ಬಂಟ್ವಾಳ ತಾಲ್ಲೂಕಿನ ಜೆಸಿಐ ಘಟಕ ವತಿಯಿಂದ ಕೆಂಪುಗುಡ್ಡೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಉಚಿತ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ಜೆಸಿಐ ಅಧ್ಯಕ್ಷ ಲೋಕೇಶ್ ಸುವರ್ಣ, ಅಮ್ಟಾಡಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಪ್ರಮುಖರಾದ ಯತೀಶ್ ಕರ್ಕೇರ , ಮನೋಹರ ನೇರಂಬೋಳು, ಕೃಷ್ಣ, ತಿಲಕ್, ಚರಣ್ ಕಾಯರ್ಮಾರ್, ಸುರೇಂದ್ರ ಕಾಯರ್ಮಾರ್, ರಾಘವ, ಮಾಲತಿ, ದೇಜಮ್ಮ, ಸುಜಾತ ಮತ್ತಿತರರು ಇದ್ದರು.
