ಬೆಂಗಳೂರು: ಬೆಂಗಳೂರುನಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶನಿವಾರ ನಗರ ಪ್ರದಕ್ಷಿಣೆ ಮಾಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

30BN7 (1)

30BN8

30BN7

ಅವರು ಮೇ.30ರಂದು  ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ಗೃಹ ಕಚೇರಿ ಕೃಷ್ಣಾದಿಂದ ಹೊರಟ ಮುಖ್ಯಮಂತ್ರಿ  ಅವರೊಂದಿಗೆ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರೋಷನ್ ಬೇಕ್, ಶಾಸಕರಾದ ಮುನಿರತ್ನ, ಪ್ರಿಯಾಕೃಷ್ಣ ಸೇರಿತಂತೆ ಮತ್ತಿತರ ಸಚಿವರು ಸಾಥ್ ನೀಡಿದ್ದಾರೆ.  ಬೆಂಗಳೂರು ಉತ್ತರ ಭಾಗದಲ್ಲಿರುವ ಯಲಹಂಕ ಮತ್ತು ಧಣಿಸಂದ್ರದ ನಡುವಿನ ಯೋಗೇಶ್ ನಗರಕ್ಕೆ ಭೇಟಿ ನೀಡಿ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ರಾಜಾ ಕಾಲುವೆಯ ಹೂಳೆತ್ತಲು ಅಧಿಕಾರಿಗಳಿ ಸೂಚನೆ ನೀಡಿದ್ದಾರೆ. ನಂತರ ಹೆಬ್ಬಾಳದೆಡೆಗೆ ಪ್ರಯಾಣ ಬೆಳೆಸಿದ ಸಿಎಂ ಅವರು, ಅಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಗಮನಸಿದ್ದಾರೆ. ನಂತರ ಹೆಬ್ಬಾಳದ ಕೆಂಪಾಪುರ ಜಂಕ್ಷನ್ ಬಳಿ ಸ್ಕೈವಾಕ್ ನಿರ್ಮಾಣ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

By Suddi9

Leave a Reply

Your email address will not be published. Required fields are marked *