ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಹಲವು ಸಮಯದಿಂದ ಪದೇ ಪದೇ ಕಾಡುತ್ತಿದ್ದ ಟ್ರಾಫಿಕ್ ಜ್ಯಾಂ ಸಮಸ್ಯೆ ಇದೀಗ ಇಲ್ಲಿಗೆ ಸಮೀಪದ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಗೆ ವರ್ಗವಣೆಗೊಂಡಿದೆ.
ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಬಸ್ ಚಾಲಕರೊಬ್ಬರು ವಾಹನ ನಿಲ್ಲಿಸಿ ದಿಡೀರ್ ಪ್ರತಿಭಟನೆ ನಡೆಸಿದ ಪರಿಣಾಮ ಆರು ತಾಸುಗಳ ಕಾಲ ಹೆದ್ದಾರಿಯಲ್ಲಿ ಭಾರೀ ಸಂಚಾರ ಅಡಚಣೆಗೆ ಕಾರಣವಾಗಿತ್ತು.

ಇನ್ನೊಂದೆಡೆ ರಿಕ್ಷಾ ಮತ್ತು ಸರ್ಕಾರಿ ಬಸ್ ರಸ್ತೆಯ ನಡುವೆ ಸಿಲುಕಿಕೊಂಡು ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿತ್ತು. ಆರಂಭದಲ್ಲಿ ಸರ್ಕಾರಿ ಬಸ್ ಚಾಲಕರೊಬ್ಬರಿಗೆ ಇಲ್ಲಿನ ಸಂಚಾರಿ ಪೊಲೀಸರು ದಂಡ ವಿಧಿಸುವಂತೆ ರಶೀದಿ ನೀಡಿರುವುದನ್ನು ಪ್ರತಿಭಟಿಸಿ ಬಸ್ಸನ್ನು ಹೆದ್ದಾರಿಯಲ್ಲೇ ನಿಲ್ಲಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು.
ಸಂಚಾರಿ ಪೊಲೀಸರು ಖಾಸಗಿ ಬಸ್ ಚಾಲಕರಿಗೆ ವಿನಾಯಿತಿ ನೀಡಿ ಸರ್ಕಾರಿ ಬಸ್ ಚಾಲಕರಿಗೆ ಮಾತ್ರ ನೋಟೀಸು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿ ಪೊಲೀಸ್ ಸಿಬ್ಬಂದಿ ಜೊತೆಗೆ ಪರಸ್ಪರ ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಹೆದ್ದಾರಿಯಲ್ಲಿ ವಾಹನಗಳ ಸಾಲು ಮತ್ತಷ್ಟು ಉದ್ದಕ್ಕೆ ಬೆಳೆಯಿತು. ಇಲ್ಲಿನ ಸುದೀರ್ಘ ಅವಧಿಯ ಸಂಚಾರ ವ್ಯತ್ಯಯ ಕೆಲಹೊತ್ತು ವಿವಿಧ ವದಂತಿಗಳಿಗೂ ಕಾರಣವಾಯಿತು ಎಮದು ಸ್ಥಳೀಯರು ತಿಳಿಸಿದ್ದಾರೆ.
ಈ ಸುದ್ದಿ ತಿಳಿದು ಬಂಟ್ವಾಳ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್, ಸಂಚಾರಿ ಠಾಣಾಧಿಕಾರಿ ಚಂದ್ರಶೇಖರಯ್ಯ ಮತ್ತಿತರರು ಧಾವಿಸಿ ಬಂದು ಸಂಚಾರ ಅಡಚಣೆ ತೆರವುಗೊಳಿಸಿದರು.
ಪ್ರಯಾಣಿಕರಿಗೆ ತಂಗಲು ಸೂಕ್ತ ಬಸ್ನಿಲ್ದಾಣ ಇಲ್ಲದೆ ಅದೆಷ್ಟೋ ವರ್ಷಗಳು ಸಂದರೂ ಪುರಸಭೆಯಿಂದ ಕನಿಷ್ಟ ಶೆಲ್ಟರ್ ಒದಗಿಸಲೂ ಸಾಧ್ಯವಾಗಿಲ್ಲ. ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ಬಸ್ತಂಗುದಾಣ ನಿಮರ್ಿಸಿಕೊಟ್ಟಿದ್ದರೂ ಅದು ಬಳಕೆಯಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಸಂಚಾರಿ ಪೊಲೀಸ್ ಠಾಣೆಯೂ ಮೆಲ್ಕಾರ್ನ ಬಾಡಿಗೆ ಕಟ್ಟಡವೊಂದರಲ್ಲಿ ಆರಂಭಗೊಂಡಿದ್ದು, ಬಿ.ಸಿ.ರೋಡ್ನ ಸಂಚಾರ ಸಮಸ್ಯೆ ಮೆಲ್ಕಾರ್ನಲ್ಲಿ ಕಾಡತೊಡಗಿದೆ ಎನ್ನುತ್ತಿದ್ದಾರೆ.
ಇಲ್ಲಿನ ಸಂಚಾರ ಸಮಸ್ಯೆಯಿಂದ ಮಂಗಳೂರು, ಪುತ್ತೂರು, ಕೊಣಾಜೆ, ಬಿ.ಸಿ.ರೋಡ್ ಮತ್ತಿತರ ಕಡೆಗೆ ಸಂಚರಿಸುವ ವಾಹನಗಳಿಗೆ ತೊಡಕಾಗುತ್ತಿದೆ. ಒಟ್ಟಿನಲ್ಲಿ ಬಿ.ಸಿ.ರೋಡ್ನ ಸಂಚಾರ ಸಮಸ್ಯೆ ಸಂಚಾರಿ ಠಾಣೆ ಹೊಂದಿರುವ ಮೆಲ್ಕಾರ್ಗೆ ವಗರ್ಾವಣೆಗೊಂಡಿದೆ ಎಂಬ ಮಾತು ಇಲ್ಲಿನ ವಾಹನ ಸವಾರರು ಮತ್ತು ಪ್ರಯಾಣಿಕರಿಂದ ಕೇಳಿ ಬರುತ್ತಿದೆ.
ಮೋಹನ್ ಕೆ.ಶ್ರೀಯಾನ್
