ಬಂಟ್ವಾಳ ತಾಲ್ಲೂಕಿನ ವಗ್ಗ ಸಮೀಪದ ಕಾಡಬೆಟ್ಟು ಎಂಬಲ್ಲಿ ನಿರ್ಮಾಣಗೊಂಡ ‘ವಿಷ್ಣು ಪ್ರಿಯ ಕ್ಯಾಶ್ಯೂ ಇಂಡಸ್ಟ್ರೀಸ್’ ಸಂಸ್ಥೆಯನ್ನು ಚಿತ್ರನಟಿ ಡಾ.ಭಾರತಿ ವಿಷ್ಣುವರ್ಧನ್ ಅವರು ಭಾನುವಾರ ಸಂಜೆ ಉದ್ಘಾಟಿಸಿದರು.
ಸಂಸ್ಥೆ ಮುಖ್ಯಸ್ಥ ವರದರಾಜ ಪೈ, ಚಿತ್ರನಡ ಅನಿರುದ್ಧ್, ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಉಳಿಪಾಡಿಗುತ್ತು ರಾಜೇಶ ನಾಯ್ಕ್, ಕೆನರಾ ಬ್ಯಾಂಕಿನ ವಿಭಾಗೀಯ ಮೆನೇಜರ್ ವಸಂತ ಶೆಟ್ಟಿ, ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ನರೇಂದ್ರನಾಥ ಕಾಮತ್, ಪಿ.ಜಿನರಾಜ ಅರಿಗ ಮತ್ತಿತರರು ಇದ್ದರು.

