿಂದ ದೂರವಾಗುತ್ತಿದ್ದಾಳೆ ಎಂಬ ಭ್ರಮೆಯಿಂದ ಹಿಂದೊಮ್ಮೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರಳಾಡಿ ಜೀವಪಾಯದಿಂದ ಪಾರಾಗಿದ್ದನು. ಆಗ ಆಸ್ಪತ್ರೆಗೆ ಓಡೋಡಿ ಬಂದ ಸುಷ್ಮಾ ಆತನನ್ನು ಸಂತೈಸಿದ್ದಳು ಇದು ಆಗ ನಡೆಸಿದ ನಾಟಕ ಎಂದು ಅವಿನಾಶ್ನ ಹೆತ್ತವರು ಗಂಭೀರವಾಗಿ ಆರೋಪಿಸುತ್ತಾರೆ. ಸೋಮವಾರ ಯುಗಾದಿಯ ಸಂಭ್ರಮದಲ್ಲಿ ಸುಷ್ಮಾಳನ್ನು ಕಾಣಲು ಅವಿನಾಶ್ ಆಕೆ ಕೆಲಸ ಮಾಡುವ ಮಾರ್ಗನ್ ಗೇಟ್ನಲ್ಲಿನ ಎಂಫಾಸಿಸ್ ಕಾಲ್ ಸೆಂಟರ್ಗೆ ನೇರವಾಗಿ ತೆರಳಿದಾಗ ಮೊದಲು ಅಲ್ಲಿನ ಭದ್ರತಾ ಸಿಬ್ಬಂದಿಗಳು ನಿರಾಕರಿಸಿದಾಗ ಮತ್ತೆ ಮತ್ತೆ ಒತ್ತಾಯಿಸಿದಾಗ ಹೊರಗೆ ಬಂದ ಸುಷ್ಮಾ ಆತನ ಪರಿಚಯ ನನಗಿಲ್ಲ ಎಂದೇ ಹೇಳಿ ಬಿಟ್ಟದ್ದಾಳೆ ಅಲ್ಲಿ ಅವಿನಾಶ್ ರಾದ್ದಾಂತ ಮಾಡಿದಾಗ ಭದ್ರತೆಯವರು ನೇರವಾಗಿ ಆತನನ್ನು ಪಾಂಡೇಶ್ವರ ಠಾಣೆಗೆ ಹಸ್ತಾಂತರಿಸಿದ್ದಾರೆ. ಅಲ್ಲಿ ತನ್ನ ಪರಿಚಯದ ಸ್ನೇಹಿತರ ಮೂಲಕ ಬಿಡುಗಡೆಗೊಂಡು ನಿನ್ನೆ ಮುಂಜಾನೆ ಸುಷ್ಮಾಳ ಆಗಮನಕ್ಕೆ ಪಾವಂಜೆಯಲ್ಲಿ ಕಾಯುತ್ತಿದ್ದನು ಆಗ ಈ ಕೊಲೆ ಕೃತ್ಯ ನಡೆದಿದೆ.
ಸ್ನೇಹಿತರ ಆರೋಪ;
ಹತ್ಯೆಯಾದ ಅವಿನಾಶ್ನನ್ನು ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದ ಸುಷ್ಮ ಈಗ ಆತನಿಗೆ ಕೈ ಕೊಟ್ಟು ಸುಮೋ ಚಾಲಕ ಹರೀಶ್ನನ್ನು ಕಳೆದ ಎಂಟು ತಿಂಗಳಿನಿಂದ ಪ್ರೀತಿಸುತ್ತಿದ್ದಾಳೆ ಇದರ ಬಗ್ಗೆ ಅವಿನಾಶ್ ವಿಚಾರಿಸಿದ್ದರಿಂದಲೇ ವ್ಯವಸ್ಥಿತವಾಗಿ ಆತನನ್ನು ಕೊಂದಿದ್ದಾರೆ ಎಂದು ಆರೋಪಿಸುವ ಅವಿನಾಶ್ನ ಸ್ನೇಹಿತರು ಆಕೆಯನ್ನು ಸಹ ಈ ಪ್ರಕರಣದ ಆರೋಪಿ ಎಂದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೂಲ್ಕಿ ಠಾಣೆಯಲ್ಲಿ ಅವಿನಾಶ್ನ ಬೈಕಿಗೆ ಹರೀಶ್ ತನ್ನ ಸುಮೋ ವಾಹನವನ್ನು ಡಿಕ್ಕಿ ಹೊಡೆಯಿಸಿದ್ದರಿಂದ ಆತ ಮೃತ ಪಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದು ಅವಿನಾಶ್ನ ತಂದೆ ವಿದ್ಯಾನಂದ ಸುವರ್ಣ ಈ ಬಗ್ಗೆ ದೂರು ನೀಡಿದ್ದಾರೆ. ಹರೀಶ್ನನ್ನು ಬಂದಿಸಿ ಮಾಹಿತಿಯನ್ನು ಕಲೆ ಹಾಕುತ್ತಿರುವ ಪೊಲೀಸರು ಸುಷ್ಮಾಳನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾ ಅಪರಾಧ ದಳದ ಡಿಸಿಪಿ ವಿಷ್ಣುವರ್ಧನ ಹಾಗೂ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ

By suddi9

Leave a Reply

Your email address will not be published. Required fields are marked *