ಬಂಟ್ವಾಳ: ಕೆಲಸಕ್ಕೆ ಹೋದ ಯುವತಿಯೊರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಲೊರೆಟ್ಟೋ ಪದವಿನ ಬಾರೆಬೆಟ್ಟು ನಿವಾಸಿ ಅಲಿವಮಾ ಅವರ ಮಗಳು ನೆಬಿಸತ್ತುಲ್ ಮಿಸ್ರೀಯಾ (21) ಕಾಣೆಯಾಗಿರುವ ಯುವತಿ.
DSC_0521
ನೆಬಿಸತ್ತುಲ್ ಮಿಸ್ರೀಯಾ ಬಿ.ಸಿರೋಡಿನಲ್ಲಿ ವಕೀಲರ ಜೊತೆ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೋದವಳು ವಾಪಾಸು ಮನೆಗೆ ವಾಪಾಸು ಬರದೆ ಕಾಣೆಯಾಗಿರುತ್ತಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಮಗಳು ಮನೆಗೆ ಬರದೆ ತಡವಾಗಿರುವಾಗ ಮೊಬೈಲ್ ಗೆ ಪೊನಾಯಿಸಿದಾಗ ತಾನು ಸ್ನೇಹಿತೆ ಅರ್ಪಿತಳಾ ಜೊತೆ ಇರುವುದಾಗಿ ತಿಳಿಸಿ , ಬೆಳಿಗ್ಗೆ ಮನೆಗೆ ಬರುತ್ತೇನೆಂದು ತಿಳಿಸಿದ್ದಳು. ಬೆಳಿಗ್ಗೆ ತಾಯಿ ಅಲಿಮಮಾ ವಕೀಲರ ಅಪೀಸಿಗೆ ಹೋಗಿ ನೋಡಿದಾಗ ಮಗಳು ಕೆಲಸ ಮಾಡುತ್ತಿದ್ದು ಅವಳನ್ನು ವಿಚಾರಿಸಲು ಹೋದಾಗ ಆಕೆ ಕೆಳಗೆ ಮೋಬೈಲ್ ಚಾರ್ಜರ್ ಇದೆ ಅದನ್ನು ತರುತ್ತೇನೆಂದು ಹೋದವಳು ಮತ್ತೆ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *