ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಂಘಟನೆ ವತಿಯಿಂದ ‘ಉಜ್ವಲ ಭವಿಷ್ಯಕ್ಕಾಗಿ ಒಂದಾಗೋಣ’ ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ‘ಜನ ಸಂಗಮ-2015’ ಕಾರ್ಯಕ್ರಮ ಪ್ರಯುಕ್ತ ಭಾನುವಾರ ‘ವಿಷನ್ ಎಕ್ಸ್ಪೋ’ ವಸ್ತು ಪ್ರದರ್ಶನ ಕಾರ್ಯಕ್ರಮ ಪರ್ಲಿಯಾದಲ್ಲಿ ನಡೆಯಿತು.
ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ನಂದರಬೆಟ್ಟು ಕಾರ್ಯಕ್ರಮ ಉದ್ಘಾಟಿಸಿ, ಬಿ.ಸಿ.ರೋಡು ವಲಯಾಧ್ಯಕ್ಷ ಇಕ್ಬಾಲ್ ಮದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಮೊಹಮ್ಮದ್ ಶಫಿ, ಸ್ವಾಗತ ಸಮಿತಿ ಅಧ್ಯಕ ಅಬ್ದುಲ್ ರಹಿಮಾನ್ ಪರ್ಲಿಯ, ಪ್ರಮುಖರಾದ ಇಸಾಕ್ ಅದ್ದೇಡಿ, ಸಾಹುಲ್ ಎಸ್.ಎಚ್, ರಿಯಾಝ್ ಮದ್ದ, ಬ್ಯಾರಿ ಫೌಂಡೇಶನ್ ಅಧ್ಯಕ್ಷ ಪಿ.ಎ. ರಹೀಂ ಮತ್ತಿತರರು ಇದ್ದರು.
ಶಾಫಿ ಎಂ.ಆರ್ ಸ್ವಾಗತಿಸಿ, ಅಕ್ಬರಾಲಿ ಪರ್ಲಿಯ ವಂದಿಸಿದರು, ರಹಿಮಾನ್ ಮಠ ಕಾರ್ಯಕ್ರಮ ನಿರೂಪಿಸಿದರು.
