ಮೈಸೂರು: ರಮ್ಯಾಗೆ ಯಾರೂ ಬೇಕಿಲ್ಲ. ಉಸ್ತುವಾರಿ ಸಚಿವರೂ ಅವರಿಗೆ ಲೆಕ್ಕಕ್ಕಿಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಜತೆ ಚೆನ್ನಾಗಿರುವುದರಿಂದ ಇವರೆನ್ನೆಲ್ಲ ಕಟ್ಟಿಕೊಂಡು ನಮಗೇನು ಎಂಬ ಭಾವನೆ ಅವರಲ್ಲಿ ಇರಬಹುದು ಎಂದು ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು ರಮ್ಯಾ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಂಸದರ ನಿಧಿಯಿಂದ ರಮ್ಯಾ ಬಿಡಿಗಾಸೂ ಬಿಡುಗಡೆ ಮಾಡಿಲ್ಲ. ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಅವರು ಶ್ರೀರಂಗಪಟ್ಟಣಕ್ಕೆ ಬಂದಿದ್ದಾಗ ರಮ್ಯಾ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು.
ಈ ಹಿನ್ನೆಲೆಯಲ್ಲಿ ರಮ್ಯಾ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿಲ್ಲ ಮತ್ತು ಮತಯಾಚನೆಯನ್ನೂ ಮಾಡಿಲ್ಲ. ರಮ್ಯಾ ಒಂದು ರೀತಿಯಲ್ಲಿ ಉದ್ಧಟತನದ ವರ್ತನೆ ತೋರಿಸುತ್ತಿದ್ದಾರೆ ಎಂದು ಅಂಬಿ ಬಣ ಗರಂ ಆಗಿದೆ. ನಮಗೆ ಪಕ್ಷ ಮುಖ್ಯ. ಅಭ್ಯರ್ಥಿ ಮುಖ್ಯ ಅಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಅಂಬರೀಷ್ ಮತದಾರರಿಗೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

