ಬಂಟ್ವಾಳ:ರಾಜ್ಯ ಸರ್ಕಾರವು ‘ನಮ್ಮ ಗ್ರಾಮ ನಮ್ಮ ರಸ್ತೆ’ ಮಾದರಿಯಲ್ಲಿ ಜಪಾನ್ನ ಹಣಕಾಸು ಸಹಭಾಗಿತ್ವದಲ್ಲಿ ಕೈಗೊಳ್ಳುತ್ತಿರುವ ಜಪಾನ್ ಇಂಟರ್ನ್ಯಾಶನಲ್ ಕಮ್ಯುನಿಟಿ ಏಡ್(ಜೈಕಾ) ಯೋಜನೆಯಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 18 ಕಿ.ಮೀ.ರಸ್ತೆಗೆ ಸರ್ವೆ  ಕಾರ್ಯ ಮುಂದುವರಿದಿದೆ.

25btl-jaika
ಜಿಲ್ಲೆಯಲ್ಲಿ ಪ್ರತೀ ಶಾಸಕರಿಗೆ ತಲಾ 18 ಕಿ.ಮೀ.ನಂತೆ ರಸ್ತೆ ಅಭಿವೃದ್ಧಿಗೆ ಈ ಯೋಜನೆಯಡಿ ಅನುದಾನ ನೀಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಬೆಟ್ಟು-ಬೋಳಂತೂರು-ನಾಟಿ ಸಂಪರ್ಕ ರಸ್ತೆ ಸಹಿತ ಕಳ್ಳಿಗೆ, ಕಾವಳಪಡೂರು, ಸರಪಾಡಿ, ನಾವೂರು ರಸ್ತೆ ಅಭಿವೃದ್ಧಿಗೆ ಸೂಚಿಸಿದ್ದಾರೆ. ಇದರಿಂದಾಗಿ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿ ಬೋಳಂತೂರು ಮತ್ತು ಕಳ್ಳಿಗೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆಯಲ್ಲಿ ಸರ್ವೆ ಕಾರ್ಯ ಮುಂದುವರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ

By Suddi9

Leave a Reply

Your email address will not be published. Required fields are marked *