ಬಂಟ್ವಾಳ: ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರೇರಣೆಯಿಂದ ಗಾಂಧಿವಾದಿಯಾಗಿ ಬೆಳೆದು ನಮ್ಮೆಲ್ಲರಿಗೆ ಮಾದರಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಇವರ ನಿಸ್ವಾರ್ಥ ಮತ್ತು ದೂರದ್ರಸ್ಟಿತ್ವದ ಸೇವೆ ನಮ್ಮೆಲ್ಲರಿಗೂ ಶಾಶ್ವತವಾಗಿ ಮನದಾಳದ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದು ಮಾಣಿಲ ಮೋಹನದಾಸ ಸ್ವಾಮೀಜಿ ಹೇಳಿದ್ದಾರೆ.

ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಭಾನುವಾರ ನಡೆದ ಸ್ಥಾಪಕರ ದಿನಾಚರಣೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬ್ಯಾಂಕಿನ ಸ್ಥಾಪಕಾಧ್ಯಕ್ಷ ಡಾ.ಅಮ್ಮೆಂಬಳ ಬಾಳಪ್ಪ ಇವರ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

25btl-balappa 1

25btl-puthali
ಉಪನ್ಯಾಸಕ ಡಾ. ದುಗ್ಗಪ್ಪ ಕಜೆಕಾರ್ ಮಾತನಾಡಿ ಬಾಳಪ್ಪರು ಅಂದು ಇಂತಹ ಸಹಕಾರಿ ಸಂಸ್ಥೆ ರೂಪಿಸುವ ವೇಳೆ ನಿಸ್ವಾರ್ಥ ಮತ್ತು ಸಮಾಜ ಬಗೆಗಿನ ತುಡಿತ ಅವರಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ ಎಂದರು.
ತುಳು ಭಾಷೆ ಬಗ್ಗೆ ಜನರಲ್ಲಿ ಕೀಳರಿಮೆ ದೂರ ಮಾಡಲು ಅಂದು ತುಳು ಪತ್ರಿಕೆ ಪ್ರಕಟಿಸಿ, ಹಿಂದಿ ಶಿಕ್ಷಕರಾಗಿಯೂ ದುಡಿದಿರುವುದನ್ನು ಅವರು ಸ್ಮರಿಸಿಕೊಂಡರು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಅಧ್ಯ್ಷಕ ಡಾ. ಅಣ್ಣಯ್ಯ ಕುಲಾಲ್ ಬ್ಯಾಂಕಿನ ವೆಬ್ಸೈಟ್ ಉದ್ಘಾಟಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ವಿಶ್ವನಾಥ ಕೆ.ಬಿ., ನಿಕಟಪೂರ್ವ ಅಧ್ಯಕ್ಷ ದಯಾನಂದ ಬೆಳ್ಳೂರು, ನಿರ್ದೇಶಕರಾದ ಲೋಕನಾಥ ಡಿ., ವಿಶ್ವನಾಥ, ಪದ್ಮನಾಭ ವಿ., ವಿನಾಯಕ, ಅರುಣ್ ಕುಮಾರ್, ಜನಾರ್ದನ ಬೊಂಡಾಲ, ವಿಜಯ ಕುಮಾರ್, ಹೇಮಂತ್ ಸಾಲ್ಯಾನ್ ಜೆ., ವಾಮನ ಟೈಲರ್, ವಿಜಯಲಕ್ಷ್ಮಿ, ವಿದ್ಯಾ, ಮತ್ತಿತರರು ಇದ್ದರು.
ಇದೇ ವೇಳೆ ಬ್ಯಾಂಕಿನ ಬೆಳವಣಿಗೆಗೆ ಶ್ರಮಿಸಿದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಉಮೇಶ್ ಪಿ.ಕೆ. ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕಿ ಜಯಂತಿ ಸ್ವಾಗತಿಸಿ, ಫರಂಗಿಪೇಟೆ ಶಾಖಾಧಿಕಾರಿ ಮೋಹನ್ ಎನ್.ಕೆ. ವಂದಿಸಿದರು. ಭೋಜ ಮೂಲ್ಯ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *